Home ಕ್ರೈಂ ನ್ಯೂಸ್ ಡೆಲಿವರಿ ಸಿಬ್ಬಂದಿಯ ಬ್ಯಾಗ್ ಕದ್ದು ಸಿಕ್ಕಿ ಬಿದ್ದ

ಡೆಲಿವರಿ ಸಿಬ್ಬಂದಿಯ ಬ್ಯಾಗ್ ಕದ್ದು ಸಿಕ್ಕಿ ಬಿದ್ದ

483
0

ಕೋಲ್ಕತಾ: ಡೆಲಿವರಿ ಸಿಬ್ಬಂದಿಯ ಬ್ಯಾಗಿನೊಳಗಿದ್ದ ರೂ. ಹತ್ತು ಸಾವಿರ ಮೌಲ್ಯದ ವಸ್ತುಗಳನ್ನು ಕಳವು ಮಾಡಿದ ಘಟನೆ ಪಶ್ಚಿಮ ಬಂಗಾಳದ ಕೋಲ್ಕತಾದಲ್ಲಿ ನಡೆದಿದೆ.

ಘಟನೆಗೆ ಸಂಬಂಧಿಸಿದಂತೆ ಸಿಸಿಟಿವಿ ಫೂಟೆಜ್ ಆಧರಿಸಿ 19 ವರ್ಷ ಪ್ರಾಯದ ರಾಬಿ ಸಹಾನನ್ನು ಚಾರು ಮಾರ್ಕೆಟ್ ಪೊಲೀಸರು ಬಂಧಿಸಿದ್ದಾರೆ.

ಡೆಲಿವರು ಸಿಬ್ಬಂದಿ ತನ್ನ ದ್ವಿಚಕ್ರ ವಾಹನ ಪಾರ್ಕ್ ಮಾಡಿ ಅಲ್ಲೇ ಇದ್ದ ಮನೆಯೊಂದಕ್ಕೆ ಪಾರ್ಸೆಲ್ ನೀಡಲು ತೆರಳಿದಾಗ ಹೊಂಚು ಹಾಕಿ ಕುಳಿತಿದ್ದ ರಾಬಿ ಸಹಾ, ಬೈಕ್ ನಲ್ಲಿದ್ದ ದೊಡ್ದ ಬ್ಯಾಗಿನೊಳಗಿನಿಂದ ಸಿಕ್ಕಿದಷ್ಟು ದೋಚಿಕೊಂಡು ಪರಾರಿಯಾದ.

ಬ್ಯಾಗ್ ನೊಳಗಿದ್ದ ವಸ್ತುಗಳು ಕಳವಾಗಿರುವ ಬಗ್ಗೆ ಡೆಲಿವರಿ ಸಿಬ್ಬಂದಿ ರಾಜ ಸಹಾ ದೂರು ನೀಡಿದ್ದು, ತಕ್ಷಣ ಕಾರ್ಯಪ್ರ‍ವೃತ್ತರಾದ ಪೊಲೀಸರು ಬ್ಯಾಗ್ ಕದ್ದವನನ್ನು ಬಂಧಿಸಿದ್ದಾರೆ.

ಇದೇ ರೀತಿ ಹಲವಾರು ಡೆಲಿವರಿ ಸಿಬ್ಬಂದಿಗಳ ವಸ್ತುಗಳನ್ನು ಕಳವು ಮಾಡಿರುವ ಸಾಧ್ಯತೆಯಿದೆ ಎಂದು ಪೊಲೀಸರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.