ಮುಂಬಯಿ, ಏ.5: ಭಾರತೀಯ ರಿಸರ್ವ್ ಬ್ಯಾಂಕ್ ಸತತ ಏಳನೇ ಬಾರಿಗೆ ರೆಪೊ ದರವನ್ನು ಯಥಾಸ್ಥಿತಿಯಲ್ಲಿರಿಸಿದೆ. ಆರ್.ಬಿ.ಐ ಗವರ್ನರ್ ಶಕ್ತಿಕಾಂತ ದಾಸ್ ಅವರು ಶುಕ್ರವಾರ ಬೆಳಗ್ಗೆ ದ್ವೈಮಾಸಿಕ ಹಣಕಾಸು ನೀತಿಯನ್ನು ಪ್ರಕಟಿಸಿದರು. ವಿತ್ತೀಯ ನೀತಿ ಸಮಿತಿಯು (ಎಂಪಿಸಿ) ರೆಪೊ ದರವನ್ನು ಯಥಾಸ್ಥಿತಿಯಲ್ಲಿ ಶೇ.6.5ರಲ್ಲೇ ಇರಿಸಲು ನಿರ್ಧರಿಸಿದೆ ಎಂದು ಅವರು ಹೇಳಿದರು. ಪರಿಣಾಮವಾಗಿ, ಸ್ಥಾಯಿ ಠೇವಣಿ ಸೌಲಭ್ಯ (ಎಸ್.ಡಿ.ಎಫ್) ದರವು 6.25 ಶೇಕಡಾ ಮತ್ತು ಮಾರ್ಜಿನಲ್ ಸ್ಟ್ಯಾಂಡಿಂಗ್ ಫೆಸಿಲಿಟಿ (ಎಂ.ಎಸ್.ಎಫ್) ದರ ಮತ್ತು ಬ್ಯಾಂಕ್ ದರವು 6.75 ಶೇಕಡಾದಲ್ಲಿ ಉಳಿಯುತ್ತದೆ ಎಂದು ಹೇಳಿದರು. ಮಾರ್ಚ್ 29, 2024 ರ ಹೊತ್ತಿಗೆ ಭಾರತದ ವಿದೇಶಿ ವಿನಿಮಯ ಮೀಸಲು 645.6 ಶತಕೋಟಿ ಡಾಲರ್‌ಗಳ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿದೆ ಎಂದು ಅವರು ಮಾಹಿತಿ ನೀಡಿದರು.
ಸತತ 7ನೇ ಬಾರಿಗೆ ರೆಪೋ ದರದಲ್ಲಿ ಬದಲಾವಣೆಯಿಲ್ಲ: ಭಾರತೀಯ ರಿಸರ್ವ್ ಬ್ಯಾಂಕ್
ಸತತ 7ನೇ ಬಾರಿಗೆ ರೆಪೋ ದರದಲ್ಲಿ ಬದಲಾವಣೆಯಿಲ್ಲ: ಭಾರತೀಯ ರಿಸರ್ವ್ ಬ್ಯಾಂಕ್
Date: