Wednesday, March 25, 2026
Wednesday, March 25, 2026

ನಿರ್ಧಾರಗಳ ಆಯಾಸ

ನಿರ್ಧಾರಗಳ ಆಯಾಸ

Date:

ಮ್ಮ ಕನಸಿನ ಪಯಣದಲ್ಲಿ ಅನೇಕ ನಿರ್ಧಾರಗಳನ್ನು ನಾವು ತೆಗೆದುಕೊಳ್ಳುತ್ತಿರುತ್ತೇವೆ. ಹಣ ಹೇಗೆ ಸಂಪಾದಿಸುವುದು ಅಥವಾ ಬಿಸಿನೆಸ್ ಹೇಗೆ ಮಾಡುವುದು, ಯಾವ ಕೆಲಸಕ್ಕೆ ಸೇರುವುದು, ಹೀಗೆ ಹತ್ತು ಹಲವು ನಿರ್ಧಾರಗಳನ್ನು ನಾವು ದಿನಾಲು ಮಾಡುತ್ತಿರುತ್ತೇವೆ. ಇದೆಲ್ಲದರ ನಡುವೆ ನಮ್ಮ ದೈನಂದಿನ ಕೆಲಸಗಳ ಆಲೋಚನೆ ನಿರ್ಧಾರಗಳನ್ನು ತೆಗೆದುಕೊಳ್ಳುವ ಅನಿವಾರ್ಯತೆ. ಮಹಿಳೆಯರಿಗೆ ಇವತ್ತು ಯಾವ ಅಡಿಗೆ ಮಾಡುವುದು, ಯಾವ ತರಕಾರಿ ತರುವುದು, ಯಾವ ತರಕಾರಿ ಅಡುಗೆ ಮಾಡುವುದು, ಯಾವ ಉಡುಪು ಧರಿಸುವುದು ಹೀಗೆ ದಿನವಿಡೀ ಇದನ್ನೇ ಮಾಡುತ್ತಾ ಕೂತರೆ ನಮ್ಮ ಕನಸಿನತ್ತ ಮಾಡುವ ನಿರ್ಧಾರಗಳ ಸಮಯ ಬಂದಾಗ ಮನಸ್ಸು ಸರಿಯಾಗಿ ಕೆಲಸ ಮಾಡದೆ ಹೋಗಬಹುದು.

ಇತ್ತೀಚಿನ ದಿನಗಳಲ್ಲಿ ಈ ತರಹದ ಸಮಸ್ಯೆ ಹೆಚ್ಚಾಗಿದೆ. ಹಿಂದಿನ ದಿನಗಳಲ್ಲಿ ನಾವು ಒಂದೇ ಟಿವಿ, ಒಂದೇ ಚಾನೆಲ್ ಮುಂದೆ ಕೂತು ಅದನ್ನೇ ನೋಡುತ್ತಿದ್ದೆವು. ಆದರೆ ಈಗ ಒಂದು ಟಿವಿಯಲ್ಲಿ ಹತ್ತು ಹಲವಾರು ಚಾನೆಲ್ ಗಳು ಪ್ರತಿಯೊಂದು ಚಾನೆಲ್ಗಳಲ್ಲಿ ಹಲವಾರು ಕಾರ್ಯಕ್ರಮಗಳು. ಆಯ್ಕೆಗಳು ಹಲವು ನಿರ್ಧಾರ ಮಾಡಲು ಕಷ್ಟ. ಅಂಗಡಿಗೆ ಹೋದರೆ ಹತ್ತು ಹಲವು ಬಗೆಯ ವಸ್ತುಗಳು, ಆನ್ಲೈನ್ ಶಾಪಿಂಗ್ ಅಂತೂ ಹೇಳಲೇಬೇಕೆಂದಿಲ್ಲ. ಯಾವ ಬೈಕ್ , ಯಾವ ಕಾರು, ಮನೆಯ ವಸ್ತುಗಳು. ಇದೆಲ್ಲವೂ ನಮಗೆ ಗೊತ್ತಾಗದೆ ನಮ್ಮ ಮನಸ್ಸಿಗೆ ಅಧಿಕ ಚಿಂತೆಗೆ ಒಳಪಡಿಸುತ್ತಿವೆ. ಅಧಿಕ ಆಲೋಚನೆಯಿಂದ ಅಧಿಕ ದಣಿವು ನಿಶ್ಚಿತ. ಈ ರೀತಿಯ ಆಲೋಚನೆ ತೆಗೆದುಕೊಳ್ಳುವ ನಿರ್ಧಾರಗಳು ಸರಮಾಲೆಯಂತೆ ಉದ್ದವಾಗುತ್ತಾ ಹೋದಂತೆ ನಮ್ಮ ಮಾನಸಿಕ ಆರೋಗ್ಯ ಕೆಡುತ್ತಾ ಹೋಗುತ್ತದೆ. ಮಾನಸಿಕ ದೌರ್ಬಲ್ಯದಿಂದ ನಮಗೆ ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳಲು ಕಷ್ಟವಾಗುತ್ತದೆ ಅಥವಾ ಕೆಲವೊಮ್ಮೆ ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳುವುದೇ ಇಲ್ಲ. ಇದನ್ನು ಡಿಸಿಷನ್ ಫಟೀಗ್ (Decision fatigue) ಎಂದು ಕರೆಯುತ್ತಾರೆ.

ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ದೈಹಿಕ ಪರಿಶ್ರಮ ಅಗತ್ಯವಿಲ್ಲದಿದ್ದರೂ ಮನಸ್ಸಿನ ಮೇಲೆ ವಿಪರೀತ ಒತ್ತಡವನ್ನು ಬಳಲಿಕೆಯನ್ನು ತರುತ್ತದೆ. ಕಂಪ್ಯೂಟರ್ ಎದುರುಗಡೆ ಕೂತು ಕೆಲಸ ಮಾಡುವವನಿಗೆ ದಣಿವು ಆಗೆ ಆಗುತ್ತದೆ. ಬೇರೆಯವರಿಗೆ ಅದು ಬರೀ ಕೂತು ಕೆಲಸ ಮಾಡಿದ ಎಂದು ಅನಿಸಿದರೂ ಅದರಲ್ಲಿ ಅನೇಕ ತರಹದ ಆಲೋಚನೆಗಳ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಇದರಿಂದ ಮನಸ್ಸಿಗೆ ಆಯಾಸವಾಗುವುದು ಸುಳ್ಳಲ್ಲ.

ಹೀಗೆ ಆಗದಂತೆ ಏನು ಮಾಡಬೇಕು?: ಪ್ರತಿದಿನ ಅಗತ್ಯವಿದ್ದ ಕೆಲಸಗಳಿಗೆ ಮಾತ್ರ ನಿರ್ಧಾರಗಳನ್ನು ತೆಗೆದುಕೊಳ್ಳಿರಿ. ಮಾಡಲೇಬೇಕಾದ ಪ್ರಮುಖ ನಿರ್ಧಾರಗಳು ಹಾಗೂ ಅಗತ್ಯವಿಲ್ಲದ ನಿರ್ಧಾರಗಳನ್ನು ಬೇರ್ಪಡಿಸಿ ಅದರ ಪಟ್ಟಿಯನ್ನು ಮಾಡಿ. ಚಿಕ್ಕಪುಟ್ಟ ನಿರ್ಧಾರಗಳು ಅಂದರೆ ಯಾವ ಉಡುಪು ಧರಿಸುವುದು ಯಾವ ತಿಂಡಿ ಮಾಡುವುದು ಇದಕ್ಕೆಲ್ಲ ವಾರಕ್ಕೊಮ್ಮೆ ಪ್ಲಾನ್ ಮಾಡಿ ಇಡಿ. ಯಾವ ಯಾವ ದಿನ ಯಾವ ಯಾವ ಅಡಿಗೆ ಯಾವ ಉಡುಪು ಯಾವ ವ್ಯಾಯಾಮ ಹೀಗೆ ನಿಮ್ಮ ಕೆಲಸಗಳನ್ನು ವಿಭಾಗಿಸಿ ಅದಕ್ಕೊಂದು ಸಮಯವನ್ನು ಮೀಸಲಿಡಿ. ದಿನಾಲು ಮಾಡುವಂತಹ ಕೆಲಸಗಳು ವಾರಕ್ಕೊಮ್ಮೆ ಮಾಡುವಂತಹ ಕೆಲಸ ತಿಂಗಳಗೊಮ್ಮೆ ಮಾಡುವಂತಹ ಕೆಲಸಗಳ ಪಟ್ಟಿ ಮಾಡಿ ಇಡಿರಿ. ಆದಷ್ಟು ದಿನಚರಿಯನ್ನು ಪಾಲಿಸಿ. ಇದರಿಂದ ಚಿಕ್ಕಪುಟ್ಟ ನಿರ್ಧಾರಗಳನ್ನು ದಿನನಿತ್ಯ ಮಾಡಬೇಕಾಗಿ ಬರುವುದಿಲ್ಲ. ಇದರಿಂದ ಅರ್ಧದಷ್ಟು ಮನಸ್ಸಿನ ಧಣಿವು ಕಡಿಮೆಯಾಗುತ್ತದೆ. ಆಗ ನಮ್ಮ ಜೀವನದಲ್ಲಿ ಮಾಡಬೇಕಾದ ಪ್ರಮುಖ ನಿರ್ಧಾರಗಳ ಮೇಲೆ ಗಮನಕೊಡಬಹುದು. ಆಯಾಸ ಆಗದ ಕಾರಣ ನಮ್ಮ ಮನಸ್ಸು ನಿರ್ಧಾರಗಳನ್ನು ತೆಗೆದುಕೊಳ್ಳಲು ಸಕ್ಷಮ್ಯವಾಗುತ್ತದೆ. ಸಮಯ ಸಮಯಕ್ಕೆ ಆಹಾರ ಸೇವಿಸುವುದು ಕೂಡ ಮುಖ್ಯವಾಗುತ್ತದೆ. ಆಗ ನಮ್ಮ ಮನಸ್ಸು ಸ್ಪೂರ್ತಿಯಿಂದ ಕೆಲಸ ಮಾಡುತ್ತದೆ.

ಜೀವನದಲ್ಲಿ ಯಶಸ್ಸು ಕಾಣಬೇಕಾದರೆ ನಮ್ಮ ಮನಸ್ಸು ಕ್ರಿಯಾಶೀಲವಾಗಿರಬೇಕು. ಚಿಂತನೆ ಆಲೋಚನೆಗಳನ್ನು ಮಾಡಲು ಮನಸ್ಸಿನಲ್ಲಿ ಜಾಗವಿರಬೇಕು. ನಾವು ತೆಗೆದುಕೊಳ್ಳುವ ನಿರ್ಧಾರಗಳು ಯಾವುದೇ ಅಡೆತಡೆ ಇಲ್ಲದೆ ಮನಃಸ್ಪೂರ್ವಕವಾಗಿರಬೇಕು.

-ಡಾ. ಹರ್ಷಾ ಕಾಮತ್

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ದೇಶಾದ್ಯಂತ ಇಂಧನ ಕೊರತೆ ಇಲ್ಲ: ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ

ನವದೆಹಲಿ, ಮಾ.25: ದೇಶಾದ್ಯಂತ ಇಂಧನ ಕೊರತೆ ಇಲ್ಲ ಎಂದು ಭಾರತ್ ಪೆಟ್ರೋಲಿಯಂ...

ದೇಶವು 26 ಕೋಟಿ ಟನ್ ಕಚ್ಚಾ ತೈಲವನ್ನು ಸಂಸ್ಕರಿಸುವ ಸಾಮರ್ಥ್ಯವನ್ನು ಹೊಂದಿದೆ: ಸರ್ಕಾರ

ನವದೆಹಲಿ, ಮಾ.25: ದೇಶವು 26 ಕೋಟಿ ಟನ್ ಕಚ್ಚಾ ತೈಲವನ್ನು ಸಂಸ್ಕರಿಸುವ...

ಕ್ಷಯರೋಗದ ಶಾಶ್ವತ ನಿರ್ಮೂಲನೆಗೆ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಲಿ: ಮನು ಪಟೇಲ್ ಬಿ.ವೈ

ಉಡುಪಿ, ಮಾ.25: ಕ್ಷಯರೋಗವು ಸಾರ್ವಜನಿಕ ಆರೋಗ್ಯ ವಲಯದಲ್ಲಿ ಸವಾಲನ್ನು ಒಡ್ಡುತ್ತಿದ್ದು, ದೇಶದಲ್ಲಿಯೇ...

ಏರ್ಲಪಾಡಿ: ಗಾಳಿ ಮಳೆಗೆ ಮನೆಯ ಮೇಲೆ ಮರ ಬಿದ್ದು ಹಾನಿ

ಉಡುಪಿ, ಮಾ.25: ಮಂಗಳವಾರ ಜಿಲ್ಲೆಯ ಕೆಲವೆಡೆ ಸುರಿದ ಗಾಳಿ ಮಳೆಗೆ ಅಲ್ಲಲ್ಲಿ...
error: Content is protected !!