Friday, February 27, 2026
Friday, February 27, 2026

ನಳಿನಶ್ರೀ ಆರ್ ಎನ್ ರವರಿಗೆ ಪಿ.ಹೆಚ್.ಡಿ

ನಳಿನಶ್ರೀ ಆರ್ ಎನ್ ರವರಿಗೆ ಪಿ.ಹೆಚ್.ಡಿ

Date:

ಉಡುಪಿ, ಸೆ.11: ಸರಕಾರಿ ಪ್ರಥಮ ದರ್ಜೆ ಕಾಲೇಜು ಶಂಕರನಾರಾಯಣ ಇಲ್ಲಿನ ಅರ್ಥಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿರುವ ನಳಿನಶ್ರೀ ಆರ್ ಎನ್ “ಕರ್ನಾಟಕದಲ್ಲಿ ಕೃಷಿ ಕುಟುಂಬಗಳ ಜೀವನೋಪಾಯ ಭದ್ರತೆ ಮತ್ತು ಸಂತೋಷ ಸೂಚ್ಯಂಕ: ಆರ್ಥಿಕ ವಿಶ್ಲೇಷಣೆ”ಎಂಬ ವಿಷಯದ ಬಗ್ಗೆ ಡಾ. ಕೆ ಬಿ ಉಮೇಶ್, ವಿಶ್ರಾಂತ ಸಂಶೋಧನಾ ನಿರ್ದೇಶಕರು, ಪ್ರಾಧ್ಯಾಪಕರು ಮತ್ತು ವಿಶ್ವವಿದ್ಯಾನಿಲಯದ ಮುಖ್ಯಸ್ಥರು (ನಿ), ಕೃಷಿ ಅರ್ಥಶಾಸ್ತ್ರ ವಿಭಾಗ, ಕೃಷಿ ವಿಶ್ವವಿದ್ಯಾನಿಲಯ, ಗಾಂಧಿ ಕೃಷಿ ವಿಜ್ಞಾನ ಕೇಂದ್ರ, ಬೆಂಗಳೂರು ಇವರ ಮಾರ್ಗದರ್ಶನದಲ್ಲಿ ಮಂಡಿಸಿದ ಮಹಾಪ್ರಬಂಧಕ್ಕೆ ಡಾಕ್ಟರೇಟ್ ಪದವಿ ಪಡೆದಿರುತ್ತಾರೆ. ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ 59 ನೇ ಘಟಿಕೋತ್ಸವದಲ್ಲಿ ಡಾಕ್ಟರೇಟ್ ಪದವಿ ಪ್ರಧಾನ ಮಾಡಲಾಯಿತು. ಇವರು ಯುಜಿಸಿ ನೆಟ್, ASRB NET ಮತ್ತು ಪಿ ಹೆಚ್ ಡಿ ಸಂಶೋಧನೆಗೆ ಯುಜಿಸಿ ನೀಡುವ ಜೆ.ಆರ್.ಎಫ್ ಫೆಲೋಶಿಪ್ ಅನ್ನು ಪಡೆದಿರುತ್ತಾರೆ. 15 ಕ್ಕಿಂತ ಹೆಚ್ಚು ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣ, ಸಮ್ಮೇಳನ ಮತ್ತು ತರಬೇತಿಗಳಲ್ಲಿ ಭಾಗವಹಿಸುರುತ್ತಾರೆ ಮತ್ತು 10 ಸಂಶೋಧನಾ ಲೇಖನಗಳನ್ನು ಪ್ರಕಟಿಸಿರುತ್ತಾರೆ.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಕುಡುಬಿ ಸಮುದಾಯದ ಕಲಾವಿದರ ಬಗ್ಗೆ ಪಠ್ಯವಾಗಲಿ: ಡಾ. ಜಾನಪದ ಎಸ್ ಬಾಲಾಜಿ

ಬ್ರಹ್ಮಾವರ, ಫೆ.27: ಮೇಕೆಕಟ್ಟು ನಂದಿಕೇಶ್ವರ ದೇಗುಲದ ಆವರಣದಲ್ಲಿ ಕನ್ನಡ ಜಾನಪದ ಪರಿಷತ್...

ಜಿಲ್ಲೆಯ ಅಗ್ನಿಶಾಮಕರಿಗೆ ಮುಖ್ಯಮಂತ್ರಿಗಳ ಚಿನ್ನದ ಪದಕ

ಉಡುಪಿ, ಫೆ.27: ಬೈಂದೂರು ಅಗ್ನಿಶಾಮಕ ಠಾಣೆಯ ಸಹಾಯಕ ಅಗ್ನಿಶಾಮಕ ರಾಜೇಶ್ ಹಾಗೂ...

ಮೊಬೈಲ್ ಕ್ಯಾಂಟೀನ್ ವಾಹನ ಖರೀದಿಸಲು ಸಹಾಯಧನ: ಅರ್ಜಿ ಆಹ್ವಾನ

ಉಡುಪಿ, ಫೆ.27: ಪ್ರವಾಸೋದ್ಯಮ ಇಲಾಖೆ ವತಿಯಿಂದ ಎಸ್.ಸಿ.ಎಸ್.ಪಿ/ಟಿ.ಎಸ್.ಪಿ. ಯೋಜನೆಯಡಿಯಲ್ಲಿ ಪರಿಶಿಷ್ಟ ಜಾತಿ...

ಮಾ. 4: ಉಡುಪಿ ಕಂಬಳಕೆರೆಗೆ ಶಂಕುಸ್ಥಾಪನೆ

ಉಡುಪಿ, ಫೆ.27: ಉಡುಪಿ ಜಿಲ್ಲಾಡಳಿತ ಮತ್ತು ಯುವಜನ ಸಬಲೀಕರಣ ಇಲಾಖೆ ವತಿಯಿಂದ...
error: Content is protected !!