Sunday, March 22, 2026
Sunday, March 22, 2026

ರಥಬೀದಿ ಕಾಲೇಜು: ವಿಶ್ವ ಏಡ್ಸ್ ದಿನಾಚರಣೆ

ರಥಬೀದಿ ಕಾಲೇಜು: ವಿಶ್ವ ಏಡ್ಸ್ ದಿನಾಚರಣೆ

Date:

ಮಂಗಳೂರು, ಡಿ.6: ಮಂಗಳೂರು ರಥಬೀದಿಯ ಡಾ. ಪಿ. ದಯಾನಂದ ಪೈ-ಪಿ. ಸತೀಶ್ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರೆಡ್ ರಿಬ್ಬನ್ ಮತ್ತು ರಾಷ್ಟ್ರೀಯ ಸೇವಾ ಯೋಜನೆ ಘಟಕಗಳ ವತಿಯಿಂದ ವಿಶ್ವ ಏಡ್ಸ್ ದಿನಾಚರಣೆ ಕಾರ್ಯಕ್ರಮವನ್ನು ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು. ಮುಖ್ಯ ಅತಿಥಿ ಹಾಗೂ ಸಂಪನ್ಮೂಲ ವ್ಯಕ್ತಿಗಳಾಗಿ ಸರಕಾರಿ ಲೇಡಿಗೋಶನ್ ಮಂಗಳೂರು ಇಲ್ಲಿನ ಸ್ತ್ರೀ ರೋಗ ಮತ್ತು ಪ್ರಸೂತಿ ವಿಭಾಗದ ಹಿರಿಯ ತಜ್ಞರಾದ ಡಾ. ಸುಂದರಿ ಆಗಮಿಸಿದ್ದರು. ಏಡ್ಸ್ ರೋಗದ ಬಗ್ಗೆ ವಿವರವಾದ ಮಾಹಿತಿಯನ್ನು ನೀಡಿ, ಯುವ ಜನತೆ ಈ ರೋಗದ ಬಗ್ಗೆ ಜಾಗೃತರಾಗಿರುವಂತೆ ಅವರು ಕರೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಜಯಕರ ಭಂಡಾರಿ ಎಂ., ಅವರು ವಹಿಸಿದ್ದರು. ರಾಷ್ಟ್ರೀಯ ಸೇವಾ ಯೋಜನಾ ಘಟಕ-೨ರ ಯೋಜನಾಧಿಕಾರಿ ಶೋಭಾಮಣಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಘಟಕ-3ರ ಯೋಜನಾಧಿಕಾರಿ ಡಾ, ಲೋಕೇಶನಾಥ್ ಬಿ., ರಾಷ್ಟ್ರೀಯ ಸೇವಾ ಯೋಜನೆ ಸಲಹಾ ಸಮಿತಿ ಸದಸ್ಯರು ಮತ್ತುಇತರ ಬೋಧಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ದ್ವಿತೀಯ ಬಿ.ಬಿ.ಎ ವಿದ್ಯಾರ್ಥಿನಿ ಪರೀಕ್ಷಿತ ಕೆ. ಎ ನಿರೂಪಿಸಿದರು. ಯೋಗಿತಾ, ದ್ವಿತೀಯ ಬಿ.ಬಿ.ಎ ಸ್ವಾಗತಿಸಿ, ದೀಪ್ತಿ, ಪ್ರಥಮ ಬಿ.ಕಾಂ ವಂದಿಸಿದರು. ಪೋಸ್ಟರ್ ವಿನ್ಯಾಸ ಮತ್ತು ಪ್ರಬಂಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಆಸಾವರಿ ಶಾನಭಾಗ್ ನಿಧನ

ಕುಂದಾಪುರ, ಮಾ.22: ಕುಂದಾಪುರದ ಸದಾರಂಗ ಸಂಗೀತ ವಿದ್ಯಾಲಯದ ಸಂಸ್ಥಾಪಕರು ಆಲ್ ಇಂಡಿಯಾ...

ಮಾ. 24, ಮೆಸ್ಕಾಂ ಜನಸಂಪರ್ಕ ಸಭೆ

ಉಡುಪಿ, ಮಾ.21: ಮೆಸ್ಕಾಂ ಕಾಪು ಉಪವಿಭಾಗ ಕಛೇರಿಯಲ್ಲಿ ಮಾರ್ಚ್ 24 ರಂದು...

ಪ್ರಸಾದ ಎಸಳು ಚರ್ಚಾಗೋಷ್ಠಿ

ಮಂಗಳೂರು, ಮಾ.21: ಪ್ರಾಚೀನ ಸಂಪ್ರದಾಯದಂತೆ ಗೋವಾದಲ್ಲಿ ಹೆಚ್ಚು ಪ್ರಚಲಿತವಿರುವ 'ಪ್ರಸಾದ ಎಸಳು'...

ಸರಕಾರಿ ಯೋಜನೆಗಳು ಫಲಾನುಭವಿಗಳ ಸ್ವಾವಲಂಬಿ ಬದುಕಿಗೆ ಆಧಾರವಾಗಲಿ: ಯಶ್ಪಾಲ್ ಸುವರ್ಣ

ಉಡುಪಿ, ಮಾ.21: 2025–26ನೇ ಸಾಲಿನ ವೃತ್ತಿಪರ ಕುಶಲಕರ್ಮಿಗಳಿಗೆ ಉಚಿತ ಸುಧಾರಿತ ಉಪಕರಣ...
error: Content is protected !!