ನವೆಂಬರ್ 5 ಕಾರ್ತೀಕ ಹುಣ್ಣಿಮೆಯಂದು ಸೂಪರ್ಮೂನ್. ಶರತ್ಕಾಲದ ರಾತ್ರಿ ತಂಪು ತಂಪಾಗಿ ತೇವಭರಿತ ಹವಾಮಾನದಲ್ಲಿ ಶುಭ್ರ ಆಕಾಶ ನೋಡಲು ಆಹ್ಲಾದ. ಅದರಲ್ಲೂ ಹುಣ್ಣಿಮೆ ಚಂದ್ರ ಬೆಳದಿಂಗಳ ಹಾಲು ಹೊಯ್ದಂತೆ. ಈ ಬಾರಿ ವಿಶೇಷವಾಗಿ ಭವ್ಯ ಸೂಪರ್ಮೂನ್.
ಈ ವರ್ಷದ ಅಕ್ಟೋಬರ್, ನವಂಬರ್ ಹಾಗೂ ಡಿಸೆಂಬರ್ ಮೂರು ಸೂಪರ್ಮೂನ್ ಗಳಲ್ಲಿ ಈಗ ನಡೆಯುವ ಸೂಪರ್ ಮೂನ್ ಭೂಮಿಗೆ ಸಮೀಪವಿದ್ದು ದೊಡ್ಡದು. ಭೂಮಿಗೆ ದೀರ್ಘವೃತ್ತದಲ್ಲಿ 28 ದಿನಗಳಿಗೊಮ್ಮೆ ತಿರುಗುವ ಚಂದ್ರ ಭೂಮಿಗೊಮ್ಮೆ ಸಮೀಪವಿರುವುದುಂಟು. (3,56,400ಕಿಮೀ). ಆಗ ಹುಣ್ಣಿಮೆಯಾದಲ್ಲಿ ಚಂದ್ರ ಮಾಮೂಲಿಗಿಂತ ದೊಡ್ಡದಾಗಿ ಕಾಣುವನು. ಈ ವರ್ಷದ ಮೂರು ಸೂಪರ್ ಮೂನ್ಗಳು ಅಕ್ಟೋಬರ್, ನವಂಬರ್ ಹಾಗೂ ಡಿಸೆಂಬರ್ ನಲ್ಲಿವೆಯಾದರೂ ಭೂಮಿಗೆ ಅತೀ ಸಮೀಪ ಈ ನವಂಬರ್ 5ರ ಹುಣ್ಣಿಮೆಯದ್ದು. ಅದು 3, 57,000 ಕಿಮೀಗೆ ಬಂದು ಸರಾಸರಿ ದೂರಕ್ಕಿಂತ 27,000 ಕಿಮೀ ಭೂಮಿಗೆ ಹತ್ತಿರ ಬರುವುದಿದೆ. 14 ಅಂಶ ದೊಡ್ಡದಾಗಿ ಕಂಡು 27ಅಂಶ ಹೆಚ್ಚಿನ ಬೆಳದಿಂಗಳಿಂದ ಚಂದ್ರ ಹೊಳೆಯಲಿದೆ. ಅಂದು ಅಕಾಲಿಕ ಮಳೆಯಿಲ್ಲದಿದ್ದಲ್ಲಿ ನಮ್ಮ ಹುಣ್ಣಿಮೆಯ ಸೂಪರ್ ಮೂನ್ ಸೂಪರ್ ಆಗಿ ಕಾಣಿಸಲಿದೆ.
ಡಾ. ಎ.ಪಿ ಭಟ್ ಉಡುಪಿ




By
ForthFocus™