Friday, March 20, 2026
Friday, March 20, 2026

ಯುಪಿಎಂಸಿ: ಸಾಹಿತ್ಯ ಸಂಘ ಉದ್ಘಾಟನೆ

ಯುಪಿಎಂಸಿ: ಸಾಹಿತ್ಯ ಸಂಘ ಉದ್ಘಾಟನೆ

Date:

ಉಡುಪಿ, ಡಿ.2: ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ ಸಾಹಿತ್ಯ ಸಂಘದ ವತಿಯಿಂದ ಪರಿಣಾಮಕಾರಿ ಸಂವಹನ ಕಲೆಯ ಕುರಿತಾಗಿ ವಿಶೇಷ ತರಬೇತಿ ಕಾರ್ಯಕ್ರಮ ಕಾಲೇಜಿನ ಉಪೇಂದ್ರ ಮಂಟಪದಲ್ಲಿ ನಡೆಯಿತು. ಮುಖ್ಯ ಅಭ್ಯಾಗತರಾಗಿ ಆಗಮಿಸಿದ ವ್ಯಕ್ತಿತ್ವ ವಿಕಸನ ತರಬೇತುದಾರ ಸಂಘಟನಾ ಕಾರ್ಯದರ್ಶಿ ಕನ್ನಡ ಸಾಹಿತ್ಯ ಪರಿಷತ್ ಉಡುಪಿ ರಾಘವೇಂದ್ರ ಪ್ರಭು ಕರ್ವಾಲು ಇವರು 2025- 26ನೇ ಸಾಲಿನ ಸಾಹಿತ್ಯ ಸಂಘದ ಚಟುವಟಿಕೆಗಳನ್ನು ಉದ್ಘಾಟಿಸಿ, ಪರಿಣಾಮಕಾರಿ ಸಂವಹನ ಕಲೆಯ ಕುರಿತಾಗಿ ತರಬೇತಿ ಕಾರ್ಯಕ್ರಮ ನಡೆಸಿಕೊಟ್ಟರು.

ಅವರು ಮಾತನಾಡುತ್ತಾ, ವಿದ್ಯಾರ್ಥಿಗಳಿಗೆ ಮಾತಿನಲ್ಲಿ ಅಥವಾ ಬರವಣಿಗೆಯಲ್ಲಿ ನಿಖರತೆ, ಸ್ಪಷ್ಟತೆ, ವಸ್ತುನಿಷ್ಠತೆ ಇರಬೇಕು. ಇದು ಸಂವಹನ ಕೌಶಲ ಉತ್ತಮ ಪಡಿಸಿಕೊಳ್ಳಲು ಸಹಕಾರಿ, ಲವಲವಿಕೆಯಿಂದ ವಿವಿಧ ಕ್ಷೇತ್ರಗಳಲ್ಲಿ ಆಸಕ್ತಿಯಿಂದ ತೊಡಗಿದರೆ ವ್ಯಕ್ತಿ ಸಾಧಕನಾಗಬಲ್ಲ, ತಾಳ್ಮೆಯಿಂದ ಉತ್ತಮ ಕೇಳುಗನಾದರೆ ವ್ಯಕ್ತಿಯ ವ್ಯಕ್ತಿತ್ವ ಹಾಗೂ ಪ್ರತಿಭೆ ಅರಳುವುದರ ಜೊತೆಗೆ ಸೃಜನಶೀಲತೆ ಜಾಗೃತಗೊಳ್ಳಲು ಸಹಕಾರಿಯಾಗಲಿದೆ. ಹಾಗೆಯೇ ಲೇಖನ, ಕವನ ಬರೆಯಲು ಸಮಕಾಲೀನ ಪರಿಸ್ಥಿತಿಗಳನ್ನು ವಸ್ತುವಾಗಿಸಿ ಬರೆಯಲು ಸಾಧ್ಯವಿದೆ, ಎಲ್ಲವುದಕ್ಕೂ ಆಸಕ್ತಿ ಮುಖ್ಯ ಎಂದು ತಿಳಿಸಿದರು.

ಕಾಲೇಜಿನ ಪ್ರಾಚಾರ್ಯರಾದ ಆಶಾ ಕುಮಾರಿ ಅಧ್ಯಕ್ಷತೆ ವಹಿಸಿದ್ದರು. ಸಾಹಿತ್ಯ ಸಂಘದ ಸಹ ಸಂಚಾಲಕ ಹಾಗೂ ಕನ್ನಡ ಉಪನ್ಯಾಸಕರಾದ ಶಶಿಕಾಂತ್ ಎಸ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಹಿಂದಿ ಉಪನ್ಯಾಸಕಿ ಸುನಿತಾ ಕಾಮತ್ ಉಪಸ್ಥಿತರಿದ್ದರು. ಸಾಹಿತ್ಯ ಸಂಘದ ಸಂಚಾಲಕ ಹಾಗೂ ವಾಣಿಜ್ಯ ಉಪನ್ಯಾಸಕರಾದ ರಾಘವೇಂದ್ರ ಜಿ ಜಿ ಕಾರ್ಯಕ್ರಮ ಸಂಯೋಜಿಸಿದರು. ವಿದ್ಯಾರ್ಥಿನಿಯರಾದ ಅದೀಶ ಸ್ವಾಗತಿಸಿ, ಕೃತಿಕಾ ವಂದಿಸಿದರು. ಸನ್ನಿಧಿ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಪಶ್ಚಿಮ ಏಷ್ಯಾ ಪ್ರದೇಶಗಳಿಗೆ ಇಂದಿನಿಂದ ಏರ್ ಇಂಡಿಯಾ ಮತ್ತು ಏರ್ ಇಂಡಿಯಾ ಎಕ್ಸ್‌ಪ್ರೆಸ್ ಸೇವೆ ಆರಂಭ

ನವದೆಹಲಿ, ಮಾ.19: ಏರ್ ಇಂಡಿಯಾ ಮತ್ತು ಏರ್ ಇಂಡಿಯಾ ಎಕ್ಸ್‌ಪ್ರೆಸ್ ಇಂದಿನಿಂದ...

ನಿಟ್ಟೆ: ಐ.ಆರ್.ಎಸ್.ಎಂ ರಾಷ್ಟ್ರೀಯ ಸಿಂಪೋಸಿಯಂ

ನಿಟ್ಟೆ, ಮಾ.19: ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಅಂಗ ಸಂಸ್ಥೆಯಾದ ನಿಟ್ಟೆ ಮಹಾಲಿಂಗ...

ಆರೋಗ್ಯ ಇಲಾಖೆಯ ವಿವಿಧ ಹುದ್ದೆ: ಅರ್ಜಿ ಆಹ್ವಾನ

ಉಡುಪಿ, ಮಾ.19: ಆರೋಗ್ಯ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಕಭೀ ಕಾರ್ಯಕ್ರಮದಡಿಯಲ್ಲಿ...
error: Content is protected !!