Friday, March 20, 2026
Friday, March 20, 2026

ಹಿರಿಯಡಕ ಕಾಲೇಜಿನ ರೋಟರಾಕ್ಟ್ ಕ್ಲಬ್‌ನ ಪದಪ್ರಧಾನ ಸಮಾರಂಭ

ಹಿರಿಯಡಕ ಕಾಲೇಜಿನ ರೋಟರಾಕ್ಟ್ ಕ್ಲಬ್‌ನ ಪದಪ್ರಧಾನ ಸಮಾರಂಭ

Date:

ಹಿರಿಯಡಕ, ಡಿ.22: ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಹಿರಿಯಡಕ ಇದರ 2025-26ನೇ ಸಾಲಿನ ರೋಟರಾಕ್ಟ್ ಕ್ಲಬ್‌ನ ವಿದ್ಯಾರ್ಥಿ ಅಧ್ಯಕ್ಷನಾಗಿ ಮಹಾದೇವ ಹಾಗೂ ಕಾರ್ಯದರ್ಶಿಯಾಗಿ ದೀಕ್ಷಾ ಇವರ ಪದಪ್ರಧಾನ ಸಮಾರಂಭ ಕಾಲೇಜು ಸಭಾಂಗಣದಲ್ಲಿ ನೆರವೇರಿತು. ಪರ್ಕಳ ರೋಟರಿಯ ಸ್ಥಾಪಕ ಅಧ್ಯಕ್ಷ ಶ್ರೀನಿವಾಸ ನಾಯಕ್‌ ಪದಪ್ರಧಾನ ವಿಧಿಯನ್ನು ನಡೆಸಿಕೊಟ್ಟರು. ರೋಟರಿ ಪರ್ಕಳದ ಅಧ್ಯಕ್ಷ ಹಾಜಿ ಕೆ ಅಬೂಬಕ್ಕರ್‌ ಅಧ್ಯಕ್ಷತೆ ವಹಿಸಿದ್ದರು.

ಕಾಲೇಜಿನ ಪ್ರಾಂಶುಪಾಲ ಡಾ. ಜಯಪ್ರಕಾಶ್‌ ಶೆಟ್ಟಿ ಹೆಚ್‌., ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ. ಸೌಮ್ಯಲತಾ ಪಿ., ಐಕ್ಯುಎಸಿ ಸಂಚಾಲಕ ಡಾ. ಲಿತಿನ್‌ ಬಿ ಎಂ., ರೋಟರಾಕ್ಟ್ ಕ್ಲಬ್‌ನ ಅಧ್ಯಾಪಕ ಸಂಚಾಲಕಿ ಮೀನಾಕ್ಷಿ ನಾಯ್ಕ, ದಯಾನಂದ ನಾಯಕ್‌, ಸತ್ಯಾನಂದ ನಾಯಕ್‌, ಡಾ. ಕೃಷ್ಣಮೂರ್ತಿ ಭಟ್‌, ವಿಶ್ವನಾಥ ನಾಯಕ್‌ ಮುಂತಾದವರು ಉಪಸ್ಥಿತರಿದ್ದರು. ರೋಟರಿ ಪರ್ಕಳದ ವತಿಯಿಂದ ಹಿರಿಯಡಕ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ 2 ಅಲ್ಮೆರಾಗಳನ್ನು ಕೊಡುಗೆಯಾಗಿ ನೀಡಲಾಯಿತು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಪಶ್ಚಿಮ ಏಷ್ಯಾ ಪ್ರದೇಶಗಳಿಗೆ ಇಂದಿನಿಂದ ಏರ್ ಇಂಡಿಯಾ ಮತ್ತು ಏರ್ ಇಂಡಿಯಾ ಎಕ್ಸ್‌ಪ್ರೆಸ್ ಸೇವೆ ಆರಂಭ

ನವದೆಹಲಿ, ಮಾ.19: ಏರ್ ಇಂಡಿಯಾ ಮತ್ತು ಏರ್ ಇಂಡಿಯಾ ಎಕ್ಸ್‌ಪ್ರೆಸ್ ಇಂದಿನಿಂದ...

ನಿಟ್ಟೆ: ಐ.ಆರ್.ಎಸ್.ಎಂ ರಾಷ್ಟ್ರೀಯ ಸಿಂಪೋಸಿಯಂ

ನಿಟ್ಟೆ, ಮಾ.19: ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಅಂಗ ಸಂಸ್ಥೆಯಾದ ನಿಟ್ಟೆ ಮಹಾಲಿಂಗ...

ಆರೋಗ್ಯ ಇಲಾಖೆಯ ವಿವಿಧ ಹುದ್ದೆ: ಅರ್ಜಿ ಆಹ್ವಾನ

ಉಡುಪಿ, ಮಾ.19: ಆರೋಗ್ಯ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಕಭೀ ಕಾರ್ಯಕ್ರಮದಡಿಯಲ್ಲಿ...
error: Content is protected !!