Saturday, February 28, 2026
Saturday, February 28, 2026

ದ್ವಿ ಭಾಷಾ ನೀತಿ ಬಡವರ ಬದುಕಿಗೆ ದುಸ್ತರ?

ದ್ವಿ ಭಾಷಾ ನೀತಿ ಬಡವರ ಬದುಕಿಗೆ ದುಸ್ತರ?

Date:

ರ್ನಾಟಕ ಸರಕಾರದ ಮುಂದೆ ದ್ವಿ ಭಾಷಾ ನೀತಿ ಅಳವಡಿಕೆಯ ಕುರಿತಾಗಿ ವರದಿ ಬಂದು ನಿಂತಿದೆ. ಮಾತ್ರವಲ್ಲ ರಾಜ್ಯ ಸರ್ಕಾರ ಕೂಡಾ ಈ ದ್ವಿ ಭಾಷಾ ನೀತಿಗೆ ಮಣೆ ಹಾಕುವ ನಿರ್ಧಾರಕ್ಕೆ ಸಹಮತಿ ನೀಡುವುದಂತು ಸಿದ್ಧ ಅನ್ನುವುದು ಮೇಲ್ನೋಟಕ್ಕೆ ಸ್ವಷ್ಟವಾಗಿ ಕಾಣುತ್ತಿದೆ. ಇದೇ ಸಂದರ್ಭದಲ್ಲಿ ಈ ದ್ವಿ ಭಾಷಾ ನೀತಿಯಿಂದ ರಾಜ್ಯದಲ್ಲಿ ಹಿಂದಿ ಭಾಷಾ ಕಲಿಕೆಗೆ ತಿಲಾಂಜಲಿ ಹಾಕುವುದಂತು ಸತ್ಯ. ಇದರಿಂದಾಗಿ ನೇರವಾಗಿ ಪರಿಣಾಮವಾಗಿ ಬೀರುವುದು ಬಡ ಮತ್ತು ಮಧ್ಯಮ ವರ್ಗದ ಬದುಕಿನ ಮೇಲೆ ಅನ್ನುವುದು ನಮ್ಮ ಸರ್ಕಾರಕ್ಕೆ ಇನ್ನೂ ಮನವರಿಕೆ ಆಗದಿರುವುದು ಆಶ್ಚರ್ಯವೇ ಸರಿ.

ಇದು ಹೇಗೆ ಬಡವರ ಮಧ್ಯಮ ವರ್ಗದವರ ಬದುಕು ಹಾಗೂ ಉದ್ಯೋಗದ ಮೇಲೆ ಹೇಗೆ ನೇರವಾಗಿ ಹೇಗೆ ಪರಿಣಾಮ ಬೀರಬಹುದು ಮಾತ್ರವಲ್ಲ ದ್ವಿ ಭಾಷಾ ನೀತಿ ಸಿರಿವಂತರ ಮಕ್ಕಳ ಬದುಕಿಗೆ ವರದಾನವೂ ಆಗಬಹುದು ಅನ್ನುವುದರ ಕುರಿತಾಗಿಯೇ ಬೆಳಕು ಚೆಲ್ಲುವ ಪ್ರಯತ್ನ ಮಾಡಿದ್ದೇನೆ.

ದ್ವಿ ಭಾಷಾ ನೀತಿಯಂತೂ ಕನ್ನಡ ಭಾಷಾ ಬೆಳವಣಿಗೆಗೆ ಪೂರಕವಾಗಿ ನಿಲ್ಲುವುದಿಲ್ಲ. ಬದಲಾಗಿ ಆಂಗ್ಲ ಭಾಷಾ ಮಾಧ್ಯಮವೇ ಪ್ರಮುಖ ಸ್ಥಾನವನ್ನು ಪಡೆದುಕೊಳ್ಳುದಂತು ಸತ್ಯ. ಕಲಿಕೆಯಲ್ಲಿ ಬುದ್ಧಿವಂತರು ಆರ್ಥಿಕವಾಗಿ ಪ್ರಬಲರು ಆಂಗ್ಲ ಭಾಷಾಯಲ್ಲಿಯೇ ಕಲಿತು ಪ್ರಾವೀಣ್ಯತೆಯನ್ನು ಪಡೆದು ಉತ್ತಮ ಉದ್ಯೇೂಗವನ್ನು ಖಾಸಗಿ ಕಂಪನಿಗಳಲ್ಲಿ ಸುಲಭವಾಗಿ ಪಡೆದು ದೇಶ ವಿದೇಶಗಳಲ್ಲಿ ಉತ್ತಮ ಬದುಕನ್ನು ಕಟ್ಟಿಕೊಳ್ಳಬಹುದು. ಇವರಿಗೆ ಹಿಂದಿ ಭಾಷಾ ಜ್ಞಾನದ ಅನಿವಾರ್ಯತೆ ಹೆಚ್ಚಾಗಿ ಕಾಡಲಾರದು. ಯಾಕೆಂದರೆ ಇವರಿಗೆ ಸಾಮಾಜಿಕವಾಗಿ ಬೆರೆತು ಬದುಕುವ ಅಗತ್ಯವೂ ಬರಲಾರದು. ಅದೇ ಕಲಿಕೆಯಲ್ಲಿ ಸ್ವಲ್ಪ ಹಿಂದೆ ಇದ್ದು ಬಡ ಮಾಧ್ಯಮ ವಗ೯ದವರು ತಮ್ಮ ಬದುಕನ್ನು ಕಟ್ಟಿಕೊಳ್ಳಲು ಬರೇ ರಾಜ್ಯದೊಳಗೆ ಸಾಧ್ಯವಿಲ್ಲ. ಹಾಗಾಗಿ ಅವರು ಬೇರೆ ರಾಜ್ಯಗಳಿಗೊ ಮಧ್ಯಪ್ರಾಚ್ಯ ದೇಶಗಳಿಗೊ ಹೇೂಗಿ ಸಣ್ಣಪುಟ್ಟ ವ್ಯವಹಾರವನ್ನೊ ಉದ್ಯೋಗವನ್ನು ಪಡೆದು ಜನರ ಜೊತೆ ವ್ಯವಹಾರಿಸಬೇಕಾದರೆ ಹಿಂದಿ ಭಾಷೆಯಿಂದ ಸಾಧ್ಯವೆನ್ನುವುದು ನಮ್ಮೆಲ್ಲರ ಅನುಭವಕ್ಕೆ ಈದಾಗಲೇ ಬಂದಿದೆ.

ಹಾಗೆನ್ನುವಾಗ ರಾಜ್ಯದಲ್ಲಿ ಹಿಂದಿ ಭಾಷೆಯ ಕಲಿಕೆ ನಿಷೇಧ ಹೇರಿರುವುದು ಬಡ ಮಧ್ಯಮ ವರ್ಗದವರ ಬದುಕಿನ ಮೇಲೆ ಚೆಲ್ಲಾಟವಲ್ಲವೇ. ಇದರ ವಿರುದ್ಧ ಧ್ವನಿ ಎತ್ತುವ ಸಂಘಟನೆಗಳ ಕೊರತೆ ಎದ್ದು ಕಾಣುತ್ತದೆ. ಸದ್ಯಕ್ಕೆ ಕನ್ನಡ ಉಳಿಸಿ ಉದ್ದಾರ ಮಾಡುತ್ತೇವೆ ಅನ್ನುವ ಸಂಘಟನೆಗಳಿಗೆ ಈ ದ್ವಿ ಭಾಷಾ ನೀತಿ ಭವಿಷ್ಯದಲ್ಲಿ ಯಾವ ರೀತಿಯಲ್ಲಿ ಪರಿಣಾಮ ಬೀರಬಹುದು ಅನ್ನುವ ಪರಿ ಜ್ಞಾನವೂ ಅವರಿಗಿಲ್ಲದಿರುವುದು ಅಷ್ಟೇ ಸ್ವಷ್ಟ. ನಮ್ಮ ರಾಜ್ಯದಲ್ಲಿ ದ್ವಿ ಭಾಷಾ ನೀತಿ ಜಾರಿಗೊಳಿಸಿ ಸುಲಭವಾಗಿ ಕೈತೊಳೆದು ಕೊಳ್ಳಬಹುದು. ಆದರೆ ನಮ್ಮ ರಾಜ್ಯದವರು ಕೂಡಾ ಬೇರೆ ಬೇರೆ ರಾಜ್ಯಗಳಲ್ಲಿ ಬದುಕು ಕಟ್ಟಿಕೊಂಡಿದ್ದಾರೆ ಅನ್ನುವುದು ಮರೆಯುವಂತಿಲ್ಲ. ಅವರು ಕೂಡಾ ನಮ್ಮ ಹಾಗೆ ದ್ವಿ ಭಾಷಾ ನೀತಿ ಅಳವಡಿಸಿಕೊಂಡರೆ ನಮ್ಮ ಮಕ್ಕಳ ಪರಿಸ್ಥಿತಿ ಏನಾಗಬಹುದು ಅನ್ನುವುದನ್ನು ಗಂಭೀರವಾಗಿ ಚಿಂತಿಸಲೇಬೇಕು.

ಸದ್ಯಕ್ಕೆ ಕೆಲವು ರಾಜ್ಯಗಳಲ್ಲಿ ಕನ್ನಡ ಭಾಷೆ ಕಲಿಕೆಗೂ ಅವಕಾಶ ಮಾಡಿಕೊಟ್ಟಿದ್ದಾರೆ, ಹಾಗಾಗಿ ಸದ್ಯಕ್ಕೆ ನೆಮ್ಮದಿಯಿಂದ ಕನ್ನಡದವರು ಬೇರೆ ರಾಜ್ಯಗಳಲ್ಲಿ ಗೌರವದಿಂದ ಬದುಕಬಹುದಾಗಿದ್ದು ಅದಕ್ಕೂ ಸಂಚಕಾರವನ್ನು ನಾವೇ ಮಾಡಿಕೊಡುವ ಪರಿಸ್ಥಿತಿ ನಿರ್ಮಿಸಿಕೊಡುವಂತೆ ಆಗಬಹುದು. ನಮ್ಮ ರಾಜ್ಯದ ಗಡಿ ಪ್ರದೇಶಗಳಾದ ಕಾಸರಗೋಡು, ಬೆಳಗಾವಿ ಪ್ರದೇಶಗಳಲ್ಲಿ ಇನ್ನಷ್ಟು ಸಮಸ್ಯೆ ಸೃಷ್ಟಿಯಾಗಬಹುದು. ನಮ್ಮ ಒಕ್ಕೂಟ ವ್ಯವಸ್ಥೆ ಆರೇೂಗ್ಯಪೂರ್ಣವಾಗಿ ನೆಲೆಸಬೇಕಾದರೆ ತ್ರಿಭಾಷಾ ನೀತಿ ಅಷ್ಟೇ ಪ್ರಾಮುಖ್ಯ ಅನ್ನುವುದನ್ನು ನಮ್ಮ ರಾಷ್ಟ್ರದ ಒಕ್ಕೂಟ ವ್ಯವಸ್ಥೆಯ ಇತಿಹಾಸವೇ ಸಾಬೀತುಪಡಿಸಿದೆ.

ಪ್ರೊ. ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಉಡುಪಿ

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಕುಡುಬಿ ಸಮುದಾಯದ ಕಲಾವಿದರ ಬಗ್ಗೆ ಪಠ್ಯವಾಗಲಿ: ಡಾ. ಜಾನಪದ ಎಸ್ ಬಾಲಾಜಿ

ಬ್ರಹ್ಮಾವರ, ಫೆ.27: ಮೇಕೆಕಟ್ಟು ನಂದಿಕೇಶ್ವರ ದೇಗುಲದ ಆವರಣದಲ್ಲಿ ಕನ್ನಡ ಜಾನಪದ ಪರಿಷತ್...

ಜಿಲ್ಲೆಯ ಅಗ್ನಿಶಾಮಕರಿಗೆ ಮುಖ್ಯಮಂತ್ರಿಗಳ ಚಿನ್ನದ ಪದಕ

ಉಡುಪಿ, ಫೆ.27: ಬೈಂದೂರು ಅಗ್ನಿಶಾಮಕ ಠಾಣೆಯ ಸಹಾಯಕ ಅಗ್ನಿಶಾಮಕ ರಾಜೇಶ್ ಹಾಗೂ...

ಮೊಬೈಲ್ ಕ್ಯಾಂಟೀನ್ ವಾಹನ ಖರೀದಿಸಲು ಸಹಾಯಧನ: ಅರ್ಜಿ ಆಹ್ವಾನ

ಉಡುಪಿ, ಫೆ.27: ಪ್ರವಾಸೋದ್ಯಮ ಇಲಾಖೆ ವತಿಯಿಂದ ಎಸ್.ಸಿ.ಎಸ್.ಪಿ/ಟಿ.ಎಸ್.ಪಿ. ಯೋಜನೆಯಡಿಯಲ್ಲಿ ಪರಿಶಿಷ್ಟ ಜಾತಿ...

ಮಾ. 4: ಉಡುಪಿ ಕಂಬಳಕೆರೆಗೆ ಶಂಕುಸ್ಥಾಪನೆ

ಉಡುಪಿ, ಫೆ.27: ಉಡುಪಿ ಜಿಲ್ಲಾಡಳಿತ ಮತ್ತು ಯುವಜನ ಸಬಲೀಕರಣ ಇಲಾಖೆ ವತಿಯಿಂದ...
error: Content is protected !!