ಕೋಟ, ಮೇ 10: ತೋಟಗಾರಿಕಾ ಇಲಾಖೆ, ಜಿಲ್ಲಾ ಪಂಚಾಯತ್ ಉಡುಪಿ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಡುಪಿ ಇವರ ಸಹಯೋಗದಲ್ಲಿ 2023-24 ನೇ ಸಾಲಿನ ಜಿಲ್ಲಾ ಪಂಚಾಯತ್ ಪ್ರಚಾರ ಮತ್ತು ಸಾಹಿತ್ಯ ಯೋಜನೆಯಡಿ ತೋಟಗಾರಿಕಾ ಬೆಳೆಯಲ್ಲಿ ಆಧುನಿಕ ಯಂತ್ರೋಪಕರಣಗಳ ಬಳಕೆ ಕುರಿತು ಕ್ಷೇತ್ರೋತ್ಸವ ಸಾಲಿಗ್ರಾಮದ ಪಾರಂಪಳ್ಳಿ ರಘು ಮಧ್ಯಸ್ಥರ ತೋಟದಲ್ಲಿ ಜರಗಿತು. ಪಾರಂಪಳ್ಳಿ ಹಿರಿಯ ಕೃಷಿಕ ರಘು ಮಧ್ಯಸ್ಥ ಉದ್ಘಾಟಿಸಿ ಮಾತನಾಡುತ್ತಾ, ಆಧುನಿಕತೆ ಮುಂದುವರಿದಂತೆ ಯಂತ್ರೋಪಕರಣಗಳ ಮೂಲಕ ಮನುಷ್ಯನ ಕೆಲಸ ಕಡಿಮೆಗೊಳ್ಳುತ್ತಿದೆ. ಕೃಷಿ ಕಾರ್ಯದಲ್ಲಿ ಮಹಿಳೆಯರಿಗೆ ಹೆಚ್ಚು ಹೆಚ್ಚು ಪಾಲ್ಗೊಂಡು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಕರೆಯಿತ್ತರು. ಮುಖ್ಯ ಅತಿಥಿ ಕೇಂದ್ರ ಹಾಗೂ ರಾಜ್ಯ ಕೃಷಿ ಪುರಸ್ಕಾರ ಪಡೆದ ರಮೇಶ್ ಹೇರ್ಳೆ ಮಾತನಾಡಿ, ಇಂದು ಕೃಷಿಯಲ್ಲಿ ಬಳಕೆ ಮಾಡುತ್ತಿರುವ ರಾಸಾಯನಿಕ ಹಾಗೂ ಸಾವಯವ ಗೊಬ್ಬರ, ಕೃಷಿಯ ಬಗ್ಗೆ ಹಾಗೂ ಆಧುನಿಕತೆಯನ್ನು ಹೇಗೆ ಅಳವಡಿಸಿಕೊಳ್ಳಬೇಕು ಎಂದು ಮಾಹಿತಿ ನೀಡಿದರು. ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ಹೇಮಂತ್ ಕುಮಾರ್ ತೋಟಗಾರಿಕಾ ಇಲಾಖೆಯ ಯೋಜನೆಗಳು ಮತ್ತು ಸಹಾಯಧನಗಳ ಕುರಿತು ಮಾಹಿತಿ ನೀಡಿ ಇಂದಿನ ಆಧುನಿಕ ಜಗತ್ತು ಬಹಳಷ್ಟು ಮುಂದುವರಿದಿದ್ದು ತೆಂಗಿನ ಮರವನ್ನು ಕೂಡ ಬಹಳ ಸುಲಭವಾಗಿ ಯಂತ್ರದ ಮೂಲಕ ಏರಬಹುದು. ಹಾಗೆಯೇ ಅಡಿಕೆ ಮರಗಳಿಗೆ ಔಷಧ ಸಿಂಪಡಿಸುವ ಯಂತ್ರ, ಹುಲ್ಲು ಕಟಾವು ಯಂತ್ರ ಇನ್ನಿತರ ಯಂತ್ರಗಳ ಕುರಿತು ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ತೋಟಗಾರಿಕಾ ಇಲಾಖೆಯ ರಾಹುಲ್, ಅಂಗನವಾಡಿ ಕಾರ್ಯಕರ್ತೆಯರು, ಕೃಷಿಕರು ಉಪಸ್ಥಿತರಿದ್ದರು. ಖುಷಿ ಸ್ವಾಗತಿಸಿ, ಅಂಗನವಾಡಿ ಮೇಲ್ವಿಚಾರಕಿ ಲಕ್ಷ್ಮಿ ವಂದಿಸಿದರು. ಜಿಲ್ಲಾ ಮಹಿಳಾ ಸಬಲೀಕರಣ ಘಟಕದ ಜೆಂಡರ್ ಸ್ಪೆಷಲಿಸ್ಟ್ ದೀಪಾ ಕಾರ್ಯಕ್ರಮ ನಿರೂಪಿಸಿದರು.
ತೋಟಗಾರಿಕಾ ಇಲಾಖೆಯ ಸವಲತ್ತುಗಳನ್ನು ಪಡೆದುಕೊಳ್ಳಿ: ಪಾರಂಪಳ್ಳಿ ರಘು ಮಧ್ಯಸ್ಥ
ತೋಟಗಾರಿಕಾ ಇಲಾಖೆಯ ಸವಲತ್ತುಗಳನ್ನು ಪಡೆದುಕೊಳ್ಳಿ: ಪಾರಂಪಳ್ಳಿ ರಘು ಮಧ್ಯಸ್ಥ
Date: