ಉಡುಪಿ, ನ.19: ಶ್ರೀ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜು ಉಡುಪಿಯ ವಾಣಿಜ್ಯ ಸಂಘದ ವತಿಯಿಂದ ‘ಅರೋಮ 4.O’ ಆಹಾರ ಮೇಳವು ನಡೆಯಿತು. ಆಹಾರ ಮೇಳದ ಉದ್ಘಾಟನೆಯನ್ನು ಯೂಟ್ಯೂಬರ್ ಪ್ರಜ್ವಲ್ ಶೆಟ್ಟಿ ಉದ್ಘಾಟಿಸಿದರು. ಪಿಪಿಸಿ ಸಂಧ್ಯಾ ಕಾಲೇಜಿನ ಆಡಳಿತ ಮಂಡಳಿಯ ಕಾರ್ಯದರ್ಶಿ ಸಿಎ ಟಿ ಪ್ರಶಾಂತ್ ಹೊಳ್ಳ ಮುಖ್ಯ ಅತಿಥಿಯಾಗಿ ಭಾಗವಹಿಸಿ ವಿದ್ಯಾರ್ಥಿಗಳ ಕ್ರೀಯಾಶೀಲತೆಯನ್ನು ಶ್ಲಾಘಿಸಿದರು. ಪಿಪಿಸಿ ಸಂಧ್ಯಾ ಕಾಲೇಜಿನ ಪ್ರಾಂಶುಪಾಲರಾದ ಡಾ. ಚಂದ್ರಕಾಂತ್ ಭಟ್, ಡಾ. ನಿತ್ಯಾನಂದ, ವಾಣಿಜ್ಯ ವಿಭಾಗದ ಮುಖ್ಯಸ್ಥ ವಿನಾಯಕ ಪೈ, ಐಕ್ಯಾಎಸಿ ಸಂಯೋಜಕರಾದ ಡಾ. ರಾಘವೇಂದ್ರ ಎಲ್, ಕಾರ್ಯಕ್ರಮದ ಸಂಯೋಜಕರಾದ ದಿನೇಶ್ ಆರ್ ಮತ್ತು ವಾಣಿಜ್ಯ ಸಂಘದ ವಿದ್ಯಾರ್ಥಿ ಪ್ರತಿನಿಧಿ ಅವನಿ ಆಚಾರ್ಯ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು. ಧೀರಜ್ ಸ್ವಾಗತಿಸಿ, ಅವನಿ ವಂದಿಸಿದರು. ರಾನಿಯಾ ಕಾರ್ಯಕ್ರಮ ನಿರೂಪಿಸಿದರು.
ವ್ಯವಹಾರದ ಪ್ರಾಯೋಗಿಕ ಜ್ಞಾನ ನೀಡುವ ನಿಟ್ಟಿನಲ್ಲಿ ಆಯೋಜಿಸಿದ ಆಹಾರ ಮೇಳದಲ್ಲಿ 12 ಮಳಿಗೆಗಳಲ್ಲಿ 200 ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಪಾರ ನಡೆಸಿದರು. ವಿದ್ಯಾರ್ಥಿಗಳು ಬಗೆ ಬಗೆಯ ಖಾದ್ಯ,ತಂಪು ಪಾನೀಯ,ಐಸ್ ಕ್ರೀಮ್ ಗಳನ್ನು ವ್ಯಾಪಾರಮಾಡಿ ಗಮನ ಸೆಳೆದರು. ಒಂದು ದಿನದ ಆಹಾರ ಮೇಳದಲ್ಲಿ ಸುಮಾರು ಎರಡು ಲಕ್ಷ ವಹಿವಾಟು ನಡೆಯಿತು ಮತ್ತು 2000 ಕ್ಕೂ ಮಿಕ್ಕಿ ಗ್ರಾಹಕರು ಭಾಗವಹಿಸಿದರು.




By
ForthFocus™