Friday, March 20, 2026
Friday, March 20, 2026

ಎಂ.ಜಿಎಂ. ಸಂಧ್ಯಾ ಕಾಲೇಜು: ‘ಸಾರಥಿ’ ಅನಾವರಣ

ಎಂ.ಜಿಎಂ. ಸಂಧ್ಯಾ ಕಾಲೇಜು: ‘ಸಾರಥಿ’ ಅನಾವರಣ

Date:

ಉಡುಪಿ, ಡಿ.5: ಕಾಲೇಜಿನ ವಾರ್ಷಿಕ ಸಂಚಿಕೆಗಳಿಗೆ ಜೀವಂತಿಕೆ ಇದೆ. ಭಾವನಾತ್ಮಕ ಸಂಬಂಧಗಳನ್ನು ರೂಪಿಸುವ ಹೊತ್ತಿಗೆವೂ ಹೌದು.ಕಾಲೇಜಿನ ಸರ್ವಾಂಗೀಣ ಚಟುವಟಿಕೆಗಳನ್ನು ದಾಖಲಿಸುವುದರ ಜೊತೆಗೆ ವಿದ್ಯಾರ್ಥಿಗಳ ಬಹುಮುಖ ಪ್ರತಿಭೆಗಳನ್ನು ಪ್ರತಿಫಲಿಸುವ ದರ್ಪಣವೆಂದರೆ ಕಾಲೇಜು ವಾರ್ಷಿಕ ಸಂಚಿಕೆಗಳು. ಈ ನಿಟ್ಟಿನಲ್ಲಿ ಉಡುಪಿ ಎಂಜಿಎಂ.ಸಂಧ್ಯಾ ಕಾಲೇಜಿನ ವಾಷಿ೯ಕ ಸಂಚಿಕೆ ಸಾರಥಿ ಅತ್ಯುತ್ತಮ ಕೃತಿಯಾಗಿ ಮೂಡಿ ಬಂದಿದೆ ಎಂದು ಎಂ.ಜಿ.ಎಂ ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಪ್ರೊ.ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಹೇಳಿದರು.

ಅವರು, ಟಿ. ಮೇೂಹನದಾಸ್ ಪೈ ಸ್ಮಾರಕ ಅಮೃತ ಸೌಧ ಸಭಾಂಗಣದಲ್ಲಿ ಹಮ್ಮಿಕೊಂಡ ಎಂಜಿಎಂ.ಸಂಧ್ಯಾ ಕಾಲೇಜಿನ ವಾರ್ಷಿಕ ಸಂಚಿಕೆ ಸಾರಥಿ ಲೇೂಕಾರ್ಪಣೆಗೊಳಿಸಿ ಮಾತನಾಡಿದರು. ಸಮಾರಂಭದ ಅಧ್ಯಕ್ಷತೆಯನ್ನು ಸಂಧ್ಯಾ ಕಾಲೇಜಿನ ಪ್ರಾಂಶುಪಾಲ ಪ್ರೊ.ಡಾ.ದೇವಿದಾಸ್ ಎಸ್.ನಾಯ್ಕ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಎಂಜಿಎಂ.ಕಾಲೇಜಿನ ಉಪ ಪ್ರಾಂಶುಪಾಲ ಡಾ.ಎಂ.ವಿಶ್ವನಾಥ ಪೈ, ವಾಣಿಜ್ಯಶಾಸ್ತ್ರ ವಿಭಾಗದ ಸಂಯೇೂಜಕಿ ಡಾ.ಮಲ್ಲಿಕಾ ಎ.ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಉಪನ್ಯಾಸಕಿ ಕೃತಿಕಾ.ಪಿ. ಶೆಣೈ ಸ್ವಾಗತಿಸಿ, ಸಂಪಾದಕೀಯ ಮಂಡಳಿ ಉಪನ್ಯಾಸಕಿ ದೀಪಿಕಾ ಸಂಚಿಕೆಯ ಕುರಿತಾಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ಯಾರ್ಥಿ ಪ್ರತಿನಿಧಿ ಭಾರ್ಗವ ಅತಿಥಿ ಪರಿಚಯ ನೀಡಿದರು. ಉಪನ್ಯಾಸಕ ಮೊಹಮ್ಮದ್ ಯಾಸೀನ್ ಮನ್ನಾ ವಂದಿಸಿದರು. ಶ್ರೀಕರ ಟಿ.ಎಸ್.ಕಾರ್ಯಕ್ರಮ ನಿರೂಪಿಸಿದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಪಶ್ಚಿಮ ಏಷ್ಯಾ ಪ್ರದೇಶಗಳಿಗೆ ಇಂದಿನಿಂದ ಏರ್ ಇಂಡಿಯಾ ಮತ್ತು ಏರ್ ಇಂಡಿಯಾ ಎಕ್ಸ್‌ಪ್ರೆಸ್ ಸೇವೆ ಆರಂಭ

ನವದೆಹಲಿ, ಮಾ.19: ಏರ್ ಇಂಡಿಯಾ ಮತ್ತು ಏರ್ ಇಂಡಿಯಾ ಎಕ್ಸ್‌ಪ್ರೆಸ್ ಇಂದಿನಿಂದ...

ನಿಟ್ಟೆ: ಐ.ಆರ್.ಎಸ್.ಎಂ ರಾಷ್ಟ್ರೀಯ ಸಿಂಪೋಸಿಯಂ

ನಿಟ್ಟೆ, ಮಾ.19: ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಅಂಗ ಸಂಸ್ಥೆಯಾದ ನಿಟ್ಟೆ ಮಹಾಲಿಂಗ...

ಆರೋಗ್ಯ ಇಲಾಖೆಯ ವಿವಿಧ ಹುದ್ದೆ: ಅರ್ಜಿ ಆಹ್ವಾನ

ಉಡುಪಿ, ಮಾ.19: ಆರೋಗ್ಯ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಕಭೀ ಕಾರ್ಯಕ್ರಮದಡಿಯಲ್ಲಿ...
error: Content is protected !!