Tuesday, December 3, 2024
Tuesday, December 3, 2024

ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌: ಭಾರತಕ್ಕೆ ಪದಕಗಳ ಸರಮಾಲೆ

ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌: ಭಾರತಕ್ಕೆ ಪದಕಗಳ ಸರಮಾಲೆ

Date:

ಯು.ಬಿ.ಎನ್.ಡಿ, ಸೆ.2: ಪ್ಯಾರಿಸ್ ಪ್ಯಾರಾಲಿಂಪಿಕ್ಸ್ 2024 ರಲ್ಲಿ, ಪ್ಯಾರಾ ಷಟ್ಲರ್ ನಿತೇಶ್ ಕುಮಾರ್ ಪುರುಷರ ಸಿಂಗಲ್ಸ್ ಎಸ್‌ಎಲ್ 3 ವರ್ಗದ ಪದಕದ ಪಂದ್ಯದಲ್ಲಿ ಗ್ರೇಟ್ ಬ್ರಿಟನ್‌ನ ಡೇನಿಯಲ್ ಬೆಥೆಲ್ ಅವರನ್ನು 21-14, 18-21, 23-21 ರಿಂದ ಸೋಲಿಸಿ ತಮ್ಮ ಮೊದಲ ಚಿನ್ನದ ಪದಕವನ್ನು ಪಡೆದರು.

ಭಾರತದ ಪ್ಯಾರಾ ಅಥ್ಲೀಟ್ ಪ್ರೀತಿ ಪಾಲ್ ಅವರು ಮಹಿಳೆಯರ 200 ಮೀಟರ್ – T35 ಫೈನಲ್‌ನಲ್ಲಿ ಕಂಚಿನ ಪದಕವನ್ನು ಗೆದ್ದಿದ್ದಾರೆ. ಅವರು 30.01 ಸೆಕೆಂಡ್‌ಗಳ ವೈಯಕ್ತಿಕ ಅತ್ಯುತ್ತಮ ಟೈಮಿಂಗ್‌ನೊಂದಿಗೆ ಪದಕ ಗೆದ್ದರು. ಈ ಗೆಲುವಿನೊಂದಿಗೆ, ಪ್ಯಾರಾಲಿಂಪಿಕ್ಸ್‌ನಲ್ಲಿ ಎರಡು ಪದಕಗಳನ್ನು ಗೆದ್ದ ಮೊದಲ ಟ್ರ್ಯಾಕ್ ಮತ್ತು ಫೀಲ್ಡ್ ಭಾರತೀಯ ಮಹಿಳಾ ಪ್ಯಾರಾ ಅಥ್ಲೀಟ್ ಎನಿಸಿಕೊಂಡರು. ಮತ್ತೊಂದೆಡೆ, ಭಾರತದ ಅಥ್ಲೀಟ್ ನಿಶಾದ್ ಕುಮಾರ್ ಕೂಡ ಪುರುಷರ ಹೈ ಜಂಪ್-ಟಿ 47 ಸ್ಪರ್ಧೆಯಲ್ಲಿ 2.04 ಮೀಟರ್ ಪ್ರಯತ್ನದಲ್ಲಿ ಬೆಳ್ಳಿ ಪದಕ ಗೆದ್ದರು. ಪುರುಷರ ಡಿಸ್ಕಸ್ ಥ್ರೋ F56 ಫೈನಲ್‌ನಲ್ಲಿ ಯೋಗೇಶ್ ಕಥುನಿಯಾ ಬೆಳ್ಳಿ ಗೆದ್ದರು. ತನ್ಮೂಲಕ, ಭಾರತದ ಪದಕಗಳ ಸಂಖ್ಯೆ ಒಂಬತ್ತಕ್ಕೇರಿದೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಸ್ನೇಹಿತರ ಬಳಗದಿಂದ ಭಾಸ್ಕರ್ ಶೆಟ್ಟಿ ಅವರಿಗೆ ಸನ್ಮಾನ

ಗಂಗೊಳ್ಳಿ, ಡಿ.3: ಉತ್ತಮ ಸ್ನೇಹಿತರನ್ನು ಹೊಂದುವುದು ಜೀವನದಲ್ಲಿ ನಾವು ಮಾಡುವ ಅತಿ...

ಚಂಡಮಾರುತ ಪ್ರಭಾವ: ಮುಂದಿನ ಎರಡು ದಿನಗಳ ಕಾಲ ಭಾರಿ ಗಾಳಿ, ಮಳೆ ಮುನ್ಸೂಚನೆ

ಉಡುಪಿ, ಡಿ.2: ಭಾರತೀಯ ಹವಾಮಾನ ಇಲಾಖೆ / ಕರ್ನಾಟಕ ರಾಜ್ಯ ನೈಸರ್ಗಿಕ...
error: Content is protected !!