Home ಸುದ್ಧಿಗಳು ಪ್ರಾದೇಶಿಕ ಗಂಗೊಳ್ಳಿ ರೋಟರಿ ಕ್ಲಬ್ ಅಧ್ಯಕ್ಷರಾಗಿ ಸುಗುಣ ಆರ್‌. ಕೆ. ಆಯ್ಕೆ

ಗಂಗೊಳ್ಳಿ ರೋಟರಿ ಕ್ಲಬ್ ಅಧ್ಯಕ್ಷರಾಗಿ ಸುಗುಣ ಆರ್‌. ಕೆ. ಆಯ್ಕೆ

404
0

ಕುಂದಾಪುರ: ರೋಟರಿ ಕ್ಲಬ್ ಗಂಗೊಳ್ಳಿ ಡಿಸ್ಟ್ರಿಕ್ 3182 ವಲಯ 1ರ, 2022 – 23ನೇ ಸಾಲಿನ ಅಧ್ಯಕ್ಷರಾಗಿ ಸುಗುಣ ಆರ್. ಕೆ. ಆಯ್ಕೆಯಾಗಿರುತ್ತಾರೆ. ಕಾರ್ಯದರ್ಶಿಯಾಗಿ ಚಂದ್ರಕಲಾ ಟಿ ಮತ್ತು ಖಜಾಂಚಿಯಾಗಿ ಜನಾರ್ದನ ಪೆರಾಜೆ ಆಯ್ಕೆಯಾಗಿರುತ್ತಾರೆ.

ಜುಲೈ 17 ಭಾನುವಾರದಂದು ಪದಪ್ರದಾನ ಸಮಾರಂಭವು ಗಂಗೊಳ್ಳಿಯ ಗುಜ್ಜಾಡಿ ಗೋಪಾಲ ನಾಯಕ್ ರೋಟರಿ ಇಂಡೋರ್ ಸ್ಟೇಡಿಯಂನಲ್ಲಿ ಜರಗಲಿದ್ದು ವಲಯ 1 ರ ಅಸಿಸ್ಟೆಂಟ್ ಗವರ್ನರ್ ಡಾ. ಉಮೇಶ್ ಪುತ್ರನ್ ಪದಪ್ರದಾನ ಸಮಾರಂಭವನ್ನು ನೆರವೇರಿಸಲಿದ್ದಾರೆ.

ಖ್ಯಾತ ಬರಹಗಾರ್ತಿ ಶುಭ ಮರವಂತೆ, ವಲಯ ಸೇನಾನಿ ಡಾ. ಪ್ರವೀಣ್ ಶೆಟ್ಟಿ ಮೊದಲಾದವರು ಪಾಲ್ಗೊಳ್ಳಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.