ಉಡುಪಿ, ಮೇ 5: ಉಡುಪಿ ಸಿ.ಎಸ್.ಐ ಇಮಾನ್ಯೂಲ್ ಚರ್ಚ್ ಪಾದೂರು ಕಾಪು, ಮಿಷನ್ ಆಸ್ಪತ್ರೆ, ಜಯಂಟ್ಸ್ ಗ್ರೂಪ್, ವೈದ್ಯಕೀಯ ಪ್ರತಿನಿಧಿಗಳ ಸಂಘ ಮತ್ತು ಗಿರಿಜಾ ಸರ್ಜಿಕಲ್ ಮತ್ತು ಐ ನೀಡ್ಸ್ ಅಪ್ಟಿಕಲ್ ವತಿಯಿಂದ ಪಾದೂರು ಯು.ಬಿ.ಎಂ ಶಾಲಾ ವಠಾರದಲ್ಲಿ ಬೃಹತ್ ವೈದ್ಯಕೀಯ ತಪಾಸಣಾ ಶಿಬಿರ ನಡೆಯಿತು. ಶಿಬಿರದಲ್ಲಿ ತಜ್ಞ ವೈದ್ಯರುಗಳಾದ ಡಾ. ಗಣಿೀಶ್ ಕಾಮತ್, ಡಾ. ಅರ್ಜುನ್ ಬಲ್ಲಾಳ, ಡಾ. ಪ್ರತೀಕ್ಷಾ, ಡಾ. ಬ್ಲೆಸ್ಸಿಂಗ್ ಡಾಲಿ ಎಸ್ ಮುಂತಾದವರಿದ್ದರು. ಆಸ್ಪತ್ರೆಯ ಪಿ.ಆರ್.ಓ ರೋಹಿ ರತ್ನಾಕರ್, ವೈದ್ಯಕೀಯ ಪ್ರತಿನಿಧಿ ಸುಕೇಶ್, ಚರ್ಚ್ ನ ಸಭಾ ಪಾಲನಾ ಸಮಿತಿಯವರು ಉಪಸ್ಥಿತರಿದ್ದರು.
ಬೃಹತ್ ವೈದ್ಯಕೀಯ ತಪಾಸಣಾ ಶಿಬಿರ
ಬೃಹತ್ ವೈದ್ಯಕೀಯ ತಪಾಸಣಾ ಶಿಬಿರ
Date: