Monday, November 25, 2024
Monday, November 25, 2024

ಅಡ್ಡ ಮತದಾನ ಒಂದು ಸಾರ್ವತ್ರಿಕ ಪಿಡುಗು

ಅಡ್ಡ ಮತದಾನ ಒಂದು ಸಾರ್ವತ್ರಿಕ ಪಿಡುಗು

Date:

ಡ್ಡ ಮತದಾನ ಕೇವಲ ಕರ್ನಾಟಕದಲ್ಲಿ ಮಾತ್ರವಲ್ಲ, ಉತ್ತರ ಪ್ರದೇಶ, ಹಿಮಾಚಲ ಪ್ರದೇಶದಲ್ಲಿಯೂ ಆಗಿದೆ. ಇದು ಇಂದು ಮಾತ್ರವಲ್ಲ ಹಿಂದೆಯೂ ಆಗಿದೆ. ಬರೇ ‘ಈವ’ ಪಕ್ಷದಿಂದ ಮಾತ್ರವಲ್ಲ’ಆ’ ಪಕ್ಷದಿಂದಲೂ ಆಗಿದೆ. ಹಾಗಾಗಿ ಇದೊಂದು ಸಾರ್ವತ್ರಿಕ ಸಾರ್ವಕಾಲಿಕ ಸಾಂಕ್ರಾಮಿಕ ಪಿಡುಗು ಅನ್ನುವುದರಲ್ಲಿ ಎರಡು ಮಾತಿಲ್ಲ. ಈಗ ನಮ್ಮ ಚರ್ಚೆಗೆ ಗ್ರಾಸವಾಗಬೇಕಾದ ವಿಚಾರವೆಂದರೆ ಇವರನ್ನು ಅನರ್ಹಗೊಳಿಸಬೇಕಾ ಅಮಾನತುಗೊಳಿಸಬೇಕಾ ಅನ್ನುವುದಕ್ಕಿಂತ ಇನ್ನೊಂದು ಪ್ರಶ್ನೆ ಮೂಲಭೂತವಾಗಿ ಉದ್ಭವಿಸುತ್ತದೆ. ಜನರಿಂದ ಆಯ್ಕೆಯಾದ ಶಾಸಕರುಗಳಿಗೆ ತಮ್ಮ ಮತವನ್ನು ಚಲಾಯಿಸುವಾಗಲೂ ವೈಯಕ್ತಿಕ ಸ್ವಾತಂತ್ರ್ಯವಿಲ್ಲವೇ? ಎಲ್ಲವೂ ಪಕ್ಷದ ನಿರ್ಣಯದಂತೆ ನಡೆದುಕೊಳ್ಳಬೇಕು ಅನ್ನುವುದಾದರೆ ನಮ್ಮದು ಸಂಸದೀಯ ಪ್ರಜಾಪ್ರಭುತ್ವವಾಗುವುದಾರೂ ಹೇಗೆ? ಜನರಿಂದ ಚುನಾಯಿತ ಜನಪ್ರತಿನಿಧಿಗಳನ್ನು ‘ವಿಪ್’ ಅನ್ನುವ ಅಸ್ತ್ರ ಬಳಸಿ ಪಕ್ಷದ ಶಿಸ್ತಿಗೆ ಒಳಪಡಿಸಿ ಅಭಿಪ್ರಾಯ ನೀಡಬೇಕು ಇಲ್ಲವಾದರೆ ಶಾಸಕತ್ವ ಕಳೆದುಕೊಳ್ಳಬೇಕು ಅನ್ನುವ ಪಕ್ಷಾಂತರ ಕಾಯಿದೆ ಹೇರುವುದು ಎಷ್ಟು ಸೂಕ್ತ? ಇದನ್ನು ಕೂಡಾ ನಮ್ಮ ಘನವೆತ್ತ ನ್ಯಾಯಾಲಯ ಗಂಭೀರವಾಗಿ ಪರಿಗಣಿಸಬೇಕು. ಬೇಕಾದರೆ ಪಕ್ಷಕ್ಕೆ ರಾಜೀನಾಮೆ ನೀಡಲಿ ಶಾಸಕತನಕ್ಕೆ ರಾಜೀನಾಮೆ ನೀಡಬೇಕು ಅನ್ನುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಕಳಂಕ.

ನಮ್ಮ ಶಾಸಕರು ಕ್ಷೇತ್ರದ ಜನಪ್ರತಿನಿಧಿಗಳಾಗುವುದಾರು ಹೇಗೆ? ಅಂದರೆ ಅವರನ್ನು ಪಕ್ಷಗಳ ಪ್ರತಿನಿಧಿಗಳೆಂದು ಕರೆಯುವುದು ಸೂಕ್ತ. ರಾಜ್ಯಸಭಾ ಚುನಾವಣಾ ಪ್ರಕ್ರಿಯೆ ಸರಿ ಇಲ್ಲ. ಯಾಕೆ ಕೇಳಿದರೆ ಪ್ರಜಾಪ್ರಭುತ್ವದಲ್ಲಿ ಮತದಾನನವೆಂದರೆ ಗೌಪ್ಯ ಮತದಾನಕ್ಕೆ ಅವಕಾಶವಿರಬೇಕು. ಅದು ಬಿಟ್ಟು ಪಕ್ಷದ ಏಜೆಂಟರಿಗೆ ತೇೂರಿಸಿ ಮತ ಚಲಾಯಿಸಬೇಕು ಅನ್ನುವುದು ಪ್ರಜಾಪ್ರಭುತ್ವದ ಚುನಾವಣಾ ಪರಿಕಲ್ಪನೆಗೆ ವಿರುದ್ಧ ನೀತಿ. ಪ್ರತಿಯೊಬ್ಬ ಶಾಸಕನಿಗೂ ಸದನದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಇದೆ ಎಂದು ಧ್ವನಿ ಎತ್ತುತ್ತಾರೆ. ಅದಕ್ಕೆ ಅಡ್ಡಿಪಡಿಸಿದರೆ ಹಕ್ಕು ಚ್ಯುತಿ ಮಂಡಿಸುವ ನಮ್ಮ ಶಾಸಕರುಗಳು ಮತದಾನದ ಹಕ್ಕು ಬಂದಾಗ ಅದಕ್ಕೆ ನಿರ್ಬಂಧ ಹೇರುವುದು ಹಕ್ಕು ಚ್ಯುತಿ ಅಡಿಯಲ್ಲಿ ಬರುವುದಿಲ್ಲವೇ?

ಒಟ್ಟಿನಲ್ಲಿ ಅಡ್ಡ ಮತದಾನದ ಪಾವಿತ್ರ್ಯತೆಯ ಕುರಿತಾಗಿ ಚರ್ಚೆ ಬರುವಾಗ ಶಾಸಕರುಗಳ ಮತದಾನದ ಹಕ್ಕು ಅಡ್ಡ ಮತದಾನ ಮುಂತಾದ ವಿಷಯಗಳು ನ್ಯಾಯಾಲಯದಲ್ಲಿ ಮತ್ತು ಸಾರ್ವಜನಿಕವಾಗಿ ಹೆಚ್ಚು ಚರ್ಚೆಯಾಗಬೇಕು ಅನ್ನುವುದು ನನ್ನ ಅಭಿಪ್ರಾಯ. ಅಡ್ಧ ಮತದಾನದ ವ್ಯವಸ್ಥೆಗೆ ಬೇಕಾದ ವಾತಾವರಣ ನಾವೇ ಸೃಷ್ಟಿ ಮಾಡಿಕೊಂಡು ನಮಗೆ ಅಡ್ಡ ಮತದಾನ ಮಾರಕವಾದಾಗ ಅದೊಂದು ಅನೈತಿಕ ಅಸಂವಿಧಾನಿಕ ಕ್ರಮವೆಂದು ಟೀಕಿಸುವುದು ಅದೇ ಅಡ್ಡ ಮತದಾನ ನಮಗೆ ಪೂರಕವಾದಾಗ ಅದೊಂದು ಆತ್ಮಸಾಕ್ಷಿ ಮತದಾನವೆಂದು ವಾದಿಸುವುದು ಎಷ್ಟು ನ್ಯಾಯ ಸಮ್ಮತ ಅನ್ನುವುದು ಇನ್ನೊಂದು ಮೂಲಭೂತವಾದ ಪ್ರಶ್ನೆ.

-ಪ್ರೊ.ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಉಡುಪಿ.

 

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಜನಾರ್ದ​ನ್ ಕೊಡವೂರು​ ದಂಪತಿಗಳಿಗೆ ಅಭಿನಂದನೆ ​

ಉಡುಪಿ, ನ.24: ಭಾರ​ತ್ ಸ್ಕೌಟ್ಸ್ ಅಂಡ್ ಗೈಡ್ಸ್ ​ಉಡುಪಿ ಸಂಸ್ಥೆಯ ಜಿಲ್ಲಾ​...

ಶಿಸ್ತು, ಛಲ, ಆತ್ಮಸ್ಥೈರ್ಯ ಬೆಳೆಸಿಕೊಳ್ಳಿ: ಉಡುಪಿ ಜಿಲ್ಲಾಧಿಕಾರಿ

ಉಡುಪಿ, ನ.24: ಸ್ಕೌಟ್ಸ್ ಮತ್ತು ಗೈಡ್ಸ್ ನಲ್ಲಿ ಭಾಗವಹಿಸುವುದರಿಂದ ಜೀವನದಲ್ಲಿ ಶಿಸ್ತು,...

ತುಳು ಭಾವಗೀತೆ ಸ್ಪರ್ಧೆ

ಉಡುಪಿ, ನ.24: ತುಳುಕೂಟ ಉಡುಪಿ (ರಿ,) ವತಿಯಿಂದ ದಿ. ನಿಟ್ಟೂರು ಸಂಜೀವ...

ನ.28: ನರೇಂದ್ರ ಎಸ್ ಗಂಗೊಳ್ಳಿ ಅವರ ‘ನಿಭೃತ’ ಪತ್ತೇದಾರಿ ಕಾದಂಬರಿ ಬಿಡುಗಡೆ

ಉಡುಪಿ, ನ.23: ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ವಾಣಿಜ್ಯಶಾಸ್ತ್ರ ಉಪನ್ಯಾಸಕ ಮತ್ತು...
error: Content is protected !!