Home ಸುದ್ಧಿಗಳು ಪ್ರಾದೇಶಿಕ ಥಾಯ್ಲೆಂಡ್ ನಿಂದ ತಾಯ್ನಾಡಿಗೆ ಮತದಾನಕ್ಕಾಗಿ ಆಗಮಿಸಿದ ಉಡುಪಿಯ ಯುವಕ

ಥಾಯ್ಲೆಂಡ್ ನಿಂದ ತಾಯ್ನಾಡಿಗೆ ಮತದಾನಕ್ಕಾಗಿ ಆಗಮಿಸಿದ ಉಡುಪಿಯ ಯುವಕ

665
0

ಉಡುಪಿ, ಏ.25: ಮತದಾನ ಎಂಬುದು ನಾಗರಿಕರ ಪರಮಶ್ರೇಷ್ಠ ಹಕ್ಕು. ಅದನ್ನು ತಪ್ಪದೇ ಚಲಾಯಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ಶೇ.100 ರಷ್ಟು ಮತದಾನ ಆಗಬೇಕು ಎಂದು ಚುನಾವಣಾ ಆಯೋಗ, ಸ್ವೀಪ್ ಸಮಿತಿ ನಿರಂತರವಾಗಿ ಮತದಾರರಲ್ಲಿ ಅತ್ಯುತ್ತಮವಾಗಿ ಅರಿವನ್ನು ಮೂಡಿಸಿದೆ. ಜಾಗೃತಿ ಸಂದೇಶ, ಪ್ರತಿಜ್ಞಾ ವಿಧಿ, ಫ್ಲೆಕ್ಸ್, ಯಕ್ಷಗಾನ, ಬೀದಿ ನಾಟಕ ಹೀಗೆ ಹತ್ತು ಹಲವು ರೀತಿಯಲ್ಲಿ ಜನರಲ್ಲಿ ಮತದಾನದ ಪ್ರಜ್ಞೆಯನ್ನು ಜಾಗೃತಗೊಲಿಸಲು ಪ್ರಾಮಾಣಿಕ ಪ್ರಯತ್ನಗಳನ್ನು ನಡೆಸಿದೆ.

ಆದರೂ ಕೆಲವು ‘ಶಿಕ್ಷಿತರು’ ಮತದಾನದ ರಜೆಯನ್ನು ದುರುಪಯೋಗಪಡಿಸಿ ತವರು ಮನೆಗೆ, ಅಜ್ಜಿ ಮನೆಗೆ, ಅಜ್ಜನ ಮನೆಗೆ, ಉತ್ತರ ಭಾರತ ಪ್ರವಾಸ, ಹೀಗೆ ಸರಣಿ ರಜೆಯ ಮಜಾ ಉಡಾಯಿಸಲು ಮತದಾನ ಮಾಡದೇ ಹೋಗಿರುವ ಅದೆಷ್ಟೋ ಉದಾಹರಣೆಗಳು ನಮ್ಮ ಕಣ್ಣ ಮುಂದಿವೆ. ಇದರಲ್ಲಿ ನಗರವಾಸಿಗಳ ಮೇಲುಗೈ. ಮತದಾನ ಕೇಂದ್ರ ಮನೆಯಿಂದ ಒಂದೆರಡು ಕಿಮೀ ಒಳಗೆ ಇದ್ದರೂ ಮತದಾನ ಮಾಡದೆ ನೆಟ್ ಫ್ಲಿಕ್ಸ್ ನಲ್ಲಿ ಸಿನೆಮಾ ವೀಕ್ಷಿಸಿ ರಜೆಯನ್ನು ದುರುಪಯೋಗಪಡಿಸಿಕೊಳ್ಳುತ್ತಾರೆ.

ಇಂತಹ ಮೈಗಳ್ಳರಿಗೆ ತದ್ವಿರುದ್ಧವಾಗಿ ಇಲ್ಲೊಬ್ಬರು ವಿದೇಶದಿಂದ ಮತದಾನಕ್ಕಾಗಿಯೇ ಉಡುಪಿ ತಾಲೂಕಿನ ಮೂಡಬೆಟ್ಟುಗೆ ಬಂದಿದ್ದಾರೆ. ಹೌದು, ಥಾಯ್ಲೆಂಡ್ ನಲ್ಲಿ ಉದ್ಯೋಗದಲ್ಲಿರುವ ಸುಶಾಂತ್ ಕೆರೆಮಠ ಎಂಬವರು ಲೋಕಸಭಾ ಚುನಾವಣೆಗಾಗಿ ತಮ್ಮ ಅಮೂಲ್ಯವಾದ ಮತ ಚಲಾಯಿಸಲು ಉಡುಪಿಗೆ ಆಗಮಿಸಿದ್ದಾರೆ. ತನ್ನ ಹಕ್ಕನ್ನು ಚಲಾಯಿಸಿ ಶನಿವಾರವೇ (ಏ.27) ವಿಮಾನ ಹತ್ತಿ ವಾಪಾಸು ಥಾಯ್ಲೆಂಡ್ ಗೆ ಹೋಗಲಿದ್ದೇನೆ ಎಂದು ‘ಉಡುಪಿ ಬುಲೆಟಿನ್’ ಗೆ ಸುಶಾಂತ್ ಕೆರೆಮಠ ಮಾಹಿತಿ ನೀಡಿದ್ದಾರೆ. ಸ್ವಂತ ಖರ್ಚಿನಿಂದ ಪ್ರಜಾಪ್ರಭುತ್ವ ಬಲಪಡಿಸಲು ಸುಶಾಂತ್ ಅವರಂತಹ ಯುವಕರು ಸದಾ ಪ್ರೇರಣೆಯಾಗಿದ್ದಾರೆ. ಇನ್ನಾದರೂ ಉದಾಸೀನ ಬಿಟ್ಟು ಮತದಾನ ಮಾಡೋಣ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.