ಉಡುಪಿ: ತುಳುವಿಗೆ ಸಾಂವಿಧಾನಿಕ ಮಾನ್ಯತೆ ಸಿಗಬೇಕು ಎಂಬ ಆಗ್ರಹ ತುಳುನಾಡಿನಲ್ಲಿ ಹೊಸ ಸ್ವರೂಪವನ್ನು ಪಡೆದುಕೊಳ್ಳುತ್ತಿರುವ ಈ ಸಂದರ್ಭದಲ್ಲಿ, ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಶಿಯೇಶನ್ ಉಡುಪಿ ವಲಯದ 29ನೇ ಮಹಾಸಭೆಯ ಕಾರ್ಯಕಲಾಪ ತುಳುವಿನಲ್ಲಿಯೇ ಹಮ್ಮಿಕೊಂಡಿದ್ದು ಶ್ಲಾಘನೀಯ ಎಂದು ಎಸ್.ಕೆ.ಪಿ.ಎ ಜಿಲ್ಲಾಧ್ಯಕ್ಷ ಹಾಗೂ ರಾಜ್ ಸೌಂಡ್ ಅಂಡ್ ಲೈಟ್ಸ್ ತುಳು ಚಲನಚಿತ್ರ ನಿರ್ಮಾಪಕ ಆನಂದ್ ಎನ್ ಬಂಟ್ವಾಳ್ ಅಭಿಪ್ರಾಯಪಟ್ಟರು. ಅವರು ಉಡುಪಿಯ ಜಗನ್ನಾಥ ಸಭಾಭವನದಲ್ಲಿ ಉಡುಪಿ ವಲಯದ ಮಹಾಸಭೆಯ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ವಿದ್ಯಾರ್ಥಿವೇತನ, ವೈದ್ಯಕೀಯ ನೆರವು, ಛಾಯಾಚಿತ್ರ ಸ್ಪರ್ಧೆಯ ಬಹುಮಾನ ವಿತರಣೆ, ಗುರುತಿಸುವಿಕೆ, ನೂತನ ಸದಸ್ಯರ ಸೇರ್ಪಡಿಸುವಿಕೆ ಮುಂತಾದ ಕಾರ್ಯಕ್ರಮಗಳು ನಡೆಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯದರ್ಶಿ ನಿತಿನ್ ಬೆಳುವಾಯಿ, ಜಿಲ್ಲಾ ಕೋಶಾಧಿಕಾರಿ ನವೀನ ರೈ ಪಂಜಳ, ಉಪಾಧ್ಯಕ್ಷ ಪದ್ಮಪ್ರಸಾದ್ ಜೈನ್, ಮಾಜಿ ಜಿಲಾಧ್ಯಕ್ಷ ಕೆ. ವಾಸುದೇವ ರಾವ್, ಜಿಲ್ಲಾ ಕಾರ್ಯದರ್ಶಿ ವಾಮನ ಪಡುಕೆರೆ, ಜಯಕರ ಸುವರ್ಣ, ಪ್ರವೀಣ್ ಹೂಡೆ ಪ್ರಕಾಶ್ ಶೆಟ್ಟಿ, ಅಶೋಕ್ ಪುತ್ರನ್, ಪ್ರವೀಣ್ ಹರಿಖಂಡಿಗೆ, ಎಂ.ಎಸ್ ಮಂಜು ಪರ್ಕಳ, ದಾಮೋದರ್ ಸುವರ್ಣ, ಸತೀಶ್ ಸೇರಿಗಾರ್, ಹರೀಶ್ ಅಲೆವೂರು, ಸಂದೀಪ್ ಕಾಮತ್ ಉಪಸ್ಥಿತರಿದ್ದರು.
ವಲಯಾಧ್ಯಕ್ಷ ಜನಾರ್ದನ ಕೊಡವೂರ್ ಸ್ವಾಗತಿಸಿ, ಕಾರ್ಯದರ್ಶಿ ಪ್ರವೀಣ್ ಕೊರೆಯ ವರದಿ ವಾಚಿಸಿದರು. ದಿವಾಕರ ಹಿರಿಯಡ್ಕ ಲೆಕ್ಕಪತ್ರ ಮಂಡನೆ ಮಾಡಿದರು. ದಿವಾಕರ್ ಕಟೀಲ್ ಪ್ರಾರ್ಥಿಸಿದರು. ಸುರಭಿ ಸುಧೀರ್ ವಂದಿಸಿದರು, ರಾಘವೇಂದ್ರ ಶೇರಿಗಾರ್ ನಿರೂಪಿಸಿದರು.