Home ಅಂಕಣ ಈ ಹುಣ್ಣಿಮೆಯಿಂದ ಸೂಪರ್ ಮೂನ್ ಗಳ ಸರಮಾಲೆ

ಈ ಹುಣ್ಣಿಮೆಯಿಂದ ಸೂಪರ್ ಮೂನ್ ಗಳ ಸರಮಾಲೆ

356
0

ನಾಳೆಯಿಂದ (ಜುಲೈ 3) ನಾಲ್ಕು ಹುಣ್ಣಿಮೆಗಳೂ ಸೂಪರ್ ಮೂನ್. ಜುಲೈ 3, ಆಗಸ್ಟ್ 1, ಆಗಸ್ಟ್ 31, ಹಾಗೂ ಸಪ್ಟಂಬರ್ 29 ಎಲ್ಲಾ ಹಣ್ಣಿಮೆಗಳೂ ಸೂಪರ್ ಮೂನ್ ಗಳೇ. ಸೂಪರ್ಮೂನ್ ಎಂದರೆ ಹುಣ್ಣಿಮೆ ದಿನ ಚಂದ್ರ ಮಾಮೂಲಿಗಿಂತ ದೊಡ್ಡದಾಗಿ ಕಾಣುವುದು. ಎಲ್ಲಾ ಹುಣ್ಣಿಮೆಗಳಲ್ಲಿ ಚಂದ್ರ ಒಂದೇ ಗಾತ್ರದಲ್ಲಿ ಕಾಣುವುದಿಲ್ಲ. ಸೂಪರ್ಮೂನ್ಗಳಲ್ಲಿ ಮಾಮೂಲಿ ಗಾತ್ರಕ್ಕಿಂತ ದೊಡ್ಡದಾಗಿ ಕಂಡರೆ, ಮೈಕ್ರೊ ಮೂನ್ಗಳಲ್ಲಿ ಚಿಕ್ಕದಾಗಿ ಕಾಣುತ್ತದೆ. ಇದಕ್ಕೆ ಕಾರಣ ಚಂದ್ರ ಭೂಮಿಯಿಂದ ಯಾವಾಗಲೂ ಒಂದೇ ಸಮಾನವಾದ ದೂರದಲ್ಲಿರುವುದಿಲ್ಲ. ಚಂದ್ರ ಭೂಮಿಯ ಸುತ್ತ ಸುತ್ತುವ ಪಥ ದೀರ್ಘವೃತ್ತ ಆಗಿರುವುದರಿಂದ ಒಂದು ಸುತ್ತು ಸುತ್ತುವಾಗ ಒಮ್ಮೆ ಅತೀದೂರ (ಅಪೊಜಿ) ಅಪಭೂದಲ್ಲಿದ್ದರೆ ಒಮ್ಮೆ ಅತೀ ಸಮೀಪ (ಪೆರಿಜಿ) ಪರಭೂದಲ್ಲಿರುತ್ತದೆ.

ಚಂದ್ರ ಭೂಮಿಗಳ ಸರಾಸರಿ ದೂರ 3,84,400 ಕಿಮೀ ಆದರೆ, ಸಮೀಪ ದೂರ 3,56,000 ಕಿಮೀ ಹಾಗೂ ದೂರದ ದೂರ 4,06000 ಕಿಮೀ. ಹತ್ತಿರ ಬಂದಾಗ ವಸ್ತು ದೊಡ್ಡದಾಗಿ ಕಾಣುವುದು, ದೂರ ಹೋದಂತೆ ಚಿಕ್ಕದಾಗಿ ಕಾಣುವುದು ಪ್ರಕೃತಿ ನಿಯಮ. ಹಾಗಾಗಿ ಸೂಪರ್ ಮೂನಿನ ದಿನ ಚಂದ್ರ ಸುಮಾರು 30 ಸಾವಿರ ಕಿಮೀ ಹತ್ತಿರ ಬರುವುದರಿಂದ ಸುಮಾರು 14 ಅಂಶ ದೊಡ್ಡದಾಗಿ ಕಂಡು ಸುಮಾರು 24 ಅಂಶದಷ್ಟು ಚಂದ್ರಪ್ರಭೆ ಹೆಚ್ಚಿರುತ್ತದೆ.

ಜುಲೈ 3ರಂದು ಚಂದ್ರ ಭೂಮಿಯಿಂದ 3,61,800 ಕಿಮೀ, ಆಗಸ್ಟ್ 1 ರಂದು 3,57,530 ಕಿಮೀ, ಆಗಸ್ಟ್ 31 ರಂದು 3,57,344 ಕಿಮೀ ಹಾಗೂ ಸಪ್ಟಂಬರ್ 29 ರಂದು 3,61,552 ಕಿಮೀ ಇರಲಿದೆ. ಸಮುದ್ರದ ಭರತ ಇಳಿತಗಳಿಗೆ ಚಂದ್ರನ ಆಕರ್ಷಣೆಯೂ ಕಾರಣ. ಹಾಗಾಗಿ ಸೂಪರ್ ಮೂನ್ ಸಂದರ್ಭದಲ್ಲಿ ಸಮುದ್ರದ ತರೆಗಳ ಅಬ್ಬರ ಹೆಚ್ಚಿರುತ್ತದೆ.

-ಡಾ. ಎ.ಪಿ.ಭಟ್, ಉಡುಪಿ
ಖಗೋಳಶಾಸ್ತ್ರಜ್ಞರು

 

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.