Home ಸುದ್ಧಿಗಳು ಅಂತರಾಷ್ಟ್ರೀಯ ಅಮೆರಿಕಾದ ಅಟ್ಲಾಂಟಾದಲ್ಲಿ ಶ್ರೀಕೃಷ್ಣ ಮಂದಿರಕ್ಕೆ ಭೂಮಿಪೂಜೆ

ಅಮೆರಿಕಾದ ಅಟ್ಲಾಂಟಾದಲ್ಲಿ ಶ್ರೀಕೃಷ್ಣ ಮಂದಿರಕ್ಕೆ ಭೂಮಿಪೂಜೆ

1016
0

ಅಟ್ಲಾಂಟ, ನ.7: ವಿಶ್ವದಾದ್ಯಂತ ಶ್ರೀಕೃಷ್ಣಭಕ್ತಿ ಪ್ರಸಾರ ದೀಕ್ಷೆಯನ್ನು ಹೊಂದಿರುವ ಪುತ್ತಿಗೆ ಶ್ರೀಪಾದರು ಅಮೇರಿಕಾದ ಅಟ್ಲಾಂಟಾ ನಗರದಲ್ಲಿ ಬೃಹತ್ ಶ್ರೀಕೃಷ್ಣ ಮಂದಿರ ನಿರ್ಮಾಣಕ್ಕಾಗಿ ಖರೀದಿಸಿರುವ 6 ಎಕ್ರೆ ಜಾಗದಲ್ಲಿ ಭೂಮಿ ಪೂಜೆಯನ್ನು ನೆರವೇರಿಸಿದರು. ಈ ಜಾಗದಲ್ಲಿ ಬೃಹತ್ ಶ್ರೀಕೃಷ್ಣ ಮಂದಿರ ನಿರ್ಮಾಣವಾಗಲಿದ್ದು, ತಾವು ಉಡುಪಿ ಶ್ರೇಕೃಷ್ಣನ ಪರ್ಯಾಯ ಮುಗಿಸಿ ಮರಳಿ ಬರುವಷ್ಟರಲ್ಲಿ ಶ್ರೀಕೃಷ್ಣ ಪ್ರತಿಷ್ಠೆಯ ಮೂಲಕ ಮಂದಿರದ ವಿದ್ಯುಕ್ತ ಉದ್ಘಾಟನೆಯ ಸಂಕಲ್ಪವನ್ನು ಇಲ್ಲಿಯ ಭಕ್ತಜನತೆ ಇರಿಸಿಕೊಂಡಿದ್ದಾರೆ.

ಸಂಕಲ್ಪಿತ ಶ್ರೀಕೃಷ್ಣ ಮಂದಿರದ ಗರ್ಭಗುಡಿಯ ಕೆಳಗೆಡೆ 700 ಶ್ಲೋಕಗಳನ್ನು ಕೆತ್ತಿಸಿದ ಇಟ್ಟಿಗೆಗಳನ್ನು ಭಕ್ತರ ಹೆಸರಿನಲ್ಲಿ ಇರಿಸಲಾಗುವುದು. ತನ್ಮೂಲಕ ಶ್ರೀಗಳ ಕೋಟಿಗೀತಾ ಲೇಖನ ಯೋಜನೆಯ ಸ್ಮಾರಕವಾಗಿ ಅಮೇರಿಕಾದಲ್ಲಿ ಈ ಮಂದಿರ ಮೂಡಿಬರಲಿದೆ. ಶ್ರೀಗಳು ಅಮೇರಿಕಾದಲ್ಲಿ ಸ್ಥಾಪಿಸಿರುವ 11 ಮಠಗಳಲ್ಲಿ ಇದು ಆರನೆಯ ಶಾಖಾ ಮಠವಾಗಿದ್ದು ಇದೀಗ ಸಣ್ಣ ಜಾಗದಲ್ಲಿ ಕಾರ್ಯನಿರ್ವಹಿಸುತ್ತಿದೆ. ಭೂಮಿ ಪೂಜೆಯ ವೈದಿಕ ಕಾರ್ಯಕ್ರಮಗಳನ್ನು ಉಡುಪಿಯ ಹೆರ್ಗ ವೇದವ್ಯಾಸ ಭಟ್ ರವರು ನೆರವೇರಿಸಿದರು.

ಮಠದ ಪ್ರಧಾನ ಅರ್ಚಕರಾದ ಜಯಪ್ರಸಾದ್ ಅಮ್ಮಣ್ಣಾಯ ಮುಂದಾಳತ್ವದಲ್ಲಿ ನಡೆಯುತ್ತಿರುವ ಈ ಯೋಜನೆಯ ವಿವರವನ್ನು ಪ್ರಧಾನ ಕಾರ್ಯದರ್ಶಿ ಪ್ರಸನ್ನಾಚಾರ್ಯ ವಿವರಿಸಿದರು. ವಿದ್ವಾನ್ ಕೇಶವ ರಾವ್ ತಡಿಪಾತ್ರಿ, ಬಾಲಕೃಷ್ಣ ಭಟ್, ಹರೀಶ್ ಭಟ್, ಅಜಯ್, ಮುರಳಿ, ಶ್ರೀಕಾಂತ್, ಮುಂತಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.