ಲಾಕ್ ಡೌನ್ ನಿಂದಾಗಿ ಜೀವನ ನಿರ್ವಹಣೆಯಲ್ಲಿ ಕಷ್ಟ ಅನುಭವಿಸುತ್ತಿರುವ ಉಡುಪಿಯ ಪೆರ್ಡೂರು ಪಾಡಿಗಾರ ವ್ಯಾಪ್ತಿಯಲ್ಲಿರುವ ಬಡ ಕುಟುಂಬವೊಂದಕ್ಕೆ ಹಾಗೂ ಉಡುಪಿಯ ಮಂಚಿ ದುಗ್ಲಿಪದವು ವ್ಯಾಪ್ತಿಯಲ್ಲಿರುವ ಕೋವಿಡ್ ಬಾಧಿತ ಎರಡು ಬಡ ಕುಟುಂಬಗಳಿಗೆ ಚೈಲ್ಡ್ ಲೈನ್-1098, ರೋಟರಿ ಉಡುಪಿಯ ಸಹಯೋಗದೊಂದಿಗೆ ಒಂದು ತಿಂಗಳಿಗಾಗುವಷ್ಟು ಆಹಾರ ಸಾಮಗ್ರಿಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ರೋಟರಿ ಅಧ್ಯಕ್ಷೆ ರಾಧಿಕಾ ಲಕ್ಷ್ಮೀನಾರಾಯಣ, ಬಿ.ವಿ.ಲಕ್ಷ್ಮೀನಾರಾಯಣ, ವನಿತಾ ಆರ್. ಉಪಾಧ್ಯಾಯ, ಮುರಳಿಕೃಷ್ಣ ಉಪಾಧ್ಯಾಯ, ಚೈಲ್ಡ್ ಲೈನ್ ಉಡುಪಿ ನಿರ್ದೇಶಕ ರಾಮಚಂದ್ರ ಉಪಾಧ್ಯಾಯ, ಚೈಲ್ಡ್ ಲೈನ್ ನ ಪ್ರಮೋದ್ ಮತ್ತು ವೃಶಾಕ್ ಉಪಸ್ಥಿತರಿದ್ದರು.