ಉಡುಪಿ, ಏ.26: ರಾಜ್ಯದಲ್ಲಿ ಮೊದಲ ಹಂತದ ಮತದಾನ ಶುಕ್ರವಾರ ಆರಂಭಗೊಂಡಿದೆ. ಯಾವುದೇ ಕೆಲಸವಿದ್ದರೂ ಅವುಗಳನ್ನು ಬದಿಗೊತ್ತಿ ಪ್ರಜಾಪ್ರಭುತ್ವದಲ್ಲಿ ಅತ್ಯಂತ ಮಹತ್ವದ ಕಾರ್ಯವಾದ ಮತದಾನವನ್ನು ತಪ್ಪದೇ ಮಾಡಿ. ಯಾವುದೇ ಆಮಿಷಕ್ಕೆ ಒಳಗಾಗದೇ ದೇಶದ ಸಮಗ್ರ ಅಭಿವೃದ್ಧಿ ಹಾಗೂ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಸೂಕ್ತ ಅಭ್ಯರ್ಥಿಯನ್ನು ಆಯ್ಕೆ ಮಾಡಿ.
ಮತದಾನಕ್ಕೆ ಯಾವ ದಾಖಲೆಗಳು ಬೇಕು?: ಮತದಾರರ ಚೀಟಿ ಇದ್ದರೆ ಉತ್ತಮ. ಚೀಟಿ ಇಲ್ಲದವರು ಆಧಾರ್ ಕಾರ್ಡ್, ಭಾವಚಿತ್ರವಿರುವ ಬ್ಯಾಂಕ್/ ಪೋಸ್ಟ್ ಆಫೀಸ್ ಪಾಸ್ ಬುಕ್, ಡ್ರೈವಿಂಗ್ ಲೈಸನ್ಸ್, ಪ್ಯಾನ್ ಕಾರ್ಡ್, ಭಾರತದ ಪಾಸ್ ಪೋರ್ಟ್, ಭಾವಚಿತ್ರವಿರುವ ಪಿಂಚಣಿಯ ದಾಖಲೆ, ಸರಕಾರದ ಸೇವೆಯ ಗುರುತಿನ ಚೀಟಿ ಮುಂತಾದ ಯಾವುದೇ ಅಧಿಕೃತ ಭಾವಚಿತ್ರವಿರುವ ಗುರುತಿನ ದಾಖಲೆಗಳು ಇದ್ದರೆ ಮತದಾನ ಮಾಡಬಹುದು.