Home ಸುದ್ಧಿಗಳು ರಾಜ್ಯ ನಾಸಾ ಪಾರ್ಟಿಕಲ್ ಪಾರ್ಟಿಶನ್ ಚಾಲೆಂಜ್: ನಾಲ್ಕನೇ ಸ್ಥಾನ ಗಳಿಸಿದ ಆಳ್ವಾಸ್ ಕಾಲೇಜಿನ ಪ್ರಕೃತಿ ಮತ್ತು ತಂಡ

ನಾಸಾ ಪಾರ್ಟಿಕಲ್ ಪಾರ್ಟಿಶನ್ ಚಾಲೆಂಜ್: ನಾಲ್ಕನೇ ಸ್ಥಾನ ಗಳಿಸಿದ ಆಳ್ವಾಸ್ ಕಾಲೇಜಿನ ಪ್ರಕೃತಿ ಮತ್ತು ತಂಡ

273
0

ಮೂಡುಬಿದಿರೆ, ಮಾ. 22: ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆದ `ನಾಸಾ ಪಾರ್ಟಿಕಲ್ ಪಾರ್ಟಿಶನ್ ಚಾಲೆಂಜ್ ನಲ್ಲಿ ಆಳ್ವಾಸ್ ಇಂಜಿನಿಯರಿಂಗ್ ಮತ್ತು ತಾಂತ್ರಿಕ ಮಹಾವಿದ್ಯಾಲಯದ ಇಲೆಕ್ಟ್ರಾನಿಕ್ಸ್ ಹಾಗೂ ಕಮ್ಯುನಿಕೇಶನ್ ವಿಭಾಗದ ದ್ವಿತೀಯ ವರ್ಷದ ವಿದ್ಯಾರ್ಥಿನಿ ಪ್ರಕೃತಿ ಹಾಗೂ ಅವರ ತಂಡ ನಾಲ್ಕನೇ ಸ್ಥಾನ ಗಳಿಸಿದೆ.

೨೦೨೨ನೇ ಅಕ್ಟೋಬರ್‌ನಲ್ಲಿ ಆರಂಭಗೊಂಡ ಈ ಚಾಲೆಂಜ್‌ನಲ್ಲಿ ಪ್ರಪಂಚದಾದ್ಯಂತ ಸುಮಾರು ೬೪೦ ತಂಡಗಳು ಭಾಗವಹಿಸಿದ್ದು, ಪ್ರಕೃತಿ ಅವರು ಏರೋಸ್ಪೇಸ್ ವಿಷಯದಲ್ಲಿ 3 ಚಾಲೆಂಜ್‌ಗಳನ್ನು ಪೂರ್ಣಗೊಳಿಸಿ ಈ ಸ್ಥಾನನ್ನು ಗಳಿಸಿದ್ದಾರೆ. ಒಟ್ಟು 2500 ಡಾಲರ್ ಬಹುಮಾನ ಪಡೆದುಕೊಂಡಿದ್ದಾರೆ. ಈ ಮೂಲಕ ಮುಂದಿನ ದಿನಗಳಲ್ಲಿ ವಿದ್ಯಾರ್ಥಿನಿಗೆ ನಾಸಾ ಸಂಸ್ಥೆಯಲ್ಲಿ ಇಂಟರ್ನ್ಶಿಪ್ ಪಡೆದುಕೊಳ್ಳಲು ಅವಕಾಶವಿದೆ.

ವಿದ್ಯಾರ್ಥಿನಿಯ ಸಾಧನೆಯನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ, ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಹಾಗೂ ಪ್ರಾಂಶುಪಾಲ ಡಾ. ಪೀಟರ್ ಫೆರ್ನಾಂಡಿಸ್ ಅಭಿನಂದಿಸಿದ್ದಾರೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.