Home ಅಂಕಣ ಈ ನೆಲದ ಮೇಲಣ ನಕ್ಷತ್ರ ಬಾಬಾಸಾಹೇಬ್ ಅಂಬೇಡ್ಕರ್

ಈ ನೆಲದ ಮೇಲಣ ನಕ್ಷತ್ರ ಬಾಬಾಸಾಹೇಬ್ ಅಂಬೇಡ್ಕರ್

528
0

ತದಾನ ಎನ್ನುವುದು ಮನೆಯ ಮಗಳಿದ್ದಂತೆ ಅದನ್ನು ಹಣ -ಹೆಂಡಕ್ಕೆ ಮಾರಿಕೊಳ್ಳಬೇಡಿ”. ಸಮಾಜಿಕ ವೇದನೆಗಳನ್ನು ಅರಿವು ಮಾಡಿಕೊಂಡು ಜನಸಾಮಾನ್ಯರ ವೇದನೆಗಳನ್ನು ಅರಿತುಕೊಂಡಾಗ ಮಾತ್ರ ಒರ್ವ ಆದರ್ಶ ಸಮಾಜಸೇವಕನಾಗಲು ಸಾಧ್ಯ. ಜ್ಞಾನದ ಸಂಕೇತ, ಭಾರತ ರತ್ನ, ಸಂವಿಧಾನ ಶಿಲ್ಪಿ, ಶ್ರೇಷ್ಠ ಅರ್ಥಶಾಸ್ತ್ರಜ್ಞ, ಕಾನೂನು ಮಂತ್ರಿ, ತಥಾಗತನ ತೇಜಸ್ಸು, ದಲಿತ ಸೂರ್ಯ, ಗ್ರಂಥಗಳ ಗೆಳೆಯ ಹೀಗೆ ಸಾವಿರಾರು ಪದಗಳಿಗೆ ನಿಲುಕದ ಒಂದು ಮಹಾನ್ ಶಕ್ತಿಯೇ ಬಾಬಾಸಾಹೇಬ್ ಅಂಬೇಡ್ಕರ್ ಎಂದರೆ ಅತಿಶಯೋಕ್ತಿಯಲ್ಲ.

ತೋಟದಲ್ಲಿರುವ ಬಣ್ಣಬಣ್ಣದ ಪರಿಮಳ ಬರಿತ ಹೂವುಗಳು ನೋಡುಗರಿಗೆ ಹೇಗೆ ಸ್ಪೂರ್ತಿಯೂ ಹಾಗೆಯೇ ಬಾಬಾಸಾಹೇಬ್ ಎಂಬ ಬೆಲೆಬಾಳುವ ಹೂವು ಎಂದೆಂದಿಗೂ ಪರಿಮಳವನ್ನು ಕಳೆದುಕೊಳ್ಳದ ಬಣ್ಣ ಮಾಸದ ಬಾಡದ ಹೂವು. ಸರ್ವಕಾಲಕ್ಕೂ ಅಪಾರವಾದ ಗೌರವ ಮಹತ್ವಪೂರ್ಣ ಹೊಂದಿರುವ ಶಕ್ತಿಯಾಗಿರುವ ಮಹಾನ್ ವ್ಯಕ್ತಿ. ಬಾಲ್ಯದ ಅಸಮಾನತೆಗಳು, ಅಶಕ್ತಿಗಳು ಇವರ ಪರಿಶ್ರಮದಿಂದ ಕೋಟ್ಯಾಂತರ ಭಾರತೀಯರಿಗೆ ಸಮಾನತೆ ಹಾಗೂ ಶಕ್ತಿಯನ್ನು ತಂದುಕೊಟ್ಟಿತು.

ಭೀಮ ರಾವ್ ಬಾಲ್ಯವೇ ಸಾವಿರಾರು ಎಡರು ತೊಡರುಗಳಲ್ಲಿ ಸಾಗಿತ್ತು ಆದರೂ ಅವರ ಛಲ, ಕಠಿಣವಾದ ಪರಿಶ್ರಮ, ಪ್ರಾಮಾಣಿಕವಾಗಿ ಸಾಗುತ್ತಿದ್ದ ಅಧ್ಯಾಯನಗಳು ಇಂದಿಗೂ ಅವರನ್ನು ನಿರಾಸೆಗೊಳಿಸಲಿಲ್ಲ. ಸತತ ಪರಿಶ್ರಮ ಅಧ್ಯಯನದಿಂದಾಗಿ ದೊರೆತ ಒಂದು ಬಾರಿಯ ಮಹಾನ್ ಗೆಲುವು ಎದುರಾಳಿಯ ಕುತಂತ್ರವನ್ನೇ ಬುಡಮೇಲು ಮಾಡಿತು. ಒಳ್ಳೆಯತನಕ್ಕೆ ಎಂದಿಗೂ ಸೋಲಿಲ್ಲ ಎನ್ನುವುದನ್ನು ಮೆರೆಸಿತು. ಸಾವಿರಾರು ಸೋಲು ಅವರನ್ನು ಕುಗ್ಗಿಸಿದರೂ ನೂರಾರು ಜನ ಆಡಿಕೊಂಡರೂ ಅವರ ಒಳ್ಳೆಯತನ ಸಮಾಜವನ್ನು ಗೆಲ್ಲಿಸಿತು. ನೊಂದವರ ಪರವಾದ ಮಿಡಿತಗಳು -ಹೋರಾಟದ ಸ್ವಾಭಿಮಾನದ ಕಿಚ್ಚಿನ ಜೈಭೀಮ್ ಘೋಷಣೆ ಅಂದು ಇಂದು ಎಂದೆಂದಿಗೂ ನೊಂದವರಿಗೆ, ಅಸಹಾಯಕರಿಗೆ, ಚಳುವಳಿಗಾರರಿಗೆ/ಹೋರಾಟಗಾರರಿಗೆ ಆನೆ ಬಲವನ್ನು ಯಾವಾಗಲೂ ತುಂಬಿಸುತ್ತದೆ. ಭೀಮ್ ರಾವ್ ಅವರ ಬದುಕೇ ಒಂದು ಆದರ್ಶ ಯುವ ಜನಾಂಗಕ್ಕೆ ಪ್ರಗತಿಪರ ಭಾರತಕ್ಕೆ ಅವರು ಬರೆದ ಐದು ಮಹಾನ್ ಪುಸ್ತಕಗಳು ಬಹಳಷ್ಟು ಸಹಾಯಕರಾಗಿದೆ.

ಡಾ. ಬಿ.ಆರ್.ಅಂಬೇಡ್ಕರ್ ಎಂದರೆ ಪರಿಪೂರ್ಣವಾದ ಬೃಹತ್ಕೋಷ ಇಲ್ಲಿ ತಿಳಿದಷ್ಟು ತಿಳುವಳಿಕೆ ಇದೆ. ಬದುಕಿನ ಪ್ರತಿಯೊಂದು ಹಂತದಲ್ಲಿ ಅಂಬೇಡ್ಕರ್ ಸ್ಪೂರ್ತಿಯಾಗಿ ನಿಲ್ಲಬಲ್ಲರು.”ಬಡವನಾಗಿ ಹುಟ್ಟುವುದು ನಿನ್ನ ತಪ್ಪಲ್ಲ, ಆದರೆ ಬಡವನಾಗಿ ಸಾಯುವುದು ಅದು ನಿನ್ನ ತಪ್ಪು. ಈ ಸಾಲುಗಳು ಬದುಕು-ಸಾಧನೆಗೆ ಮಹತ್ವವನ್ನು ನೀಡುತ್ತದೆ. ಅಂಬೇಡ್ಕರ್ ಸರ್ವಾಕಾಲಿಕ ಶ್ರೇಷ್ಠ ನಾಯಕ ಮಹಿಳೆಯ ಸ್ವಾವಲಂಬಿ ಬದುಕಿಗಾಗಿ, ಸಮಾನತೆಯ ನೆಲೆಯಲ್ಲಿ, ಮಾನವೀಯತೆಯ ಸ್ಪಂದನೆಯಲ್ಲಿ ಸಂವಿಧಾನದಲ್ಲಿ ನೀಡಿದ ಹಕ್ಕುಗಳು ಮತ್ತು ಸ್ವಾತಂತ್ರ್ಯದ ಬಗ್ಗೆ ತಿಳಿದುಕೊಳ್ಳಬೇಕಾಗಿದೆ. ಸ್ತ್ರೀಯರ ಬದುಕಿಗೆ ಬಾಬಾಸಾಹೇಬರು ನೀಡಿದ ಕೊಡುಗೆಯನ್ನು ತಿಳಿದುಕೊಂಡು ಅವರನ್ನು ಪುನರ್ ಸ್ಮರಣೆಮಾಡಬೇಕಾಗಿದೆ.

ಮತದಾನ, ಆಸ್ತಿಯ ಹಕ್ಕುಗಳು, ಸ್ವಾತಂತ್ರ್ಯ, ಸಮಾನ ಮೂಲಭೂತ ಹಕ್ಕು /ಕರ್ತವ್ಯಗಳು ಕಾನೂನಿನಲ್ಲಿ ಸ್ತ್ರೀಯರ ರಕ್ಷಣೆ ಗೌರವ ಹಕ್ಕುಗಳ ಬಗ್ಗೆ ಅಭಿಮಾನದಿಂದ ತಿಳಿದುಕೊಳ್ಳಬೇಕಾಗಿದೆ ಆ ಮೂಲಕ ಇಂದು ಸ್ತ್ರೀಯರು ಪುರುಷರಷ್ಟೆ ಸಮಾನರು ಸ್ವಾವಲಂಬಿಗಳಾಗಿ ಜೀವನ ಬದುಕು ನಡೆಸುತ್ತಿದ್ದಾರೆ ಎಂದರೆ ಅವರು ಮಹಿಳೆಯರಿಗಾಗಿ ನೀಡಿದ ಬದುಕಿನ ಗೌರವ ಎನ್ನುವುದನ್ನು ಅರಿಯಬೇಕಾಗಿದೆ. ಬಾಬಾಸಾಹೇಬ್ ಅಂಬೇಡ್ಕರ್ ಸರ್ವಜನಾಂಗದ /ಬಂಧುಗಳ ನಾಯಕ ಹತ್ತಾರು ದೇಶವನ್ನು ತಿರುಗಾಡಿ ಅಲ್ಲಿನ ಸಂವಿಧಾನ /ಕಾನೂನುಗಳನ್ನು ಸವಿವರವಾಗಿ ಅಧ್ಯಾಯ ಮಾಡಿ ನಮ್ಮ ದೇಶಕ್ಕೆ ಒಪ್ಪಿಗೆಯಾಗುವಂತಹ ಕಾನೂನು / ನಿಯಮಗಳನ್ನು ರೂಪಿಸಿ ರಚಿಸಿದ್ದು ಮಾತ್ರವಲ್ಲದೆ ದೇಶದ ಅಭಿವೃದ್ಧಿ /ಪ್ರಗತಿಗಾಗಿ ಆಯಾಯ ಕಾಲಕ್ಕೆ ತಕ್ಕಂತೆ ಬದಲಾಯಿಸುವ ಅವಕಾಶವನ್ನು ನೀಡಿರುವುದು ಕೂಡ ಹೆಮ್ಮೆದಾಯಕ ವಿಚಾರ.

ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ಎಂಬ ಧ್ಯೇಯದೊಂದಿಗೆ ಭಾರತದ ಆರ್ಥಿಕ, ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ಅಭಿವೃದ್ಧಿಗಾಗಿ ಶ್ರೇಷ್ಠವಾದ ಭಾರತದ ಸಂವಿಧಾನವನ್ನು ರೂಪಿಸಿದ ಹೆಗ್ಗಳಿಕೆ ಇವರದ್ದು. ಬಾಬಾಸಾಹೇಬ್ ಅಂಬೇಡ್ಕರ್ ಇಂದಿಗೂ ಜ್ಞಾನದ /ಸುಜ್ಜಾನದ /ವಿಚಾರವಂತಿಕೆ /ಪ್ರಗತಿಪರ ಚಿಂತನೆಯ ನಾಯಕರಾಗಿ ಭಾರತದ ಅಭಿವೃದ್ಧಿಗಾಗಿ ಮತ್ತು ಭಾರತೀಯ ಶ್ರೇಯೋಭಿವೃದ್ದಿಗಾಗಿ ಸವೆಸಿದ ದಾರಿ, ಸಹಿಸಿಕೊಂಡ ಅವಮಾನ ಅಪಮಾನಗಳು ಸಾವಿರಾರು ಆದರೂ ಧೃತಿಗೆಡದೆ ಸರ್ವಧರ್ಮದ ಭಾರತೀಯರಿಗೆ ಸರ್ವಧರ್ಮಗಳ ಬಂಧುಗಳಿಗೆ ಸ್ವಾತಂತ್ರ್ಯ ಸಮಾನತೆ, ಸಹೋದರತ್ವ ಮೂಲಕ ಸ್ವಾವಲಂಬಿ ಭಾರತಕ್ಕೆ ನೀಡಿದ ಕೊಡುಗೆಗಳು ಅಪಾರ. ಅವರ ಚಿಂತನೆಗಳು ಅವರ ಸಾಮಾಜಿಕ ಚಿಂತನೆಯ ರೂಪದಲ್ಲಿಯೇ ನಿಂತಿದೆ.

ಇಂದು ನಾವು ಅನ್ಯ ದೇಶಕ್ಕೆ ಹೋಲಿಸಿದರೆ ನಾವು ಅದೆಷ್ಟೋ ವಿಷಯದಲ್ಲಿ ಸ್ವತಂತ್ರರು, ಪುಣ್ಯವಂತರು, ಭಾಗ್ಯವಂತರು ಎಂದರೆ ನಮ್ಮ ದೇಶದ ಕಾನೂನು ನಿಯಮಗಳು ಸರಳ ಸುಂದರವಾಗಿರುವಂತಹದ್ದು. ಬಾಬಾಸಾಹೇಬ್ ಅಂಬೇಡ್ಕರ್ ಒರ್ವ ಶ್ರೇಷ್ಠ ದೇಶಭಕ್ತರಾಗಿ ದೇಶದ ಜನರ ಬದುಕನ್ನು ಸಂವಿಧಾನದಲ್ಲಿ ಅಶಕ್ತರಿಗೆ ಯಾವುದೇ ಜಾತಿ ಧರ್ಮದ ಪರದೆಯನ್ನು ಹಾಕದೆ ಹಕ್ಕು- ಮೀಸಲಾತಿಯನ್ನು ಸಾಮಾನ್ಯ ಜನರಿಗೆ ನೀಡಿ ಶ್ರೇಷ್ಠ ಸಮಾಜಸೇವಕರಾದರು. ವ್ಯಕ್ತಿಯೊಬ್ಬ ನಾಮ ಹಲವು, ವ್ಯಕ್ತಿಯೊಬ್ಬ ಪದವಿ ಸಾಧನೆಗಳು ನೂರಾರು. ವ್ಯಕ್ತಿಯೊಬ್ಬ ಶಕ್ತಿ ನೂರಾರು ಅವರೇ ಬಾಬಾಸಾಹೇಬ್ ಅಂಬೇಡ್ಕರ್. ದೇಶದ ಕಡೆಯ ವ್ಯಕ್ತಿಗೂ ಸಮಾನವಾದ ಬದುಕು ಸಾಮಾಜಿಕ, ಆರ್ಥಿಕ, ರಾಜಕೀಯ ಸ್ವಾತಂತ್ರ್ಯ ಸಿಕ್ಕಾಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎನ್ನುವುದನ್ನು ಕೊನೆಯವರೆಗೂ ತನ್ನಲ್ಲಿ ಇಟ್ಟುಕೊಂಡು ಬದುಕಿದ ನಿಸ್ವಾರ್ಥ ಸಾಧಕ.

ಜನಸಾಮಾನ್ಯರ ನೆಲೆಯಲ್ಲಿ ನಿಂತು ಯೋಚಿಸಿ ತನ್ನ ಬದುಕನ್ನು ಶೋಷಿತರ ಅಭಿವೃದ್ಧಿಗಾಗಿ ಸವೆಸಿದ ಅವರ ಉದ್ದೇಶ ಸ್ವಷ್ಠ- ಸ್ವಚ್ಛವಾಗಿತ್ತು ತನ್ನ /ಕುಟುಂಬದ ಬದುಕನ್ನು ಮೊದಲು ಯೋಚಿಸುವವರ ನಡುವೆ ತನ್ನ ಜೀವ- ಜೀವನವನ್ನು ಅಶಕ್ತರಿಗಾಗಿ ಸವೆಸಿದ ಧೀಮಂತ ನಾಯಕ, ಇಡೀ ವಿಶ್ವದಲ್ಲಿ ಸಿಗಲಾರದ ಅಪ್ರತಿಮ ನಾಯಕ ಭಾರತ ರತ್ನ ಡಾ. ಬಿ.ಆರ್.ಅಂಬೇಡ್ಕರ್. ಈ ನೆಲದ ಮೇಲಣ ನಿಜವಾದ ನಕ್ಷತ್ರ ಬಾಬಾಸಾಹೇಬ್ ಸಾಹೇಬ್ ಅಂಬೇಡ್ಕರ್.

-ಪ್ರದೀಪ್ ಡಿ.ಎಂ. ಹಾವಂಜೆ
ಶಿಕ್ಷಕ, ಆಕಾಶವಾಣಿ ಕಲಾವಿದ 9902277784 [email protected]

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.