Monday, November 25, 2024
Monday, November 25, 2024

ನಂದಿನಿ ಸಿಹಿ ಉತ್ಸವ

ನಂದಿನಿ ಸಿಹಿ ಉತ್ಸವ

Date:

ಉಡುಪಿ: ರಾಜ್ಯದಲ್ಲಿ ಸಾಲು ಸಾಲು​ ಸಾಲು ​ಹಬ್ಬಗಳು ಪ್ರಾರಂಭವಾಗಿರುವುದರಿಂದ ಹಬ್ಬಗಳನ್ನು ನಂದಿನಿಯೊಂದಿಗೆ ಆಚರಿ​ಸಿ ಸಂತಸ ಪಡೋಣ ಎಂದು ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ನಿಯಮಿತ ಮಂಗಳೂರು ಇದರ ಅಧ್ಯಕ್ಷರಾದ ​ಕೆ. ​ರವಿರಾಜ್​ ಹೆಗ್ಡೆ ಹೇಳಿದರು.

ಉಡುಪಿಯಲ್ಲಿ ನಂದಿನಿ ಸಿಹಿ ಉತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ರಾಜ್ಯದಲ್ಲಿ ಹಾಲು ಸಂಗ್ರಹಣೆಯಲ್ಲಿ ಸಮೃದ್ಧಿ ಹೊಂದಿರುವುದರಿಂದ ಹೈನುಗಾರರು ಉತ್ಪಾದಿಸಿದ ಹಾಲಿಗೆ ಮಾರುಕಟ್ಟೆ ಕಲ್ಪಿಸುವ ನಿಟ್ಟಿನಲ್ಲಿ ಕರ್ನಾಟಕ ಹಾಲು ಮಹಾಮಂಡಳಿ​ಯು ವರ್ಷದಲ್ಲಿ ಎರಡು ಬಾರಿ ​ಸಿಹಿ ​ಉತ್ಸವ ಆಚರಿಸುತ್ತಿ​ದೆ.

ಉತ್ಸವದ ಅವಧಿಯಲ್ಲಿ ಉತ್ಪನ್ನಗಳಿಗೆ​ 10%​ ರಿಯಾಯಿತಿಯನ್ನು ನೀಡುವ ಗ್ರಾಹಕ​ ​ಸ್ನೇಹಿ ಯೋಜನೆಯನ್ನು ಹಮ್ಮಿಕೊಂಡಿದೆ​. ​ದಿನಾಂಕ ​19.08.2021 ರಿಂದ 31.8.2021ರ ತನಕ ಒಟ್ಟು 13 ದಿನಗಳ ಕಾಲ ಈ ಉತ್ಸವವನ್ನು ಆಚರಿಸುತ್ತಿ​ದೆ. ಈ ಅವಧಿಯಲ್ಲಿ ನಗರ ಹಾಗೂ ಗ್ರಾಮೀಣ ಭಾಗಗಳಲ್ಲಿ ನನ್ನನ್ನು ಇನ್ನಷ್ಟು ಜನರಿಗೆ ಪರಿಚಯಿಸಿ ನಂದಿನಿಯ ಮಾರುಕಟ್ಟೆಯನ್ನು ವಿಸ್ತರಿಸಿಕೊಂಡು ರಾಜ್ಯದ ಹೈನುಗಾರರಿಗೆ ಇನ್ನಷ್ಟು ಪ್ರೋತ್ಸಾಹ ನೀಡುವ ಕಾರ್ಯಕ್ರಮ ಇದಾಗಿದೆ ಎಂದರು.

​​ನಿರ್ದೇಶಕರಾದ ಕಾಪು ದಿವಾಕರ ಶೆಟ್ಟಿ​, ಸ್ಮಿ​ತಾ ​ಆರ್. ಶೆಟ್ಟಿ, ಸಹಾಯಕ ವ್ಯವಸ್ಥಾಪಕ ಸುಧಾಕರ್​, ​ಮಾರುಕಟ್ಟೆ ವಿಭಾಗದ ​ಅಧಿಕಾರಿ ​ಸಂದೀ​ಪ್ ಮತ್ತು ಸತೀಶ್ ಪೂಜಾರಿ​, ನಂದಿನಿ ಮಳಿಗೆಯ ​ಮಾಲಕ ​ಪ್ರಭಾತ್ ಕೋಟ್ಯಾನ್ ​ಉಪಸ್ಥಿತರಿದ್ದರು. ​​

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಪಂಚವರ್ಣ: 231ನೇ ಪರಿಸರಸ್ನೇಹಿ ಅಭಿಯಾನ

ಕೋಟ. ನ.25: ಪಂಚವರ್ಣ ಸಂಸ್ಥೆ ಪರಿಸರ ಜಾಗೃತಿ ಸ್ವಚ್ಛತಾ ಆಂದೋಲನ ಅವಿಭಜಿತ...

ಸಿಒಡಿಪಿ: ವಿಚಾರ ಸಂಕಿರಣ

ಮಂಗಳೂರು, ನ.25: ಮಾನವ ಕಳ್ಳಸಾಗಣೆ ಮತ್ತು ಸೈಬರ್ ಅಪರಾಧ ಕುರಿತ ವಿಚಾರ...

ಜನಾರ್ದ​ನ್ ಕೊಡವೂರು​ ದಂಪತಿಗಳಿಗೆ ಅಭಿನಂದನೆ ​

ಉಡುಪಿ, ನ.24: ಭಾರ​ತ್ ಸ್ಕೌಟ್ಸ್ ಅಂಡ್ ಗೈಡ್ಸ್ ​ಉಡುಪಿ ಸಂಸ್ಥೆಯ ಜಿಲ್ಲಾ​...

ಶಿಸ್ತು, ಛಲ, ಆತ್ಮಸ್ಥೈರ್ಯ ಬೆಳೆಸಿಕೊಳ್ಳಿ: ಉಡುಪಿ ಜಿಲ್ಲಾಧಿಕಾರಿ

ಉಡುಪಿ, ನ.24: ಸ್ಕೌಟ್ಸ್ ಮತ್ತು ಗೈಡ್ಸ್ ನಲ್ಲಿ ಭಾಗವಹಿಸುವುದರಿಂದ ಜೀವನದಲ್ಲಿ ಶಿಸ್ತು,...
error: Content is protected !!