ಉಡುಪಿ, ಫೆ. 5: ಉಡುಪಿಯ ಇತಿಹಾಸ ಪ್ರಸಿದ್ಧ ಪಣಿಯಾಡಿ ಶ್ರೀ ಅನಂತಾಸನ ಶ್ರೀ ಲಕ್ಷ್ಮೀ ಅನಂತಪದ್ಮನಾಭ ದೇವಸ್ಥಾನದ ಮಹಾಬಲಿ ಪೀಠದ ಪಾದುಕಾನ್ಯಾಸ ಮತ್ತು ಧ್ವಜಸ್ತಂಭದ ರತ್ನನ್ಯಾಸ ಕಾರ್ಯಕ್ರಮ, ಪ್ರಪ್ರಥಮ ಉತ್ಸವ ಹಾಗೂ ನೇಮೋತ್ಸವ ಆಮಂತ್ರಣ ಪತ್ರಿಕೆಯ ಬಿಡುಗಡೆಯ ಕಾರ್ಯಕ್ರಮ ಭಾನುವಾರ ಶ್ರೀ ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ನಡೆಯಿತು.
ಪುತ್ತಿಗೆ ಮಠದ ಎಂ ನಾಗರಾಜ ಆಚಾರ್ಯ, ಎಂ ಪ್ರಸನ್ನ ಆಚಾರ್ಯ, ರತೀಶ್ ತಂತ್ರಿ, ಅರ್ಚಕರಾದ ವಾದಿರಾಜ ತಂತ್ರಿ ಪೂತ್ತೂರು, ರಾಘವೇ೦ದ್ರ ಭಟ್, ಜೀರ್ಣೋದ್ದಾರ ಸಮಿತಿಯ ಪದಾಧಿಕಾರಿಗಳಾದ ಎಸ್ ನಾರಾಯಣ ಮಡಿ, ಎಂ ವಿಶ್ವನಾಥ ಭಟ್, ಬಿ. ವಿಜಯರಾಘವ ರಾವ್, ಶ್ರೀನಿವಾಸ ಆಚಾರ್ಯ ಪಣಿಯಾಡಿ, ಶ್ರೀಧರ ಭಟ್, ರಾಜೇಶ್ ಪಣಿಯಾಡಿ, ತಲ್ಲೂರು ಚಂದ್ರಶೇಖರ್ ಶೆಟ್ಟಿ, ಲಕ್ಷ್ಮೀನಾರಾಯಣ ಹೆಗ್ಡೆ, ವಿಠಲ ಭಟ್, ಕೃಷ್ಣಮೂರ್ತಿ ಭಟ್, ರಾಘವೇಂದ್ರ ಭಟ್, ವಿಠಲಮೂರ್ತಿ ಆಚಾರ್ಯ, ಭಾರತಿ ಕೃಷ್ಣಮೂರ್ತಿ, ಸುಮಿತ್ರ ಕೆರೆಮಠ ಹಾಗೂ ಊರ ಹತ್ತು ಸಮಸ್ತರು ಉಪಸ್ಥಿತರಿದ್ದರು.