2026 ರಲ್ಲಿ ಖಗೋಳ ವಿದ್ಯಾಮಾನಗಳ ಬಗ್ಗೆ ಒಂದಷ್ಟು ಮಾಹಿತಿ ಇಲ್ಲಿದೆ.
ಗ್ರಹಣಗಳು: ಪ್ರತಿ ವರ್ಷದಂತೆ ಈ ವರ್ಷವೂ ನಾಲ್ಕು ಗ್ರಹಣಗಳು ಸಂಭವಿಸಲಿವೆ. ಎರಡು ಸೂರ್ಯಗ್ರಹಣ ಹಾಗೂ ಎರಡು ಚಂದ್ರಗ್ರಹಣ. ಫೆಭ್ರವರಿ 17 ರಂದು ಕಂಕಣ ಸೂರ್ಯಗ್ರಹಣ (ಅಂಟಾರ್ಟಿಕಾ), ಆಗಸ್ಟ್ 12 ರಂದು ಖಗ್ರಾಸ ಸೂರ್ಯ ಗ್ರಹಣ (ಗ್ರೀನ್ ಲ್ಯಾಂಡ್ ಸ್ಪೈನ್ , ಹಾಗೂ ಆರ್ಕ್ಟಿಕ್) ಮಾರ್ಚ್ 3 ರಂದು ಖಂಡಗ್ರಾಸ ಚಂದ್ರಗ್ರಹಣ ಭಾರತಕ್ಕೆ, ಆಗಸ್ಟ್ 28 ರಂದು ಖಂಡಗ್ರಾಸ ಚಂದ್ರ ಗ್ರಹಣ (ಭಾರತಕ್ಕೆ ಇಲ್ಲ.) ಈ ನಾಲ್ಕರಲ್ಲಿ ಭಾರತದಲ್ಲಿ ಗೋಚರಿಸುವುದು ಒಂದೇ ಮಾರ್ಚ್ 3 ರ ಖಂಡಗ್ರಾಸ ಚಂದ್ರಗ್ರಹಣ. ಇದೂ ದಕ್ಷಿಣ ಭಾರತದವರಿಗೆ ಚಂದ್ರೋದಯಕ್ಕೆ ಸ್ವಲ್ಪ ಮಾತ್ರ ಉಳಿದಿರುವ ಗ್ರಹಣದ ಚಂದ್ರ. ಕೇವಲ ಹೆಚ್ಚೆಂದರೆ 8 ನಿಮಿಷಗಳ ಕಾಲ ಮಾತ್ರ.
ಉಲ್ಕಾಪಾತ ಹಾಗೂ ಧೂಮಕೇತುಗಳು: ಪ್ರತಿ ವರ್ಷದಂತೆ ಈ ವರ್ಷವೂ ಸುಮಾರು 30 ಕಣ್ಣಿಗೆ ಕಾಣುವ ಉಲ್ಕಾಪಾತಗಳಲ್ಲಿ 12 ಉಲ್ಕಾಪಾತಗಳು ಸಂಭವಿಸುತ್ತವೆ.
ಸೂರ್ಯ ಕಲೆಗಳು: ಸೂರ್ಯ ತನ್ನ 11 ವರ್ಷಗಳ ಕುಣಿತ , (ಸೂರ್ನ ಕಲೆಗಳು, ಸನ್ ಫ್ಲಾರ್, ಕೊರೋನಲ್ ಮಾಸ್ ಇಜೆಕ್ಷನ್ಗಳು) 25ನೇ ಆವೃತ್ತಿ ಕಳೆದ 2025 ರ ಜನವರಿಗೇ ಮುಗಿಯುವದೆಂದು ಅಂದಾಜಿಸಿದ್ದರೂ ಇನ್ನೂ ಮುಗಿದಿಲ್ಲ. ಎಕ್ಸ್, ಎಮ್ ಫ್ಲಾರ್, ಶಕ್ತಿಯುತ ಕಣ ಶಕ್ತಿಗಳ ಕೊರೋನಲ್ ಮಾಸ್ ಇಜೆಕ್ಷನ್ಸ್ ನಡೆಯುತ್ತಲೇ ಇದೆ. ಇದಕ್ಕೆ ಪೂರಕವಾಗಿ ಭೂಮಿಯಲ್ಲಿ ಅನೇಕಾನೇಕ ಜ್ವಾಲಾಮುಖಿಗಳು ಸಂಭವಿಸುತ್ತಲೇ ಇದೆ. ಸದ್ಯಕ್ಕೆ ಕಣ್ಣಿಗೆ ಕಾಣಬಹುದಾದ ಅಲೆಮಾರಿ ಧೂಮಕೇತುಗಳು ಗೋಚರಿಸಿಲ್ಲ.
-ಡಾ. ಎ.ಪಿ ಭಟ್ ಉಡುಪಿ




By
ForthFocus™