Monday, November 25, 2024
Monday, November 25, 2024

ಮಣಿಪಾಲ ಕಸ್ತೂರ್ಬಾ ಆಸ್ಪತ್ರೆ- ಎಲ್ ನೆಕ್/ ಪಾಲಿಯೆಟಿವ್ ಆರೈಕೆ ಕೋರ್ ತರಬೇತಿ

ಮಣಿಪಾಲ ಕಸ್ತೂರ್ಬಾ ಆಸ್ಪತ್ರೆ- ಎಲ್ ನೆಕ್/ ಪಾಲಿಯೆಟಿವ್ ಆರೈಕೆ ಕೋರ್ ತರಬೇತಿ

Date:

ಮಣಿಪಾಲ: ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯ ಪಾಲಿಯೆಟಿವ್ ಔಷಧ ವಿಭಾಗದ ಸಹಯೋಗದೊಂದಿಗೆ ನರ್ಸಿಂಗ್ ಸೇವೆಗಳ ವಿಭಾಗವು ಡಾ. ಟಿಎಂಎ ಪೈ ಆಡಿಟೋರಿಯಂನಲ್ಲಿ 2022 ರ ಸೆಪ್ಟೆಂಬರ್ 28 ರಿಂದ 30 ರ ವರೆಗೆ ದಾದಿಯರಿಗಾಗಿ ಎಂಡ್ ಆಫ್ ಲೈಫ್ ನರ್ಸಿಂಗ್ ಎಜುಕೇಶನ್ ಕನ್ಸೋರ್ಷಿಯಂ, ಎಲ್ ನೆಕ್ / ಪಾಲಿಯೆಟಿವ್ ಆರೈಕೆ ಕೋರ್ ತರಬೇತಿ ಕಾರ್ಯಕ್ರಮ ಆಯೋಜಿಸಿತ್ತು.

ಸಂಪನ್ಮೂಲ ವ್ಯಕ್ತಿಗಳಾಗಿ ಮಿಸ್ ಹನಿಫೆ ಮೆಕ್ ಗಾಮ್ ವೆಲ್, ಆರ್ ಎನ್, ಎಂ ಎಸ್ ಎನ್, ಎಂ ಟಿ ಸಿ ಎಂ, ಪಿ ಎಚ್ ಎನ್, ಭಾರತದಲ್ಲಿನ ಎಲ್ ನೆಕ್ ಯು ಎಸ್ ಎ ಗೌರವ ಮುಖ್ಯಸ್ಥರು ಹಾಗೂ ತರಬೇತುದಾರರರು ಮತ್ತು ಅವರ ತಂಡ ಭಾಗವಹಿಸಿತ್ತು.

ಎಲ್ ನೆಕ್ / ಪಾಲಿಯೆಟಿವ್ ಆರೈಕೆ ಮಾಡ್ಯೂಲ್‌ಗಳನ್ನು ಅಮೇರಿಕನ್ ಅಸೋಸಿಯೇಷನ್ ​​ಆಫ್ ಕಾಲೇಜ್ ಆಫ್ ನರ್ಸಿಂಗ್ ಮತ್ತು ಹೋಪ್ ಸಿಟಿ, ಮೆಡಿಕಲ್ ಸೆಂಟರ್, ಯು ಎಸ್ ಎ ಸಹಯೋಗದಲ್ಲಿ ಅಭಿವೃದ್ಧಿಪಡಿಸಲಾಗಿದೆ.

ಇದನ್ನು ಭಾರತ ಮತ್ತು ಇತರ ಏಷ್ಯಾದ ದೇಶಗಳಿಗೆ ಅಳವಡಿಸಲಾಗಿದೆ. ಇದು 2000 ರಲ್ಲಿ ಪ್ರಾರಂಭವಾದ ಕಾರ್ಯಕ್ರಮವಾಗಿದೆ. ಭಾರತದಲ್ಲಿ ಎಲ್ ನೆಕ್ ತರಬೇತಿಯನ್ನು ಪುಣೆಯಲ್ಲಿರುವ ಸಿಪ್ಲಾ ಹಾಸ್ಪೈಸ್ ಮತ್ತು ತರಬೇತಿ ಕೇಂದ್ರವು ಸಹಕಾರದೊಂದಿಗೆ ನಡೆಸಲಾಗುತ್ತಿದೆ.

ಎಲ್ ನೆಕ್ ಯೋಜನೆಯು ದಾದಿಯರು ಮತ್ತು ಇತರ ಆರೋಗ್ಯ ವೃತ್ತಿಪರರಿಗೆ ಗುಣಮಟ್ಟದ ಪಾಲಿಯೆಟಿವ್ ಆರೈಕೆಯನ್ನು ಒದಗಿಸಲು ಅಗತ್ಯವಿರುವ ಜ್ಞಾನ ಮತ್ತು ಕೌಶಲ್ಯಗಳನ್ನು ನೀಡುತ್ತದೆ, ಅಲ್ಲಿ ದಾದಿಯರು ಮತ್ತು ವೈದ್ಯರು ನಿಜವಾಗಿಯೂ ತಮ್ಮ ಜೀವನವನ್ನು ಧನಾತ್ಮಕವಾಗಿ ಪರಿಣಾಮ ಬೀರಲು ಒಟ್ಟಾಗಿ ಕೆಲಸ ಮಾಡುತ್ತಾರೆ, ಜೊತೆಗೆ ತೀವ್ರ ಅನಾರೋಗ್ಯ ಮತ್ತು/ಅಥವಾ ಅಂತ್ಯವನ್ನು ಎದುರಿಸುತ್ತಿರುವ ರೋಗಿಗಳು ಮತ್ತು ಕುಟುಂಬಗಳ ಜೀವನದಲ್ಲಿಯು ಧನಾತ್ಮಕವಾಗಿ ಪರಿಣಾಮ ಬೀರುತ್ತಾರೆ.

ಎಂಡ್ ಆಫ್ ಲೈಫ್ ನರ್ಸಿಂಗ್ ಎಜುಕೇಶನ್ ಕನ್ಸೋರ್ಷಿಯಂ ಅನ್ನು ಮುಖ್ಯ ಅತಿಥಿಗಳಾದ ಕೆಎಂಸಿ ಮಣಿಪಾಲದ ಡೀನ್ ಡಾ. ಶರತ್ ಕುಮಾರ್ ರಾವ್ ಉದ್ಘಾಟಿಸಿದರು. ಮುಖ್ಯ ನಿರ್ವಹಣಾಧಿಕಾರಿ ಡಾ. ಆನಂದ್ ವೇಣುಗೋಪಾಲ್ ಹಾಗೂ ಕಸ್ತೂರ್ಬಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ್ ಶೆಟ್ಟಿ ಕಾರ್ಯಕ್ರಮದ ಗೌರವ ಅತಿಥಿಗಳಾಗಿದ್ದರು.

ಪಾಲಿಯೆಟಿವ್ ಔಷಧ ಮತ್ತು ಸಪೋರ್ಟಿವ್ ಕೇರ್ ವಿಭಾಗದ ಪ್ರಾದ್ಯಾಪಕರು ಮತ್ತು ಮುಖ್ಯಸ್ಥರಾದ ಡಾ. ನವೀನ್ ಸಾಲಿನ್ಸ್, ಎಲ್ ನೆಕ್ ಕಾರ್ಯಕ್ರಮದ ಅವಲೋಕನ ನೀಡಿದರು. ನರ್ಸಿಂಗ್ ಸೇವಾ ವಿಭಾಗದ ಮುಖ್ಯಸ್ಥೆ ಡಾ. ಪಿ. ಸುಬಾ ಸೂರಿಯಾ ಸ್ವಾಗತಿಸಿ, ನರ್ಸಿಂಗ್ ತರಬೇತಿ ಮತ್ತು ಗುಣಮಟ್ಟ ವಿಭಾಗದ ಉಸ್ತುವಾರಿ ಶರ್ಮಿನ್ ಕ್ರಿಸ್ಟಲ್ ಸಾಲಿನ್ಸ್, ವಂದಿಸಿದರು. ವೈದ್ಯರು, ದಾದಿಯರು ಮತ್ತು ಇತರ ಆರೋಗ್ಯ ಸೇವೆ ಒದಗಿಸುವವರು ಸೇರಿದಂತೆ 200 ಕ್ಕೂ ಹೆಚ್ಚು ಆರೋಗ್ಯ ವೃತ್ತಿಪರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಪಂಚವರ್ಣ: 231ನೇ ಪರಿಸರಸ್ನೇಹಿ ಅಭಿಯಾನ

ಕೋಟ. ನ.25: ಪಂಚವರ್ಣ ಸಂಸ್ಥೆ ಪರಿಸರ ಜಾಗೃತಿ ಸ್ವಚ್ಛತಾ ಆಂದೋಲನ ಅವಿಭಜಿತ...

ಸಿಒಡಿಪಿ: ವಿಚಾರ ಸಂಕಿರಣ

ಮಂಗಳೂರು, ನ.25: ಮಾನವ ಕಳ್ಳಸಾಗಣೆ ಮತ್ತು ಸೈಬರ್ ಅಪರಾಧ ಕುರಿತ ವಿಚಾರ...

ಜನಾರ್ದ​ನ್ ಕೊಡವೂರು​ ದಂಪತಿಗಳಿಗೆ ಅಭಿನಂದನೆ ​

ಉಡುಪಿ, ನ.24: ಭಾರ​ತ್ ಸ್ಕೌಟ್ಸ್ ಅಂಡ್ ಗೈಡ್ಸ್ ​ಉಡುಪಿ ಸಂಸ್ಥೆಯ ಜಿಲ್ಲಾ​...

ಶಿಸ್ತು, ಛಲ, ಆತ್ಮಸ್ಥೈರ್ಯ ಬೆಳೆಸಿಕೊಳ್ಳಿ: ಉಡುಪಿ ಜಿಲ್ಲಾಧಿಕಾರಿ

ಉಡುಪಿ, ನ.24: ಸ್ಕೌಟ್ಸ್ ಮತ್ತು ಗೈಡ್ಸ್ ನಲ್ಲಿ ಭಾಗವಹಿಸುವುದರಿಂದ ಜೀವನದಲ್ಲಿ ಶಿಸ್ತು,...
error: Content is protected !!