ಕಾರ್ಕಳ: ಜಗತ್ತಿನ ಎಲ್ಲಾ ಮೊದಲುಗಳ ತಾಯ್ನೆಲ ಭಾರತವಾಗಿದ್ದು ಜ್ಞಾನ, ವಿಜ್ಞಾನ, ಬಾಹ್ಯಾಕಾಶ, ತಂತ್ರಜ್ಞಾನ, ಶಾಸ್ತ್ರ, ಕಲೆ, ಸಾಹಿತ್ಯ, ಸಂಗೀತ, ಧರ್ಮ, ಸಂಸ್ಕೃತಿ, ಸಂಸ್ಕಾರ ಹೀಗೆ ಯಾವ ಕ್ಷೇತ್ರ ನೋಡಿದರೂ ಅಲ್ಲಿ ಭಾರತದ ಪ್ರಕಾಶ ಇದೆ, ವಿಕಾಸ ಇದೆ ಎಂದು ಸಂವೇದನಾ ಫೌಂಡೇಶನ್ ಸಂಸ್ಥಾಪಕ, ಚಿಂತಕ ಪ್ರಕಾಶ್ ಮಲ್ಪೆ ಹೇಳಿದರು.
ಅವರು ಗಣಿತನಗರದ ಶ್ರೀ ಮಹಾಗಣಪತಿ ದೇವಾಸ್ಥಾನ ಹಾಗೂ ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ ವತಿಯಿಂದ ನಡೆಯುತ್ತಿರುವ ತಿಂಗಳ ಸರಣಿ ಕಾರ್ಯಕ್ರಮ ಮೌಲ್ಯಸುಧಾದ 3ನೇ ಕಾರ್ಯಕ್ರಮದಲ್ಲಿ ‘ವಿಜಯೀ ಭಾರತ’ ವಿಷಯದ ಕುರಿತಂತೆ ವಿಶೇಷ ಉಪನ್ಯಾಸ ನೀಡಿದರು.
ಭಾರತ ಸಾವಿರಾರು ವರ್ಷಗಳ ಹಿಂದೆಯೇ ಜಗತ್ತು ಊಹಿಸದ ರೀತಿಯಲ್ಲಿ ಬೆಳೆದಿತ್ತು. ಪರಕೀಯರ ಆಕ್ರಮಣಕ್ಕೆ ಒಳಗಾಯಿತು. ಆದರೂ ಭಾರತ ಎಷ್ಟೇ ಜರ್ಜರಿತಗೊಂಡರೂ ತನ್ನ ಅಸ್ಮಿತೆಗಳನ್ನು ಕಳೆದುಕೊಂಡಿಲ್ಲ. ಎಷ್ಟೋ ನಾಗರಿಕತೆಗಳು ಅವಸಾನವಾದರೂ ಕೂಡಾ ಸಿಂಧೂ ನಾಗರಿಕತೆಯ ಈ ಹಿಂದೂ ಭೂಮಿ ತನ್ನ ಪರಂಪರೆಯನ್ನು ಹಾಗೇ ಉಳಿಸಿಕೊಂಡಿದೆ. ಅದನ್ನು ಬೆಳೆಸಿಕೊಂಡು ಹೋಗುವ ಜವಾಬ್ದಾರಿ ನಮ್ಮ ಮೇಲಿದೆ ಎಂದರು.
ಕಾರ್ಯಕ್ರಮದಲ್ಲಿ ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ನ ಅದ್ಯಕ್ಷ ಡಾ.ಸುಧಾಕರ್ ಶೆಟ್ಟಿ, ಟ್ರಸ್ಟಿ ಅನಿಲ್ ಕುಮಾರ್ ಜೈನ್, ಶ್ರೀ ಮಹಾಗಣಪತಿ ದೇವಸ್ಥಾನದ ಕಾರ್ಯದರ್ಶಿ ಸಾಹಿತ್ಯ, ಸಂಸ್ಥೆಯ ಪಿ.ಆರ್.ಒ ಜ್ಯೋತಿ ಪದ್ಮನಾಭ ಭಂಡಿ, ಕೆಜೆಎಸ್ಪಿಯು ಪ್ರಾಂಶುಪಾಲ ದಿನೇಶ್ ಎಂ ಕೊಡವೂರ್, ಕಾರ್ಕಳ ಜ್ಞಾನಸುಧಾ ಆಂಗ್ಲಮಾದ್ಯಮ ಪ್ರೌಢಶಾಲೆಯ ಪ್ರಾಂಶುಪಾಲೆ ಉಷಾ ರಾವ್ ಯು, ಉಪಪ್ರಾಂಶುಪಾಲೆ ವಾಣಿ ಕೆ ಉಪಸ್ಥಿತರಿದ್ದರು. ಉಪನ್ಯಾಸಕ ರವಿ ಜಿ ಕಾರ್ಯಕ್ರಮ ನಿರೂಪಿಸಿ ಸ್ವಾಗತಿಸಿ ವಂದಿಸಿದರು.