Monday, November 25, 2024
Monday, November 25, 2024

ಜೆಇಇ ಮೈನ್- ಜ್ಞಾನಸುಧಾದ 5 ವಿದ್ಯಾರ್ಥಿಗಳಿಗೆ 99ಕ್ಕಿಂತ ಅಧಿಕ ಪರ್ಸಂಟೈಲ್

ಜೆಇಇ ಮೈನ್- ಜ್ಞಾನಸುಧಾದ 5 ವಿದ್ಯಾರ್ಥಿಗಳಿಗೆ 99ಕ್ಕಿಂತ ಅಧಿಕ ಪರ್ಸಂಟೈಲ್

Date:

ಕಾರ್ಕಳ: ರಾಷ್ಟ್ರಮಟ್ಟದಲ್ಲಿ ನಡೆದ ಇಂಜಿನಿಯರಿಂಗ್ ಪ್ರವೇಶ ಪರೀಕ್ಷೆ ಜೆಇಇ ಮೈನ್ 2ನೇ ಫೇಸ್ ಪರೀಕ್ಷೆಯ ಬಳಿಕ ಅಂತಿಮ ಫಲಿತಾಂಶದಲ್ಲಿ ಕಾರ್ಕಳ ಜ್ಞಾನಸುಧಾ ಪಿ.ಯು ಕಾಲೇಜಿನ 5 ವಿದ್ಯಾರ್ಥಿಗಳು 99ಕ್ಕಿಂತ ಅಧಿಕ ಪರ್ಸಂಟೈಲ್ ಗಳಿಸಿದ್ದಾರೆ.

ವಿದ್ಯಾರ್ಥಿಗಳಾದ ಸ್ತುತಿ ಎಸ್ ೯೯.೬೦ ಪರ್ಸಂಟೈಲ್ (ಜನರಲ್ ಮೆರಿಟ್ ೩೭೧೯ನೇ ರ‍್ಯಾಂಕ್, ಒಬಿಸಿ ೬೯೧ನೇ ರ‍್ಯಾಂಕ್), ಅಖಿಲ್ ಯು ವಾಗ್ಲೆ ೯೯.೫೬ ಪರ್ಸಂಟೈಲ್ (ಜನರಲ್ ಮೆರಿಟ್ ೪೦೫೦ನೇ ರ‍್ಯಾಂಕ್, ಒಬಿಸಿ ೭೭೬ನೇ ರ‍್ಯಾಂಕ್), ಚಿರಾಗ್.ಜಿ.ಎಸ್ ೯೯.೩೫ ಪರ್ಸಂಟೈಲ್ (ಜನರಲ್ ಮೆರಿಟ್ ೫೯೭೭ನೇ ರ‍್ಯಾಂಕ್, ಒಬಿಸಿ ೧೨೨೦ನೇ ರ‍್ಯಾಂಕ್), ಪ್ರಜ್ವಲ್.ಜೆ.ಪಟಗಾರ್ ೯೯.೨೪ ಪರ್ಸಂಟೈಲ್ (ಜನರಲ್ ಮೆರಿಟ್ ೭೦೨೦ನೇ ರ‍್ಯಾಂಕ್, ಒಬಿಸಿ ೧೪೫೦ನೇ ರ‍್ಯಾಂಕ್), ಆರ್ಯ.ಪಿ.ಶೆಟ್ಟಿ ೯೯.೧೦ ಪರ್ಸಂಟೈಲ್ (ಜನರಲ್ ಮೆರಿಟ್ ೮೨೨೬ನೇ ರ‍್ಯಾಂಕ್), ದಾಖಲಿಸಿದ್ದಾರೆ.

ಜೊತೆಗೆ ಆರ್ಯನ್ ವಿದ್ಯಾಧರ್ ಶೆಟ್ಟಿ ೯೮.೬೧ ಪರ್ಸಂಟೈಲ್ (ಒಬಿಸಿ ೨೮೩೮ನೇ ರ‍್ಯಾಂಕ್), ಆದರ್ಶ್ ತಟಾವಟಿ ೯೮.೪೨ ಪರ್ಸಂಟೈಲ್, ಸಾತ್ವಿಕ್ ಚಂದ್ರ ೯೮.೩೮ ಪರ್ಸಂಟೈಲ್, ಪ್ರಜ್ಞಾ ವಿ. ೯೭.೯೨ ಪರ್ಸಂಟೈಲ್, ಕೆ.ಶಶಾಂಕ್ ಕಲ್ಕುರ ೯೭.೮೦ ಪರ್ಸಂಟೈಲ್ (ಜನರಲ್ ಇಡಬ್ಲುಎಸ್ ೨೭೯೪ನೇ ರ‍್ಯಾಂಕ್), ತೇಜಸ್ ನಿತೇಶ್ ತೊರ್ಕೆ ೯೭.೫೯ಪರ್ಸಂಟೈಲ್, ಶಶಾಂಕ್.ಆರ್.ಆಚಾರ್ಯ ೯೭.೪೫ ಪರ್ಸಂಟೈಲ್, ಸೃಜನ್ ಪ್ರಕಾಶ್ ೯೭.೩೫ ಪರ್ಸಂಟೈಲ್ (ಒಬಿಸಿ ೬೦೦೬ನೇ ರ‍್ಯಾಂಕ್), ಮಹಮ್ಮದ್ ರಿಹಾನ್ ವಾಲಿಕರ್ ೯೭.೩೩ ಪರ್ಸಂಟೈಲ್ (ಒಬಿಸಿ ೬೦೬೮ನೇ ರ‍್ಯಾಂಕ್), ಕಾರ್ತಿಕ್ ಬ್ಯಾಕೊಡ್ ೯೭.೦೪ ಪರ್ಸಂಟೈಲ್ (ಜನರಲ್ ಇಡಬ್ಲುಎಸ್ ೩೮೦೦ನೇ ರ‍್ಯಾಂಕ್) ಸಂಪಾದಿಸಿದ್ದಾರೆ.

ಈವರೆಗೆ ನಡೆದ ಜೆಇಇ ಮೈನ್ ೨೦೨೨ರ ಒಟ್ಟು ಫಲಿತಾಂಶದಲ್ಲಿ ೫ ವಿದ್ಯಾರ್ಥಿಗಳು ೯೯ಕ್ಕಿಂತ ಅಧಿಕ, ೮ ವಿದ್ಯಾರ್ಥಿಗಳು ೯೮ಕ್ಕಿಂತ ಅಧಿಕ, ೩೩ ವಿದ್ಯಾರ್ಥಿಗಳು ೯೫ಕ್ಕಿಂತ ಅಧಿಕ, ಒಟ್ಟು ೫೯ ವಿದ್ಯಾರ್ಥಿಗಳು ೯೦ಕ್ಕಿಂತ ಅಧಿಕ ಪರ್ಸೆಟೈಲ್ ಗಳಿಸಿದ್ದು, ಒಟ್ಟು ೮೮ ವಿದ್ಯಾರ್ಥಿಗಳು ದೇಶದ ಪ್ರತಿಷ್ಠಿತ ಐಐಟಿ ಪ್ರವೇಶ ಪರೀಕ್ಷೆಯಾದ ಜೆಇಇ ಅಡ್ವಾನ್ಸ್ಗೆ ಅರ್ಹತೆ ಗಿಟ್ಟಿಸಿರುತ್ತಾರೆ.

ವಿದ್ಯಾರ್ಥಿಗಳ ಸಾಧನೆಗೆ ಅಜೆಕಾರ್ ಪದ್ಮಗೋಪಾಲ್ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಡಾ.ಸುಧಾಕರ್ ಶೆಟ್ಟಿ ಅಭಿನಂದಿಸಿ, ಜ್ಞಾನಸುಧಾ ಎಂಟ್ರೆನ್ಸ್ ಅಕಾಡೆಮಿಯ ಪರಿಶ್ರಮವನ್ನು ಶ್ಲಾಘಿಸಿದ್ದಾರೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಪಂಚವರ್ಣ: 231ನೇ ಪರಿಸರಸ್ನೇಹಿ ಅಭಿಯಾನ

ಕೋಟ. ನ.25: ಪಂಚವರ್ಣ ಸಂಸ್ಥೆ ಪರಿಸರ ಜಾಗೃತಿ ಸ್ವಚ್ಛತಾ ಆಂದೋಲನ ಅವಿಭಜಿತ...

ಸಿಒಡಿಪಿ: ವಿಚಾರ ಸಂಕಿರಣ

ಮಂಗಳೂರು, ನ.25: ಮಾನವ ಕಳ್ಳಸಾಗಣೆ ಮತ್ತು ಸೈಬರ್ ಅಪರಾಧ ಕುರಿತ ವಿಚಾರ...

ಜನಾರ್ದ​ನ್ ಕೊಡವೂರು​ ದಂಪತಿಗಳಿಗೆ ಅಭಿನಂದನೆ ​

ಉಡುಪಿ, ನ.24: ಭಾರ​ತ್ ಸ್ಕೌಟ್ಸ್ ಅಂಡ್ ಗೈಡ್ಸ್ ​ಉಡುಪಿ ಸಂಸ್ಥೆಯ ಜಿಲ್ಲಾ​...

ಶಿಸ್ತು, ಛಲ, ಆತ್ಮಸ್ಥೈರ್ಯ ಬೆಳೆಸಿಕೊಳ್ಳಿ: ಉಡುಪಿ ಜಿಲ್ಲಾಧಿಕಾರಿ

ಉಡುಪಿ, ನ.24: ಸ್ಕೌಟ್ಸ್ ಮತ್ತು ಗೈಡ್ಸ್ ನಲ್ಲಿ ಭಾಗವಹಿಸುವುದರಿಂದ ಜೀವನದಲ್ಲಿ ಶಿಸ್ತು,...
error: Content is protected !!