ಹರಾರೆ, ಜು.2: ಹರಾರೆಯಲ್ಲಿ ಶನಿವಾರ ನಡೆದ ಐಸಿಸಿ ಕ್ರಿಕೆಟ್ ವಿಶ್ವಕಪ್ 2023 ಕ್ವಾಲಿಫೈಯರ್ ಸೂಪರ್ ಸಿಕ್ಸ್ ಪಂದ್ಯದಲ್ಲಿ ಸ್ಕಾಟ್ಲೆಂಡ್ ವಿರುದ್ಧ ವೆಸ್ಟ್ ಇಂಡೀಸ್ ತಂಡವು ಏಳು ವಿಕೆಟ್ ಗಳ ಸೋಲನುಭವಿಸಿತು. ಈ ಸೋಲಿನಿಂದಾಗಿ ವೆಸ್ಟ್ ಇಂಡೀಸ್ ತನ್ನ 48 ವರ್ಷಗಳ ಇತಿಹಾಸದಲ್ಲಿ ಮೊದಲ ಬಾರಿಗೆ ಐಸಿಸಿ ಏಕದಿನ ವಿಶ್ವಕಪ್ ನಿಂದ ಹೊರಬಿದ್ದಿದೆ. ವೆಸ್ಟ್ ಇಂಡೀಸ್ ನೀಡಿದ್ದ 182 ರನ್ ಗಳ ಗುರಿಯನ್ನು ಮ್ಯಾಥ್ಯೂ ಕ್ರಾಸ್ (ಔಟಾಗದೆ 74) ಮತ್ತು ಬ್ರಾಂಡನ್ ಮೆಕ್ ಮುಲ್ಲನ್ (69) ಅವರ ಅರ್ಧಶತಕಗಳ ನೆರವಿನಿಂದ ಸ್ಕಾಟ್ಲೆಂಡ್ ಬೆನ್ನಟ್ಟಿತು.
ಕ್ಲೈವ್ ಲಾಯ್ಡ್ ನಾಯಕತ್ವದಲ್ಲಿ ವೆಸ್ಟ್ ಇಂಡೀಸ್ 1975 ಮತ್ತು 1979 ರಲ್ಲಿ ವಿಶ್ವಕಪ್ ನ್ ಮೊದಲ ಎರಡು ಆವೃತ್ತಿಗಳನ್ನು ಗೆದ್ದಿತ್ತು ಮತ್ತು 1983 ರಲ್ಲಿ ಭಾರತದ ವಿರುದ್ಧ ರನ್ನರ್ಸ್ ಅಪ್ ಸ್ಥಾನ ಪಡೆಯಿತು. 1996 ರಲ್ಲಿ ವೆಸ್ಟ್ ಇಂಡೀಸ್ ವಿಶ್ವಕಪ್ನ ಸೆಮಿಫೈನಲ್ ತಲುಪಿದನ್ನು ಇಲ್ಲಿ ಸ್ಮರಿಸಬಹುದು. ವೆಸ್ಟ್ ಇಂಡೀಸ್ 2011 ಮತ್ತು 2015 ರ ವಿಶ್ವಕಪ್ಗಳಲ್ಲಿ ಕ್ವಾರ್ಟರ್ ಫೈನಲ್ ತಲುಪುವಲ್ಲಿ ಯಶಸ್ವಿಯಾಗಿತ್ತು.