ಉಡುಪಿ, ಅ.9: ಮಹಾತ್ಮಾ ಗಾಂಧಿ ಸ್ಮಾರಕ ಸಂಧ್ಯಾ ಕಾಲೇಜಿನಲ್ಲಿ ಸಾಹಿತ್ಯ ವೇದಿಕೆಯ ಉದ್ಘಾಟನಾ ಸಮಾರಂಭ ಬುಧವಾರ ಟಿ. ಮೋಹನದಾಸ್ ಪೈ ಅಮೃತ ಸೌಧ ,ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಚಾರ್ಯರಾದ ಡಾ. ದೇವಿದಾಸ ಎಸ್. ನಾಯಕ್ ಮಾತನಾಡುತ್ತಾ, ಸೃಜನಾತ್ಮಕ ಚಿಂತನೆಗೆ, ಭಾಷಾ ಅಭಿವ್ಯಕ್ತಿಗೆ ಮತ್ತು ಮಾನವೀಯ ಮೌಲ್ಯಗಳ ಅರಿವಿಗೆ ದಾರಿ ತೆಗೆಯುವ ವೇದಿಕೆ.ಸಾಹಿತ್ಯವುನಮ್ಮ ಮನಸ್ಸಿಗೆ ನವ ಚೈತನ್ಯ ನೀಡುತ್ತದೆ. ಅದು ಬದುಕನ್ನು ಹೇಗೆ ನೋಡುವುದು, ಹೇಗೆ ಅರ್ಥಮಾಡಿಕೊಳ್ಳುವುದು ಎಂಬುದನ್ನು ಕಲಿಸುತ್ತದೆ ಎಂದರು.
ಮುಖ್ಯ ಅತಿಥಿ ಅಜ್ಜರಕಾಡಿನ ಡಾ.ಜಿ. ಶಂಕರ್ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕಿ ಡಾ. ನಿಕೇತನ ಅವರು, ವಿದ್ಯಾರ್ಥಿಗಳಿಗೆ ಸಾಹಿತ್ಯದ ಪ್ರಾಮುಖ್ಯತೆ, ಓದಿನ ಸಂಸ್ಕೃತಿ ಮತ್ತು ರಚನಾತ್ಮಕ ಚಿಂತನೆಯ ಅಗತ್ಯತೆಯ ಕುರಿತು ಉಪನ್ಯಾಸ ನೀಡಿದರು. ಸಾಹಿತ್ಯ ವೇದಿಕೆ ನಮ್ಮೊಳಗಿನ ಕವಿ, ಲೇಖಕ, ಚಿಂತಕ,ವಿಮರ್ಶಕನನ್ನು ಅರಿಯುವ ಅವಕಾಶ. ಇಂತಹ ವೇದಿಕೆಗಳು ನಮ್ಮ ವಿದ್ಯಾರ್ಥಿಗಳಲ್ಲಿ ಓದುವ ಆಸಕ್ತಿ, ಬರೆಯುವ ಕೌಶಲ್ಯ ಮತ್ತುಮಾತಿನ ಮಾದರಿಯನ್ನು ಬೆಳೆಸುತ್ತವೆ. ವ್ಯಕ್ತಿತ್ವದ ಸರ್ವಾಂಗೀಣ ಬೆಳವಣಿಗೆಗೆ ಸಾಹಿತ್ಯ ಸಹಕಾರಿಯಾಗುತ್ತದೆ ಎಂದರು.
ವೇದಿಕೆಯಲ್ಲಿ ಸಾಹಿತ್ಯ ವೇದಿಕೆ ಕಾರ್ಯದರ್ಶಿ ಅನುಪಮ ಹೆಚ್ ನಾಯ್ಕ್ ಉಪಸ್ಥಿತರಿದರು. ಕಾರ್ಯಕ್ರಮದ ಸಂಯೋಜಕಿ ಕನ್ನಡ ವಿಭಾಗದ ಉಪನ್ಯಾಸಕಿ ದೀಪಿಕಾ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಭಾರ್ಗವ್ ಅತಿಥಿಗಳನ್ನು ಪರಿಚ್ಯಿಸಿದರು. ಕನ್ನಡ ಉಪನ್ಯಾಸಕಿ ಅಕ್ಷತ ಎಂ ಜಿ ವಂದಿಸಿದರು. ದಿಶಾ ರಾವ್ ಕಾರ್ಯಕ್ರಮ ನಿರೂಪಿಸಿದರು.




By
ForthFocus™