Monday, March 23, 2026
Monday, March 23, 2026

ವಿದ್ಯಾರ್ಥಿ ನಾಯಕತ್ವವೇ ಭವಿಷ್ಯದ ಬುನಾದಿ: ಕೆ. ಜಯಪ್ರಕಾಶ ಹೆಗ್ಡೆ

ವಿದ್ಯಾರ್ಥಿ ನಾಯಕತ್ವವೇ ಭವಿಷ್ಯದ ಬುನಾದಿ: ಕೆ. ಜಯಪ್ರಕಾಶ ಹೆಗ್ಡೆ

Date:

ಬ್ರಹ್ಮಾವರ, ಸೆ.9: ಭವಿಷ್ಯದ ನಾಯಕರಾಗಲು ವಿದ್ಯಾರ್ಥಿ ದೆಸೆಯಲ್ಲಿಯೇ ನಾಯಕತ್ವದ ಗುಣವನ್ನು ಮೈಗೂಡಿಸಿಕೊಂಡು ರಾಜ್ಯ, ರಾಷ್ಟ್ರವನ್ನು ಮುನ್ನಡೆಸುವಲ್ಲಿ ಪ್ರಧಾನ ಪಾತ್ರ ವಹಿಸಲು ಕಾಲೇಜು ಹಂತದಲ್ಲಿಯೇ ವಿದ್ಯಾರ್ಥಿ ನಾಯಕನಾಗುವುದರ ಮೂಲಕ ತಮ್ಮನ್ನು ತೊಡಗಿಸಿಕೊಳ್ಳಬೇಕೆಂದು ಮಾಜಿ ಸಚಿವರಾದ ಕೆ. ಜಯಪ್ರಕಾಶ ಹೆಗ್ಡೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಶ್ರೀಮತಿ ರುಕ್ಮಿಣಿ ಶೆಡ್ತಿ ಸ್ಮಾರಕ ನ್ಯಾಷನಲ್ ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ, ಬಾರ್ಕೂರು ಇಲ್ಲಿ ನಡೆದ 2025 – 26ನೇ ಸಾಲಿನ ವಿದ್ಯಾರ್ಥಿ ವೇದಿಕೆ ಉದ್ಘಾಟನೆ, ಶಿಕ್ಷಕರ ದಿನಾಚರಣೆ ಹಾಗೂ ಕಾಲೇಜು ವಾರ್ಷಿಕ ಸಂಚಿಕೆ ಬಿಡುಗಡೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ವಿದ್ಯಾರ್ಥಿ ನಾಯಕರುಗಳಿಗೆ ಪ್ರತಿಜ್ಞಾ ವಿಧಿಯನ್ನು ಬೋಧಿಸಲಾಯಿತು. ಕಾಲೇಜಿನ ಸ್ಥಾಪಕ ಪ್ರಾಂಶುಪಾಲರಾದ ಪ್ರೊ. ರಾಜಶೇಖರ ಹೆಬ್ಬಾರ್ ಇವರು ಕಾಲೇಜು ಆರಂಭದಿಂದ ಸಮಸ್ಯೆಗಳ ನಡುವೆ ಬೆಳೆದು ಬಂದ ಪರಿಯನ್ನು ಹೇಳಿದರು. ವಿದ್ಯಾರ್ಥಿಗಳು ಸಮಸ್ಯೆಗಳನ್ನು ಮೀರಿ ಬದುಕು ಕಟ್ಟಿಕೊಳ್ಳುವುದರ ಜೊತೆಗೆ ತಮ್ಮ ತಂದೆ-ತಾಯಿ ಹಾಗೂ ಗುರುಗಳನ್ನು ಗೌರವದಿಂದ ಕಾಣಬೇಕು ಎಂದರು. ಶಿಕ್ಷಕರ ದಿನಾಚರಣೆಯ ಅಂಗವಾಗಿ ಪ್ರೊ ರಾಜಶೇಖರ ಹೆಬ್ಬಾರ್ ಅವರನ್ನು ಸನ್ಮಾನಿಸಲಾಯಿತು. ಎಲ್ಲಾ ಶಿಕ್ಷಕರಿಗೆ ಪುಷ್ಪವನ್ನು ನೀಡುವ ಮೂಲಕ ಅಭಿನಂದಿಸಲಾಯಿತು. ಕಾಲೇಜಿನ ವಾರ್ಷಿಕ ಸಂಚಿಕೆ ‘ಹೆಜ್ಜೆ’ಯನ್ನು ಈ ಸಂದರ್ಭದಲ್ಲಿ ಬಿಡುಗಡೆಗೊಳಿಸಲಾಯಿತು.

ಪ್ರಾಂಶುಪಾಲರಾದ ಡಾ. ಭಾಸ್ಕರ್ ಶೆಟ್ಟಿ ಎಸ್ ಅಧ್ಯಕ್ಷತೆ ವಹಿಸಿದ್ದರು. ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯರಾದ ಶ್ರೀನಿವಾಸ ಶೆಟ್ಟಿಗಾರ್, ರಾಜಾರಾಮ್ ಶೆಟ್ಟಿ , ಶೈಕ್ಷಣಿಕ ಸಮಿತಿಯ ಸಲಹೆಗಾರರಾದ ಪ್ರೊ. ಪ್ರಸಾದ್ ರಾವ್, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿಗಳಾದ ಲೋಲಾಕ್ಷಿ, ಕಾಲೇಜು ವಾರ್ಷಿಕ ಸಂಚಿಕೆಯ ಸಂಪಾದಕರಾದ ರೋಹಿಣಿ, ವಿದ್ಯಾರ್ಥಿ ನಾಯಕ ಬಾಲಾಜಿ, ಉಪನಾಯಕಿಯರಾದ ಚೇತನ, ವಿಜಯಲಕ್ಷ್ಮಿ, ಕಾರ್ಯದರ್ಶಿ ಅಹಮದ್ ಫಾಯಿಸ್ ಉಪಸ್ಥಿತರಿದ್ದರು. ಲೋಲಾಕ್ಷಿ ಸ್ವಾಗತಿಸಿ, ಸತೀಶ್ ಕುಮಾರ್ ವಂದಿಸಿದರು. ಶೈಲಜಾ ಕಾರ್ಯಕ್ರಮ ನಿರೂಪಿಸಿದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಮುದರಂಗಡಿ: ರಸ್ತೆ ಅಭಿವೃದ್ಧಿಗೆ ಗುದ್ದಲಿಪೂಜೆ

ಕಾಪು, ಮಾ.23: ಕಾಪು ವಿಧಾನಸಭಾ ಕ್ಷೇತ್ರದ ಮುದರಂಗಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ...

ನಾವು ಮತ್ತೊಮ್ಮೆ ಮಕ್ಕಳಾಗಬೇಕು: ಜೀವನರಾಂ ಸುಳ್ಯ

ಉಡುಪಿ, ಮಾ.೨೩: ಬದುಕಿನ ಸಾರ್ಥಕತೆಯನ್ನು ಗಳಿಸಲು ನಾವೆಲ್ಲ ಮತ್ತೊಮ್ಮೆ ಮಕ್ಕಳಾಗಬೇಕು ಎಂದು...

ಬಿಜೆಪಿ ಸಚಿವೆ ನಂದಿತಾ ಗೊರ್ಲೋಸಾ ಕಾಂಗ್ರೆಸ್ ಸೇರ್ಪಡೆ

ಗುವಾಹಟಿ, ಮಾ.23: ಮುಂದಿನ ತಿಂಗಳ ವಿಧಾನಸಭಾ ಚುನಾವಣೆಗೆ ಪಕ್ಷದ ಟಿಕೆಟ್ ನಿರಾಕರಿಸಿದ...

ಇಂಧನ ಸೌಲಭ್ಯಗಳನ್ನು ಗುರಿಯಾಗಿಸಿದರೆ ಹಾರ್ಮುಜ್ ಅನ್ನು ಸಂಪೂರ್ಣವಾಗಿ ಮುಚ್ಚುತ್ತೇವೆ: ಅಮೆರಿಕಾಗೆ ಇರಾನ್ ಎಚ್ಚರಿಕೆ

ಯು.ಬಿ.ಎನ್.ಡಿ., ಮಾ.23: ಅಮೆರಿಕಾ ಇರಾನಿನ ಇಂಧನ ಸೌಲಭ್ಯಗಳನ್ನು ಹೊಡೆದರೆ, ಹಾರ್ಮುಜ್ ಅನ್ನು...
error: Content is protected !!