ಟೋಕಿಯೊ: ಇಂದು ನಡೆದ ಟೋಕಿಯೊ ಒಲಿಂಪಿಕ್ಸ್ ಮಹಿಳಾ ಬಾಕ್ಸಿಂಗ್ ವೆಲ್ಟರ್ವೈಟ್ (64-69 ಕೆಜಿ) ಸೆಮಿಫೈನಲ್ ನಲ್ಲಿ ಭಾರತದ ಲೋವ್ಲಿನಾ ಬೊರ್ಗೊಹೈನ್ ಟರ್ಕಿಯ ಬುಸಿನಾಸ್ ಸುರ್ಮೆನೆಲಿ ವಿರುದ್ಧ 0-5 ಅಂತರದಿಂದ ಪರಾಭವಗೊಂಡು ಫೈನಲ್ ಪ್ರವೇಶಿಸಲು ವಿಫಲರಾದರೂ ಕಂಚಿನ ಪದಕವನ್ನು ಗೆಲ್ಲುವ ಮೂಲಕ ಭಾರತಕ್ಕೆ ಮೂರನೇ ಪದಕವನ್ನು ನೀಡಿದ್ದಾರೆ.
ಒಲಿಂಪಿಕ್ಸ್ ಬಾಕ್ಸಿಂಗ್ ನಲ್ಲಿ ಸೆಮಿಫೈನಲ್ ನಲ್ಲಿ ಪರಾಭವಗೊಂಡ ಬಾಕ್ಸರ್ ಗಳಿಗೆ ಕಂಚಿನ ಪದಕ ಸಿಗಲಿರುವುದರಿಂದ ಭಾರತಕ್ಕೆ ಮತ್ತೊಂದು ಪದಕ ಲಭಿಸಿದೆ. ತನ್ಮೂಲಕ 2008ರಲ್ಲಿ ವಿಜೇಂದರ್ ಸಿಂಗ್, 2012 ರಲ್ಲಿ ಮೇರಿ ಕೊಮ್ ಬಳಿಕ ಇದೀಗ ಬಾಕ್ಸಿಂಗ್ ನಲ್ಲಿ 23ರ ಹರೆಯದ ಲೋವ್ಲಿನಾಗೆ ಪದಕ ಒಲಿದಿದೆ.
ಲೋವ್ಲಿನಾಗೆ ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿ ಟ್ವೀಟ್ ಮಾಡಿದ್ದಾರೆ.