ಚ್ಯಾಂಪಿಯನ್ ಆಟಗಾರ ರಫಾಯಲ್ ನಡಾಲ್ ಫ್ರೆಂಚ್ ಓಪನ್ ಟೆನ್ನಿಸ್ ಪಂದ್ಯಾವಳಿಯ ಸೆಮಿಫೈನಲ್ ಪ್ರವೇಶಿಸಿದ್ದಾರೆ. ಬುಧವಾರ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಅರ್ಜೆಂಟೀನಾದ ಡಿಗೊ ಶ್ವಾರ್ಟ್ಸ್ಮನ್ ವಿರುದ್ಧ ನಡಾಲ್ 6-3, 4-6, 6-4, 6-0 ಸೆಟ್ ಗಳ ಮೂಲಕ ಜಯಗಳಿಸಿದರು. ರೋಚಕವಾಗಿ ಪರಿಣಮಿಸಿದ ಈ ಪಂದ್ಯವು ಬರೋಬ್ಬರಿ 2 ಗಂಟೆ 45 ನಿಮಿಷಗಳ ಕಾಲ ಸಾಗಿತು. 35ರ ಹರೆಯದ ಸ್ಪೈನ್ ದೇಶದ ಖ್ಯಾತ ಟೆನಿಸ್ ತಾರೆ ರಫಾಯಲ್ ನಡಾಲ್ ಈ ಬಾರಿಯೂ ಫ್ರೆಂಚ್ ಓಪನ್ ಗ್ರಾಂಡ್ ಸ್ಲಾಂ ಕಿರೀಟವನ್ನು ಮುಡಿಗೇರಿಸುವ ವಿಶ್ವಾಸದಲ್ಲಿದ್ದಾರೆ.
ಫ್ರೆಂಚ್ ಓಪನ್: ಸೆಮಿ ಪ್ರವೇಶಿಸಿದ ನಡಾಲ್
ಫ್ರೆಂಚ್ ಓಪನ್: ಸೆಮಿ ಪ್ರವೇಶಿಸಿದ ನಡಾಲ್
Date: