ಉಡುಪಿ: ಕಾರ್ತಿಕ ಮಾಸದ ಅಂಗವಾಗಿ ಉಡುಪಿ ತೆಂಕಪೇಟೆ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನದಲ್ಲಿ ಪಶ್ಚಿಮ ಜಾಗರಪೂಜೆ, ಸುಪ್ರಭಾತ, ಕಾಕಡ ಆರತಿ, ಶ್ರೀ ದೇವರ ಸನ್ನಿಧಿಯಲ್ಲಿ ಸಾವಿರಾರು ಹಣತೆಗಳನ್ನು ಬೆಳಗಿಸುವುದರ ಮೂಲಕ ವಿಶ್ವರೂಪ ದರ್ಶನ ನಡೆಯಿತು.
ವಿಶೇಷ ಆಕರ್ಷಣೆಯಾಗಿ ರಂಗೋಲಿಯ ಮೂಲಕ ಶ್ರೀ ರಾಮ ಮಂದಿರ, ತಿರುಪತಿ ಶ್ರೀನಿವಾಸ ದರ್ಶನ, ಗಣಪತಿ, ಈಶ್ವರ, ಕಡಗೋಲು ಕೃಷ್ಣ, ಪಾಂಡುರಂಗ ವಿಠ್ಠಲ, ಹೂವುಗಳ ರಂಗೋಲಿ, ಹಣತೆಯ ಮೂಲಕ ಓಂ, ಸ್ವಸ್ತಿಕ್, ಶಂಖ ಚಕ್ರಗಳನ್ನು ರಚಿಸಲಾಯತು.
ನೂರಾರು ಭಕ್ತರು ಶ್ರೀ ದೇವರ ದರ್ಶನ ಪಡೆದರು. ಶ್ರೀ ದೇವರಿಗೆ ವಿಶೇಷ ಅಲಂಕಾರದ ನಂತರ ಮಹಾಪೂಜೆ, ಪ್ರಸಾದ ವಿತರಣೆ ನಡೆಯತು.
ಅರ್ಚಕರಾದ ದಯಾಘನ ಭಟ್, ವಿನಾಯಕ ಭಟ್, ಆಡಳಿತ ಮೊಕ್ತೇಸರ ಪಿ.ವಿ.ಶೆಣೈ, ಆಡಳಿತ ಮಂಡಳಿ ಸದಸ್ಯರಾದ ಗಣೇಶ್ ಕಿಣಿ, ರೋಹಿತಾಕ್ಷ ಪಡಿಯಾರ್, ವಸಂತ್ ಕಿಣಿ, ವಿಶ್ವನಾಥ್ ಭಟ್, ಜಿ ಎಸ್ ಬಿ ಯುವಕ ಮಂಡಳಿ ಅಧ್ಯಕ್ಷ ನಿತೇಶ್ ಶೆಣೈ, ವಿಶಾಲ್ ಶೆಣೈ, ಭಾಸ್ಕರ್ ಶೆಣೈ, ಜಿ.ಸ್.ಬಿ. ಯುವಕ ಮಂಡಳಿ, ಮಹಿಳಾ ಮಂಡಳಿ ಸದಸ್ಯರು ಮೊದಲಾದವರು ಉಪಸ್ಥಿತರಿದ್ದರು.