Monday, November 25, 2024
Monday, November 25, 2024

ಶಿಕ್ಷಕರಿಗೆ ತರಬೇತಿ

ಶಿಕ್ಷಕರಿಗೆ ತರಬೇತಿ

Date:

ಮಣಿಪಾಲ: ರೋಟರಿ ಜಿಲ್ಲೆ 3182, ವಲಯ 1,2,3,4,5 ಮತ್ತು ಜಿಲ್ಲಾ ಪಂಚಾಯತ್, ಜಿಲ್ಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆಯು ರೋಟರಿ ಕ್ಲಬ್ ಮಣಿಪಾಲ, ರೋಟರಿ ಕ್ಲಬ್ ಪೆರ್ಡೂರ್ ಮತ್ತು ರೋಟರಿ ಉಡುಪಿ ಜಂಟಿ ಆತಿಥ್ಯ ದಲ್ಲಿ ಉಡುಪಿ ಜಿಲ್ಲೆಯ ಆಯ್ದ ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳ ಶಿಕ್ಷಕರಿಗೆ ಮಕ್ಕಳಲ್ಲಿ ಕಲಿಕಾನೂನ್ಯತೆ ಗುರುತಿಸುವಿಕೆ ಬಗ್ಗೆ ಆನ್ ಲೈನ್ ನಲ್ಲಿ ನೀಡಿದ ತರಬೇತಿಯ ಸಮಾರೋಪ ಕಾರ್ಯಕ್ರಮ ಮಣಿಪಾಲ ಅನಂತನಗರದ ರೋಟರಿ ಸಭಾಭವನದಲ್ಲಿ ಜರಗಿತು.

ಒಂದು ದಿನದ ಸಮಾರೋಪ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲ ಶಿಕ್ಷಕರಿಗೆ ಪರೀಕ್ಷೆ ನಡೆಸಿ ಮೌಲ್ಯಮಾಪನ ಮಾಡಲಾಯಿತು. ತರಬೇತಿಯನ್ನು ನಡೆಸಿಕೊಟ್ಟ ಸಂಪನ್ಮೂಲ ಅತಿಥಿಗಳಾದ ಸೀತಾ ಕೃಷ್ಣಮೂರ್ತಿ ಶಿಬಿರಾರ್ಥಿಗಳೊಡನೆ ಸಂವಾದ ನಡೆಸಿ ಅವರ ಸಂದೇಹಗಳನ್ನು ಪರಿಹರಿಸಿದರು. ಡಯಟ್ ನ ಉಪಪ್ರಾಂಶುಪಾಲ ಡಾ. ಅಶೋಕ ಕಾಮತ್ ಶಿಬಿರಾರ್ಥಿಗಳ ಜವಾಬ್ದಾರಿ ಮತ್ತು ಅದನ್ನು ಮುಂದುವರಿಸುವುದರ ಅಗತ್ಯವನ್ನು ತಿಳಿಸಿದರು.

ಸಮಾರೋಪ ಕಾರ್ಯಕ್ರಮದಲ್ಲಿ ಜಿಲ್ಲಾ ರೋಟರಿ ಗವರ್ನರ್ ಡಾ. ಜಯಗೌರಿ ಮಾತಾಡುತ್ತಾ, ಮಕ್ಕಳ ಭವಿಷ್ಯಕ್ಕೆ ಬಹಳ ಅಗತ್ಯವಿರುವ ರೋಟರಿ ನಡೆಸಿದ ಈ ತರಬೇತಿಯಲ್ಲಿ ಭಾಗವಹಿಸಿದ ಎಲ್ಲರನ್ನು ಅಭಿನಂದಿಸಿ ಈ ಅಭಿಯಾನವನ್ನು ತೊಂದರೆ ಇರುವ ಮಕ್ಕಳನ್ನು ಗುರುತಿಸಿ ಅವರನ್ನು ಮುಖ್ಯವಾಹಿನಿಗೆ ತರುವರಲ್ಲಿ ನಿಮ್ಮ ಪ್ರಯತ್ನ ಯಶಸ್ಸನ್ನು ಕಾಣಲಿ ಎಂದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ಗಣಪತಿ, ಜಿಲ್ಲಾ ಕಾರ್ಯದರ್ಶಿಗಳಾದ ಅಮಿತ್ ಅರವಿಂದ್, ಪ್ರಶಾಂತ ಹೆಗ್ಡೆ, ಸುಬ್ರಹ್ಮಣ್ಯ ಬಾಸ್ರಿ, ಡಾ. ಸೇಸಪ್ಪ ರೈ, ಜಿಲ್ಲಾ ಸಭಾಪತಿ ಎಸ್.ಎ ರೆಹಮಾನ್, ಕ್ಲಬ್ಬಿನ ಅಧ್ಯಕ್ಷ ಉಡುಪಿಯ ಸುಬ್ರಹ್ಮಣ್ಯ ಕಾರಂತ, ಮಣಿಪಾಲದ ರೇಣು ಜಯರಾಂ, ಪೆರ್ಡೂರಿನ ನಳಿನಿ ಶೆಟ್ಟಿ ಉಪಸ್ಥಿತರಿದ್ದರು.

ವಲಯ ಸಹಾಯಕ ಗವರ್ನರ್ ರಾಮಚಂದ್ರ ಉಪಾಧ್ಯಾಯರು ಸ್ವಾಗತಿಸಿ, ಜಿಲ್ಲಾ ಜತೆ ಕಾರ್ಯದರ್ಶಿ ರಾಜವರ್ಮ ಅರಿಗ ವಂದಿಸಿದರು. ಜನಾರ್ದನ ಭಟ್ ಮತ್ತು ಗುರುರಾಜ ಭಟ್ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಪಂಚವರ್ಣ: 231ನೇ ಪರಿಸರಸ್ನೇಹಿ ಅಭಿಯಾನ

ಕೋಟ. ನ.25: ಪಂಚವರ್ಣ ಸಂಸ್ಥೆ ಪರಿಸರ ಜಾಗೃತಿ ಸ್ವಚ್ಛತಾ ಆಂದೋಲನ ಅವಿಭಜಿತ...

ಸಿಒಡಿಪಿ: ವಿಚಾರ ಸಂಕಿರಣ

ಮಂಗಳೂರು, ನ.25: ಮಾನವ ಕಳ್ಳಸಾಗಣೆ ಮತ್ತು ಸೈಬರ್ ಅಪರಾಧ ಕುರಿತ ವಿಚಾರ...

ಜನಾರ್ದ​ನ್ ಕೊಡವೂರು​ ದಂಪತಿಗಳಿಗೆ ಅಭಿನಂದನೆ ​

ಉಡುಪಿ, ನ.24: ಭಾರ​ತ್ ಸ್ಕೌಟ್ಸ್ ಅಂಡ್ ಗೈಡ್ಸ್ ​ಉಡುಪಿ ಸಂಸ್ಥೆಯ ಜಿಲ್ಲಾ​...

ಶಿಸ್ತು, ಛಲ, ಆತ್ಮಸ್ಥೈರ್ಯ ಬೆಳೆಸಿಕೊಳ್ಳಿ: ಉಡುಪಿ ಜಿಲ್ಲಾಧಿಕಾರಿ

ಉಡುಪಿ, ನ.24: ಸ್ಕೌಟ್ಸ್ ಮತ್ತು ಗೈಡ್ಸ್ ನಲ್ಲಿ ಭಾಗವಹಿಸುವುದರಿಂದ ಜೀವನದಲ್ಲಿ ಶಿಸ್ತು,...
error: Content is protected !!