ಈ ವರ್ಷದ ಸೂಪರ್ಮೂನ್ ಗಳ ಸರದಿ ಪ್ರಾರಂಭ ಇಂದೇ. ಈ ವರ್ಷಾಂತ್ಯದ ಅಕ್ಟೋಬರ್ 7 ನವಂಬರ್ 5 ಹಾಗೂ ಡಿಸೆಂಬರ್ 4 ರ ಹುಣ್ಣಿಮೆಗಳೆಲ್ಲ ಸೂಪರ್ಮೂನ್ ಗಳೇ. ಭೂಮಿ ಹಾಗೂ ಚಂದ್ರರ ಸರಾಸರಿ ದೂರ 3 ಲಕ್ಷದ 84 ಸಾವಿರ ಕಿಮೀ. ಇಂದು ಸುಮಾರು 3 ಲಕ್ಷದ 61 ಸಾವಿರ ಕೀಮೀ ಗೆ ಬರುವ ಚಂದ್ರ ಸುಮಾರು 23 ಸಾವಿರ ಕಿಮೀ ಸಮೀಪ ಬಂದು ಸುಮಾರು 18 ಅಂಶ ದೊಡ್ಡದಾಗಿ ಕಾಣಿಸಲಿದ್ದಾನೆ. ಬೆಳದಿಂಗಳೂ ಹೆಚ್ಚು.
ಹುಣ್ಣಿಮೆಯೇ ಚೆಂದ. ಶರತ್ಕಾಲದ ಆಶ್ವಯುಜ ಆಕಾಶ ಭವ್ಯ. ತಿಳಿ ಬಿಳಿ ತೇಲುವ ಮೋಡಗಳ ಮಧ್ಯೆ ಬೆಳ್ಳಂ ಬೆಳದಿಂಗಳ ಚಂದ್ರಮ ಇನ್ನೂ ಚೆಂದ. ಅದರಲ್ಲೂ ಈಗ ಬಂದಿರುವ ಶರತ್ಕಾಲದ ಸೂಪರ್ ಮೂನ್ ನ ಬೆಳದಿಂಗಳನ್ನು ಸವಿಯಬೇಕು. ಅಲ್ಲಲ್ಲಿ ತೇಲುವ ಮಂಜುಗಡ್ಡೆಗಳ ಬಿಳಿ ಹಳದಿ ವರ್ತುಲದ ಹ್ಯಾಲೋ ಕೂಡಾ ಕಾಣಸಿಗಬಹುದು. ಪ್ರಕೃತಿಯ ವೈಭವವನ್ನು ಆರಾಧಿಸಿ, ಆಸ್ವಾದಿಸಿ.
ಡಾ. ಎ.ಪಿ ಭಟ್ ಉಡುಪಿ.




By
ForthFocus™