ಉಡುಪಿ: ವೈದ್ಯಕೀಯ ಕ್ಷೇತ್ರದಲ್ಲಿ ಹೆಸರುವಾಸಿಯಾಗಿರುವ ಗಿರಿಜಾ ಗ್ರೂಪ್ ಆಫ್ ಕನ್ಸರ್ನ್ಸ್ ಇದರ ನೂತನ ಫಿಸಿಯೊಥೆರಪಿ ಮತ್ತು ಪುನರ್ವಸತಿ ಕೇಂದ್ರವಾದ ‘ಫಿಸಿಯೋಕೇರ್’ ಇದರ ಉದ್ಘಾಟನಾ ಸಮಾರಂಭ ಜುಲೈ 9 ಶನಿವಾರ ಸಂಜೆ 5 ಗಂಟೆಗೆ ಮಿತ್ರಾ ಆಸ್ಪತ್ರೆಯ ಬಳಿಯ ವಾದಿರಾಜ ಕಾಂಪ್ಲೆಕ್ಸ್ ನೆಲ ಮಹಡಿಯಲ್ಲಿ ನಡೆಯಲಿದೆ.
ಫಿಸಿಯೋಕೇರ್ ನಲ್ಲಿ ಬೆನ್ನು ನೋವು, ಮಂಡಿ ನೋವು, ಸಂಧಿಗಳ ನೋವು ಇತ್ಯಾದಿಗಳಿಗೆ ಸೀನಿಯರ್ ಕನ್ಸಲ್ಟೆಂಟ್ ಫಿಸಿಯೋಥೆರಪಿಸ್ಟ್ ಆಗಿರುವ ಡಾ. ದೀಪಾ ನಾಯಕ್ ಮತ್ತು ಅವರ ತಂಡದಿಂದ ಚಿಕಿತ್ಸೆ ನೀಡಲಾಗುವುದು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.