Sunday, November 24, 2024
Sunday, November 24, 2024

ಆದಿವಾಸಿ ಜನರು ಪ್ರಕೃತಿಯೊಂದಿಗೆ ಆತ್ಮೀಯ ಸಂಬಂಧವನ್ನು ಬೆಸೆದಿದ್ದಾರೆ: ಸತ್ಯಪಾಲ್ ಟಿ.ಎ

ಆದಿವಾಸಿ ಜನರು ಪ್ರಕೃತಿಯೊಂದಿಗೆ ಆತ್ಮೀಯ ಸಂಬಂಧವನ್ನು ಬೆಸೆದಿದ್ದಾರೆ: ಸತ್ಯಪಾಲ್ ಟಿ.ಎ

Date:

ಮಣಿಪಾಲ. ಮಾ. 22: ಕೇರಳ ಲಲಿತಕಲಾ ಅಕಾಡೆಮಿಯ ಮಾಜಿ ಅಧ್ಯಕ್ಷ ಮತ್ತು ಕಲಾವಿದ, ಲೇಖಕ ಸತ್ಯಪಾಲ್ ಟಿ ಎ ಅವರು ಬುಡಕಟ್ಟು ಜನರ ಕಲೆ ಅವರ ಪರಿಸರ ಮತ್ತು ಆ ಸಮುದಾಯದ ವಿಶ್ವಾತ್ಮಕ ದೃಷ್ಟಿಕೋನವನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದರು. ಮಾಹೆ ಮಣಿಪಾಲದ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಾಫಿಕಲ್ ಆರ್ಟ್ಸ್ ಆಂಡ್ ಸೈಯನ್ಸಸ್ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು. ಗೊಂಡರು, ರಾಜುವಾರರು ಮತ್ತು ಭಿಲ್ಲರು ಇಂತಹ ಜೀವಜಾಲ ಮತ್ತು ಜೀವನದ ದೃಷ್ಟಿಕೋನಕ್ಕೆ ಪ್ರಮುಖ ಉದಾಹರಣೆಗಳಾಗಿದ್ದಾರೆ ಎಂದರು.

ಭಾರತದ ಸ್ಥಳೀಯ ಕಲೆಗಳ ಕುರಿತು ಮಾತನಾಡಿದ ಅವರು ಬುಡಕಟ್ಟು ಕಲೆಗಳ ಬಗ್ಗೆ ವ್ಯಾಪಕವಾದ ಅಧ್ಯಯನವನ್ನು ನಡೆಸಿದ್ದಾರೆ. ಆದಿವಾಸಿ ಜೀವನವು ಕೇವಲ ಮನುಷ್ಯರನ್ನು ಮಾತ್ರವಲ್ಲದೆ ಸಸ್ಯಗಳು ಮತ್ತು ಪ್ರಾಣಿಗಳನ್ನು ಒಳಗೊಂಡಿರುವ ಜೀವಜಾಲವಾಗಿದೆ. ಅವರು ಪ್ರಕೃತಿಯೊಂದಿಗೆ ಆತ್ಮೀಯ ಸಂಬಂಧವನ್ನು ಬೆಸೆದಿದ್ದಾರೆ ಮತ್ತು ಇದು ಅವರ ವಿವಿಧ ಕಲಾ ಪ್ರಕಾರಗಳಲ್ಲಿ ಪ್ರತಿಫಲಿಸುತ್ತದೆ ಎಂದರು.

ಗೊಂಡ್, ರಾಜುವಾರ್ ಮತ್ತು ಭಿಲ್ ಕಲಾ ಪ್ರಕಾರಗಳ ಬಗ್ಗೆ ನಿರ್ದಿಷ್ಟವಾಗಿ ಮಾತನಾಡುತ್ತಾ, ಅವರ ನೈಸರ್ಗಿಕ ವಿಶ್ವಾತ್ಮಕ ದೃಷ್ಟಿಕೋನ ಮತ್ತು ಪ್ರಕೃತಿಯೊಂದಿಗಿನ ನಿಕಟ ಸಂಬಂಧವನ್ನು ಪ್ರದರ್ಶಿಸುವ ಚಿತ್ರಗಳ ಸರಣಿಯನ್ನು ತೋರಿಸಿದರು. ಸತ್ಯಪಾಲ್ ಅವರು ಆದಿವಾಸಿಗಳ ಕಥೆಗಳು, ನಂಬಿಕೆಗಳು, ಸಂಗೀತ ಮತ್ತು ನೃತ್ಯವನ್ನು ವಿವರಿಸಿದರು. ಅವರ ಕಲೆ ಸಮುದಾಯದ ಮೌಲ್ಯಗಳನ್ನು ಸೂಚಿಸುತ್ತದೆ. ಇತರರ ಅಜ್ಞಾನ ಮತ್ತು ಸಂವೇದನಾಶೀಲತೆಯ ಕೊರತೆಯು ಆದಿವಾಸಿಗಳ ಜೀವನ ಮತ್ತು ಕಲೆಯನ್ನು ಹಾಳುಮಾಡುತ್ತಿದೆ. “ಬುಡಕಟ್ಟು ಕಲಾವಿದರು ಮತ್ತು ಸಮಕಾಲೀನ ಕಲಾವಿದರ ನಡುವಿನ ಅನಂತರವನ್ನು ಒಡೆಯುವ ಅಗತ್ಯವಿದೆ. ಚಿತ್ರಕಲೆಯು ಸಂಗೀತದಂತೆ, ಸಂಗೀತ ಸ್ವರಗಳನ್ನು ಬಳಸಿದರೆ, ಚಿತ್ರಕಲೆ ಬಣ್ಣಗಳನ್ನು ಬಳಸುತ್ತದೆ.” ಎಂದು ಅವರು ಹೇಳಿದರು.

ಪ್ರೊ.ವರದೇಶ್ ಹಿರೇಗಂಗೆ ಮಾತನಾಡಿ, ಆದಿವಾಸಿಗಳ ವೈವಿಧ್ಯತೆ ಮತ್ತು ಎಲ್ಲರನ್ನೂ ಒಳಗೊಳ್ಳುವ ದೃಷ್ಟಿಕೋನದ ಬಗ್ಗೆ ಸಂವೇದನಾಶೀಲತೆಯನ್ನು ಬೆಳೆಸಿಕೊಳ್ಳುವುದು ನಮ್ಮ ಪ್ರಯತ್ನ ಎಂದರು. ಕಲಾವಿದರಾದ ಪುರುಷೋತ್ತಮ ಅಡ್ವೆ, ಸಿಂಧು ದಿವಾಕರ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ತುಳು ಭಾವಗೀತೆ ಸ್ಪರ್ಧೆ

ಉಡುಪಿ, ನ.24: ತುಳುಕೂಟ ಉಡುಪಿ (ರಿ,) ವತಿಯಿಂದ ದಿ. ನಿಟ್ಟೂರು ಸಂಜೀವ...

ನ.28: ನರೇಂದ್ರ ಎಸ್ ಗಂಗೊಳ್ಳಿ ಅವರ ‘ನಿಭೃತ’ ಪತ್ತೇದಾರಿ ಕಾದಂಬರಿ ಬಿಡುಗಡೆ

ಉಡುಪಿ, ನ.23: ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ವಾಣಿಜ್ಯಶಾಸ್ತ್ರ ಉಪನ್ಯಾಸಕ ಮತ್ತು...

ವಯನಾಡ್: ಪ್ರಿಯಾಂಕಾ ಗಾಂಧಿಗೆ ಐತಿಹಾಸಿಕ ಗೆಲುವು

ವಯನಾಡ್, ನ.23: ಕೇರಳದ ವಯನಾಡ್ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ನಾಯಕಿ...

ಉಪಚುನಾವಣೆಯಲ್ಲಿ ಕಾಂಗ್ರೆಸ್ ಕ್ಲೀನ್ ಸ್ವೀಪ್- ನಮ್ಮ ಕಾರ್ಯಕರ್ತರ ಅವಿರತ ಶ್ರಮದ ಗೆಲುವು: ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು, ನ.23: ಕರ್ನಾಟಕದಲ್ಲಿ ನಡೆದ ಮೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಕಾಂಗ್ರೆಸ್...
error: Content is protected !!