ಉಡುಪಿ, ಮಾ.24: ಕೃಷ್ಣಮಠದ ಸಂಪ್ರದಾಯದಂತೆ ಹೋಳಿಹುಣ್ಣಿಮೆಯ ನಿಮಿತ್ತ ಚಂದ್ರಶಾಲೆಯಲ್ಲಿ ಮಠದ ಭಾಗವತರು ವಾದಿರಾಜ ವಿರಚಿತ ಧುಮ್ಮಿಸಾಲೆನ್ನಿರೊ ಕೃತಿಯನ್ನು ಹಾಡಿದ ನಂತರ ವಾದ್ಯದವರು ಅದನ್ನು ಮತ್ತೆ ನಾದಸ್ವರದಲ್ಲಿ ನುಡಿಸುವರು. ನಂತರ ಪರ್ಯಾಯ ಮಠಾಧೀಶರಾದ ಶ್ರೀ ಸುಗುಣೇಂದ್ರ ತೀರ್ಥರು ಭಾಗವತರು ಹಾಗೂ ವಾದ್ಯದವರಿಗೆ ಶಾಲು ಹೊದಿಸಿ, ಪ್ರಾರ್ಥಿಸಿ ಬಣ್ಣ, ಹಣ್ಣುಕಾಯಿಯನ್ನು ಮಠದ ದಿವಾನರಿಗೆ ಕೊಟ್ಟು ಕಡಿಯಾಳಿಗೆ ಹೋಗಿ ದೇವಿಗೆ ಸಮರ್ಪಿಸಿ ಬರುವಂತೆ ನಿರ್ದೇಶಿಸುತ್ತಾರೆ.
ನಂತರ ದಿವಾನರು ಸಹಿತ ಮಠದವರು ಬಿರುದಾವಲಿಗಳೊಂದಿಗೆ ಕಡಿಯಾಳಿ ದೇವಳಕ್ಕೆ ಹೋಗಿ ದೇವಿಗೆ ಪೂಜೆ ಸಲ್ಲಿಸಿ ಮರಳಿ ಬಂದು ದೇವಿಯ ಪ್ರಸಾದವನ್ನು ಯತಿದ್ವಯರಿಗೆ ಸಮರ್ಪಿಸುತ್ತಾರೆ.
ಕೃಷ್ಣಮಠದಲ್ಲಿ ಹೋಳಿಹುಣ್ಣಿಮೆಯ ವಿಶಿಷ್ಟ ಸಂಪ್ರದಾಯ
ಕೃಷ್ಣಮಠದಲ್ಲಿ ಹೋಳಿಹುಣ್ಣಿಮೆಯ ವಿಶಿಷ್ಟ ಸಂಪ್ರದಾಯ
Date: