Home ಸುದ್ಧಿಗಳು ಪ್ರಾದೇಶಿಕ ಮಾ. 18- ಬೆಳ್ಮಣ್ಣು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆರಾಟ ಮಹೋತ್ಸವ

ಮಾ. 18- ಬೆಳ್ಮಣ್ಣು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆರಾಟ ಮಹೋತ್ಸವ

406
0

ಕಾರ್ಕಳ: ಇತಿಹಾಸ ಪ್ರಸಿದ್ಧ ಬೆಳ್ಮಣ್ಣು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವವು ಮಾರ್ಚ್ 14ರಿಂದ ಮಾರ್ಚ್ 21ರವರೆಗೆ ಜರಗಲಿದೆ. ಮಾರ್ಚ್ 14ರಂದು ಸೋಮವಾರ ಮೀನ ಸಂಕ್ರಮಣದಂದು ಬೆಳಿಗ್ಗೆ ಧ್ವಜಾರೋಹಣ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಶ್ರೀ ಕ್ಷೇತ್ರದ ಆಡಳಿತ ಮೊಕ್ತೇಸರರಾದ ವೇದಮೂರ್ತಿ ಬಿ.ಕೆ. ವಿಘ್ನೇಶ್ ಭಟ್ ಅವರ ನೇತೃತ್ವದಲ್ಲಿ ಧ್ವಜಾರೋಹಣಗೊಂಡು ಜಾತ್ರೋತ್ಸವ ಪ್ರಾರಂಭಗೊಂಡಿತು.

ಮಾರ್ಚ್ 15ರಂದು ಮಂಗಳವಾರ ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ, ಸಂಜೆಯಿಂದ 3 ದಿನಗಳ ಕಾಲ ಅಬ್ಬನಡ್ಕ ಚೆಂಡು ಆರಂಭ, ರಾತ್ರಿ ಊರ ಆಯನ, ತಪ್ಪಂಗಾಯಿ ಬಲಿ ಮಾರ್ಚ್ 16ರಂದು ಬುಧವಾರ ಮಧ್ಯಾಹ್ನ
ಮಹಾಪೂಜೆ, ಅನ್ನಸಂತರ್ಪಣೆ, ರಾತ್ರಿ ಮೂಡು ಸವಾರಿ ಉತ್ಸವ, ಅಬ್ಬನಡ್ಕದಲ್ಲಿ ಕಟ್ಟೆಪೂಜೆ, ಮಾರ್ಚ್ 17ರಂದು ಗುರುವಾರ ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ, ರಾತ್ರಿ ಸಿರಿಭೂತಬಲಿ, ಕವಾಟ ಬಂಧನ, ಶಯನಪೂಜೆ
ಮಾರ್ಚ್ 18ರಂದು ಶುಕ್ರವಾರ ಬೆಳಿಗ್ಗೆ ತುಲಾಭಾರ ಸೇವೆ, ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ, ಆರಾಟ ಮಹೋತ್ಸವ, ಅವಭೃತೋತ್ಸವ ಮಾಚ್ 19ರಂದು ಶನಿವಾರ ಬೆಳಿಗ್ಗೆ ಧ್ವಜಾವರೋಹಣ, ಮಾರ್ಚ್ 20ರಂದು ಆದಿತ್ಯವಾರ ಬೆಳಿಗ್ಗೆ ಶತರುದ್ರಾಭಿಷೇಕ, ಮಧ್ಯಾಹ್ನ ಮಹಾಪೂಜೆ, ಮಾರಿ ಸಮಾರಾಧನೆ, ಪಲ್ಲಪೂಜೆ, ಅನ್ನಸಂತರ್ಪಣೆ, ರಾತ್ರಿ ಮಹಾರಂಗಪೂಜೆ, ಮಾರ್ಚ್ 21ರಂದು ಸೋಮವಾರ ರಾತ್ರಿ ಪಂಚದೈವಗಳ ನೇಮೋತ್ಸವ ಜರಗಲಿದೆ ಎಂದು ಶ್ರೀ ಕ್ಷೇತ್ರದ ಆಡಳಿತ ಮೊಕ್ತೇಸರರಾದ ವೇ.ಮೂ.ಬಿ.ಎಂ.ಕೃಷ್ಣ ಭಟ್ ಮತ್ತು ವೇ.ಮೂ.ಬಿ.ಕೆ.ವಿಘ್ನೇಶ್ ಭಟ್‌ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.