Saturday, February 7, 2026
Saturday, February 7, 2026

ಅಹಿಂದ ಬಜೆಟ್ ಪ್ರಗತಿ ಶೂನ್ಯ

ಅಹಿಂದ ಬಜೆಟ್ ಪ್ರಗತಿ ಶೂನ್ಯ

Date:

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿರುವ 16ನೇ ಬಜೆಟ್ ಬಗ್ಗೆ ಹೆಚ್ಚಿನ ನಿರೀಕ್ಷೆ ಇತ್ತು. ಆದರೆ ರಾಜ್ಯದ ಬಹುಮುಖ್ಯವಾಗಿ ಕರಾವಳಿ ಜಿಲ್ಲೆಯ ಸಮಗ್ರ ಅಭಿವೃದ್ಧಿಯ ಬಗ್ಗೆ ಯಾವುದೇ ಅನುದಾನವುಾ ಇಲ್ಲ, ಶಾಶ್ವತ ಅಭಿವೃದ್ಧಿಯ ಮಾತುಗಳೇ ಇಲ್ಲ. ಬದಲಾಗಿ ಉಡುಪಿಯಲ್ಲಿ ಅವರಿಗೆ ಕಂಡಿದ್ದು ಭೂಕುಸಿತ ಮಾತ್ರ. ಸಮಗ್ರ ಬಜೆಟ್ ನಲ್ಲಿ ಕಂಡ ಬಹು ಆಘಾತಕಾರಿ ಅಂಶವೆಂದರೆ ಬಹುಮುಖ್ಯವಾಗಿ ಬಜೆಟ್ ಉದ್ದಕ್ಕೂ ಪ್ರಸ್ತಾವನೆಯಾಗಿದ್ದು ಅಹಿಂದ ಲೆಕ್ಕಾಚಾರ. ಇದು ರಾಜ್ಯದ ಸಮಗ್ರ ಆರ್ಥಿಕ ಅಭಿವೃದ್ಧಿಯ ಐಕ್ಯತೆಗೆ ಬಹುದೊಡ್ಡ ಹೊಡೆತ. ಅನುದಾನ ಹಂಚುವಾಗ ವಿವಿಧ ವಲಯಗಳಿಗೆ ಒತ್ತು ಕೊಡಬೇಕೇ ವಿನಃ ಜಾತಿ ಧರ್ಮವನ್ನುವನ್ನು ನೇೂಡಿ ಹಂಚಬಾರದು. ಗುತ್ತಿಗೆ ನೀಡುವಲ್ಲಿ ಕೈಗಾರಿಕ ಭೂಮಿ ಹಂಚಿಕೆಯಲ್ಲೂ ಶಿಕ್ಷಣ ಸವಲತ್ತುಗಳನ್ನು ನೀಡುವಾಗಲೂ ಬರೇ ಜಾತಿ ಮತಿಯ ವಿಷಯಗಳನ್ನು ಮಂಡಿಸುವುದು ಸರಿಯಲ್ಲ. ಅಂದರೆ ಕಾಮಗಾರಿಯಲ್ಲಿನ ಗುಣಮಟ್ಟ ಮುಖ್ಯವೇ ಹೊರತು ಜಾತಿ ಮತೀಯ ಆಧಾರದಲ್ಲಿ ಹಣ ಹಂಚುವುದು ಸರಿಯಲ್ಲ.

ಈ ರೀತಿಯ ಬಜೆಟ್ ಕಾಂಗ್ರೆಸ್ ನ ಮುಂದಿನ ರಾಜಕೀಯ ಭವಿಷ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಎಲ್ಲಾ ಲಕ್ಷಣಗಳು ಈ ಬಜೆಟ್ ನಲ್ಲಿ ಎದ್ದು ಕಾಣುತ್ತಿದೆ. ಅಂತೂ ಮುಖ್ಯಮಂತ್ರಿ ಸಿದ್ದರಾಮಯ್ಯ ತಾನು ‘ಅಹಿಂದ’ವಾದಿ ಅನ್ನುವುದನ್ನು ತಮ್ಮ ಬಜೆಟ್ ನಲ್ಲಿ ಸ್ವಷ್ಟವಾಗಿ ಪ್ರತಿಪಾದಿಸಿದ್ದಾರೆ.

ಪ್ರೊ.ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಉಡುಪಿ
(ನಿವೃತ್ತ ರಾಜ್ಯಶಾಸ್ತ್ರ ಮುಖ್ಯಸ್ಥ ಎಂಜಿಎಂ ಕಾಲೇಜು ಉಡುಪಿ)

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಉಡುಪಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಡಾ. ಭಾಸ್ಕರಾನಂದ ಕುಮಾರ್ ಆಯ್ಕೆ

ಉಡುಪಿ, ಫೆ.6: ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಹದಿನಾರನೇ ಕನ್ನಡ...

ತೆಂಕನಿಡಿಯೂರು ರೂ. 58.5 ಲಕ್ಷ ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಯಶ್ ಪಾಲ್ ಸುವರ್ಣ ಚಾಲನೆ

ಮಲ್ಪೆ, ಫೆ.6: ತೆಂಕನಿಡಿಯೂರು ಗ್ರಾಮದಲ್ಲಿ ರೂ. 58.50 ಲಕ್ಷ ವೆಚ್ಚದವಿವಿಧ ರಸ್ತೆ...

ಕೋಟ ನಾಗಮಂಡಲೋತ್ಸವದ ಚಪ್ಪರ ಮುಹೂರ್ತ

ಕೋಟ, ಫೆ.೬: ಕೋಟದ ಅಮೃತೇಶ್ವರೀ ದೇಗುಲದ ವತಿಯಿಂದ ನಡೆಯಲಿರುವ ಏಕ:ಪವಿತ್ರ ನಾಗಮಂಡಲೋತ್ಸವಕ್ಕೆ...

ಜಿಲ್ಲೆಗೆ ಆಗಮಿಸುವ ಪ್ರವಾಸಿಗರ ಸುರಕ್ಷತೆಗೆ ಪ್ರಥಮ ಆದ್ಯತೆ ನೀಡಿ: ಜಿಲ್ಲಾಧಿಕಾರಿ ಸ್ವರೂಪ ಟಿ. ಕೆ

ಉಡುಪಿ, ಫೆ.6: ಜಿಲ್ಲೆಗೆ ಆಗಮಿಸುವ ಪ್ರವಾಸಿಗರ ಉಪಯೋಗಕ್ಕೆ ಅಗತ್ಯವಿರುವ ಎಲ್ಲಾ ರೀತಿಯ...
error: Content is protected !!