ಧರ್ಮಶಾಲಾ: ಇಂದು ಶ್ರೀಲಂಕಾ ವಿರುದ್ಧ ನಡೆದ ಮೂರು ಪಂದ್ಯಗಳ ಸರಣಿಯ ಎರಡನೇ ಟಿ20 ಪಂದ್ಯದಲ್ಲಿ ಭಾರತ 7 ವಿಕೆಟ್ಗಳ ಗೆಲುವಿನೊಂದಿಗೆ ಸರಣಿ ಗೆಲುವಿನ ಸವಿಯನ್ನು ಕಂಡಿದೆ.
ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ರೋಹಿತ್ ಶರ್ಮಾ ಪಡೆಯ ಬೌಲಿಂಗ್ ನ್ನು ಶ್ರೀಲಂಕಾ ಧೂಳೀಪಟ ಮಾಡಿತು. ನಿಸಂಕಾ-ಗುಣತಿಲಕ ಜೋಡಿ ಭರ್ಜರಿ ಬ್ಯಾಟಿಂಗ್ ನಡೆಸಿ ಭಾರತೀಯ ಬೌಲರ್ ಗಳನ್ನು ಮನಸೋಇಚ್ಛೆ ದಂಡಿಸಿದರು. ನಿಸಂಕಾ 75 ರನ್ ಗಳಿಸಿದರೆ, ಗುಣತಿಲಕ 38 ರನ್ ಗಳಿಸಿದರು.
20 ಓವರ್ ಗಳಲ್ಲಿ ಲಂಕಾ 5 ವಿಕೆಟ್ ನಷ್ಟಕ್ಕೆ 183 ರನ್ ಗಳಿಸಿ ಭಾರತಕ್ಕೆ ಕಠಿಣ ಸವಾಲನ್ನು ನೀಡಿತು. ಆರಂಭಿಕ ಆಘಾತ ಎದುರಿಸಿದರೂ ಬಳಿಕ ಪುಟಿದೆದ್ದ ಭಾರತಕ್ಕೆ ಶ್ರೇಯಸ್ ಅಯ್ಯರ್, ಸಂಜು ಸ್ಯಾಮ್ಸನ್, ರವೀಂದ್ರ ಜಡೇಜಾ ಸ್ಪೋಟಕ ಆಟ ವರದಾನವಾಯಿತು.
44 ಎಸೆತಗಳನ್ನು ಎದುರಿಸಿದ ಅಯ್ಯರ್ ಅಜೇಯ 74 ರನ್ ಗಳಿಸಿದರೆ, ಜಡೇಜಾ ಕೇವಲ 18 ಎಸೆತಗಳಲ್ಲಿ ಅಜೇಯ 45 ರನ್ ಗಳಿಸಿದರು. ಸ್ಯಾಮ್ಸನ್ 39 ರನ್ ಗಳಿಸಿದರು. ಕೇವಲ 17.1 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ ಭಾರತ ಗೆಲುವಿನ ಗುರಿಯನ್ನು ದಾಟಿ ಸರಣಿಯನ್ನು ಗೆದ್ದುಕೊಂಡಿದೆ.