Saturday, November 9, 2024
Saturday, November 9, 2024

ಉಡುಪಿ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿ: ಸಾಧಕರಿಗೆ ಅಭಿನಂದನೆ

ಉಡುಪಿ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿ: ಸಾಧಕರಿಗೆ ಅಭಿನಂದನೆ

Date:

ಕೆಮ್ಮಣ್ಣು, ಡಿ.9: ಉಡುಪಿ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿ ಲಿ., ನ ನೂತನ ವಾಣಿಜ್ಯ ಸಂಕೀರ್ಣ ‘ಸಹಕಾರ ಸಿಂಧು’ ಹಾಗೂ ಹಂಪನಕಟ್ಟೆ-ಕೆಮ್ಮಣ್ಣಿನಲ್ಲಿ 10ನೇ ಶಾಖೆಯ ಉದ್ಘಾಟನಾ ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿರುವ ಸ್ಥಳೀಯ ಮಹನಿಯರನ್ನು ಗುರುತಿಸಿ ಗೌರವಿಸಿ, ಅಭಿನಂದಿಸಲಾಯಿತು. ಬಡ ರೋಗಿಗಳ ಪಾಲಿಗೆ ಹರಿಯೇ ಆದ ಇಪ್ಪತ್ತು ರೂಪಾಯಿ ಡಾಕ್ಟರ್ ಎಂದೇ ಪ್ರಸಿದ್ಧಿಯನ್ನು ಪಡೆದಿರುವ ವೈದ್ಯ ಅಶ್ವಿನಿ ಕುಮಾರ್, ಸರ್ಪ ಸುತ್ತು ಕಾಯಿಲೆಗೆ ಔಷಧಿಯನ್ನು ನೀಡುತ್ತಾ ಸಾವಿರಾರು ಮಂದಿಯನ್ನು ಗುಣ ಪಡಿಸಿದ ಮಾಹಾ ತಾಯಿ ವನಜಾ ಆಚಾರ್ಯ, ಸಾಹಸ ಪ್ರವೃತ್ತಿಯಾಗಿ ಸಮಾಜ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಸೇವೆ ಸಲ್ಲಿಸುತ್ತಿರುವ ಈಶ್ವರ ಮಲ್ಪೆ, ಕುಡಿಯುವ ನೀರಿನ ಸಮಸ್ಯೆಯನ್ನು ಮನಗೊಂಡು ಹಲವಾರು ಜಿಲ್ಲೆಗಳಿಗೆ ಭೇಟಿ ನೀಡಿ ಅಂತರ್ಜಲ ಮತ್ತು ನೀರಾವರಿಯ ಬಗ್ಗೆ ಅರಿವು ಮೂಡಿಸಿ ಆ ಕ್ಷೇತ್ರದಲ್ಲಿ ಸೇವೆಗೈದ ಜೋಸೆಫ್ ಜಿ. ಎಂ. ರೆಬೆಲ್ಲೋ, ಹಾಗೂ ಯಕ್ಷಗಾನ ಕ್ಷೇತ್ರದಲ್ಲಿ ತಮನ್ನು ತಾವು ತೊಡಗಿಸಿಕೊಂಡು ನಿರಂತರವಾಗಿ ಸೇವೆ ಸಲ್ಲಿಸುತ್ತಾ ಬಂದಿರುವ ಪ್ರವೀಣ್ ಗಾಣಿಗ ಕೆಮ್ಮಣ್ಣು ಹಾಗೂ ಸರಕಾರಿ ಪದವಿಪೂರ್ವ ಕಾಲೇಜು (ಪ್ರೌಢ ಶಾಲಾ ವಿಭಾಗ)ದಲ್ಲಿ 15 ವರ್ಷದೊಳಗಿನ ಮಹಿಳಾ ಏಕದಿನ ಕ್ರಿಕೆಟ್ ಪಂದ್ಯಾಟದಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿ, ಇದೀಗ ರಾಷ್ಟೀಯ ಮಟ್ಟಕ್ಕೆ ಆಯ್ಕೆಯಾಗಿರುವ ಚಿತ್ರರವರನ್ನು ಗುರುತಿಸಿ ಸಂಸ್ಥೆಯ ವತಿಯಿಂದ ಗೌರವಿಸಿ, ಅಭಿನಂದಿಸಲಾಯಿತು.

ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿ., ಮಂಗಳೂರು, ಕರ್ನಾಟಕ ರಾಜ್ಯ ಸಹಕಾರ ಮಹಾ ಮಂಡಳ ನಿ., ಬೆಂಗಳೂರು ಇದರ ಅಧ್ಯಕ್ಷರಾದ ಡಾ. ಎಂ. ಎನ್. ರಾಜೇಂದ್ರ ಕುಮಾರ್, ಸಂತ ತೆರೇಜಾ ಚರ್ಚ್ನ ಧರ್ಮಗುರುಗಳಾದ ಅತೀವಂದನೀಯ ರೆ.ಫಾ. ಫಿಲಿಪ್ ನೇರಿ ಆರಾನ್ಹ, ಉಡುಪಿ ಶಾಸಕ ಯಶಪಾಲ್ ಎ. ಸುವರ್ಣ, ಕಾಂಚನ ಹೂಂಡೈನ ಎಂ. ಡಿ. ಪ್ರಸಾದ್‌ರಾಜ್ ಕಾಂಚನ್, ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್‌ನ ಅಧ್ಯಕ್ಷರೂ, ಕ.ರಾ.ಸ. ಮಹಾ ಮಂಡಳ ಬೆಂಗಳೂರಿನ ನಿರ್ದೇಶಕರಾದ ಬಿ. ಜಯಕರ ಶೆಟ್ಟಿ ಇಂದ್ರಾಳಿ, ದ.ಕ.ಜಿ.ಕೇ.ಸ. ಬ್ಯಾಂಕ್ ನಿ., ಮಂಗಳೂರು ಹಾಗೂ ಕ.ರಾ.ಸ.ಮಾ.ಮಹಾ ಮಂಡಳ ನಿ., ಬೆಂಗಳೂರು ಇದರ ನಿರ್ದೇಶಕರಾದ ಡಾ. ಐ. ದೇವಿಪ್ರಸಾದ್ ಶೆಟ್ಟಿ, ಬಡಾನಿಯೂರು ಗ್ರಾಮ ಪಂಚಾಯತ್‌ನ ಅಧ್ಯಕ್ಷರಾದ ಯಶೋದ ಆಚಾರ್ಯ, ಉಡುಪಿ ಮತ್ತು ಮಂಗಳೂರು ಸಹಕಾರ ಸಂಘಗಳ ಉಪನಿಬಂಧಕರಾದ ರಮೇಶ್ ಎಚ್. ಎನ್., ಗಣಪತಿ ವ್ಯವಸಾಯ ಸೇ.ಸ. ಸಂಘ ನಿ., ಕೆಮ್ಮಣ್ಣಿನ ಅಧ್ಯಕ್ಷರಾದ ಸತೀಶ್ ಶೆಟ್ಟಿ, ಶ್ರೀ ದು.ಪ.ಅಮ್ಮನವರ ದೇವಸ್ಥಾನ ಸನ್ಯಾಸಿಮಠ ಬಡಾನಿಡಿಯೂರಿನ ಅಧ್ಯಕ್ಷರಾದ ಉಮೇಶ್ ಪೂಜಾರಿ, ಮಾಜಿ ತಾಲೂಕು ಪಂಚಾಯತ್ ಸದಸ್ಯರಾದ ಟಿ. ಎನ್. ರಹಮತುಲ್ಲಾ, ಸಹಕಾರಿ ಸಂಘಗಳ ಸಹಾಯಕ ನಿಬಂಧಕರಾದ ಅರುಣ್ ಕುಮಾರ್ ಎಸ್. ವಿ., ಬಡಾನಿಡಿಯೂರು ಗ್ರಾಮ ಪಂಚಾಯತ್‌ನ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮಾಲತಿ, ಸಂಸ್ಥೆಯ ಅಧ್ಯಕ್ಷರಾದ ಅರುಣ ಕುಮಾರ್ ಶೆಟ್ಟಿ, ಪ್ರಧಾನ ವ್ಯವಸ್ಥಾಪಕ ರಾಜೇಶ್ ಹೆಗ್ಡೆ, ಶಾಖಾ ವ್ಯವಸ್ಥಾಪಕರಾದ ಸಂದೀಪ ಕೆ. ಶೆಟ್ಟಿ, ಸಂಸ್ಥೆಯ ನಿರ್ದೇಶಕರು, ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಬೃಹತ್ ಉದ್ಯೋಗ ಮೇಳ

ಮೂಡುಬಿದಿರೆ, ನ.9: ಸಮಗ್ರ ಮರಾಟಿಗರ ಬಲವರ್ಧನೆ ಹಾಗೂ ಪ್ರಗತಿಗಾಗಿ ನವೆಂಬರ್ ೧೦ರಂದು...

ಕೆಎಎಸ್ ಪರೀಕ್ಷೆಗೆ ತರಬೇತಿ

ಬೆಂಗಳೂರು, ನ.9: ಕರ್ನಾಟಕ ಲೋಕಸೇವಾ ಆಯೋಗವು 2024ರ ಡಿಸೆಂಬರ್ 29ರಂದು ನಡೆಸಲಿರುವ...

ನ.10: ಶ್ರೀ ಪಣಂಬೂರು ವೆಂಕಟ್ರಾಯ ಐತಾಳ ಸಾಂಸ್ಕ್ರತಿಕ ಪ್ರತಿಷ್ಠಾನದ 7ನೇ ವರ್ಷದ ವಾರ್ಷಿಕೋತ್ಸವ

ಉಡುಪಿ, ನ.8: ಶ್ರೀ ಸೋದೆ ವಾದಿರಾಜ ಮಠ, ಉಡುಪಿ ಇವರ ಆಶ್ರಯದಲ್ಲಿ...

ಕಾರ್ಕಳದ ಡಾ.ಟಿಎಂಎ ಪೈ ರೋಟರಿ ಆಸ್ಪತ್ರೆಯಲ್ಲಿ ಅತ್ಯಾಧುನಿಕ 24/7 ಸಿಟಿ ಸ್ಕ್ಯಾನ್ ಸೌಲಭ್ಯ ಉದ್ಘಾಟನೆ

ಕಾರ್ಕಳ/ಮಣಿಪಾಲ, ನ.8: ಆರೋಗ್ಯ ಸೇವೆಗಳ ಪ್ರಗತಿಯತ್ತ ಮಹತ್ವದ ಹೆಜ್ಜೆಯಾಗಿ ಕಾರ್ಕಳದ ಡಾ.ಟಿಎಂಎ...
error: Content is protected !!