Saturday, November 23, 2024
Saturday, November 23, 2024

ವಿಶಾಲ ಗಾಣಿಗ ಕೊಲೆ ಪ್ರಕರಣ ಬೇಧಿಸಿದ ಉಡುಪಿ ಪೊಲೀಸರು

ವಿಶಾಲ ಗಾಣಿಗ ಕೊಲೆ ಪ್ರಕರಣ ಬೇಧಿಸಿದ ಉಡುಪಿ ಪೊಲೀಸರು

Date:

ಉಡುಪಿ: ಬ್ರಹ್ಮಾವರ ಪೊಲೀಸ್ ಠಾಣಾ ಸರಹದ್ದಿನ ಕುಮ್ರಗೋಡು ಗ್ರಾಮದ ಮಿಲನ ರೆಸಿಡೆನ್ಸಿಯ ಪ್ಲಾಟ್ ನಂಬ್ರ ಕ-21ರಲ್ಲಿ ವಿಶಾಲ ಗಾಣಿಗ ಇವರು ಒಂಟಿಯಾಗಿದ್ದ ಸಮಯದಲ್ಲಿ ಜುಲಾಯಿ 12ರಂದು ಮಧ್ಯಾಹ್ನದ ಸಮಯದಲ್ಲಿ ಯಾರೋ ಅಪರಿಚಿತ ವ್ಯಕ್ತಿ ಪ್ಲಾಟೊಳಗೆ ಪ್ರವೇಶ ಮಾಡಿ, ವಿಶಾಲ ಗಾಣಿಗರವರನ್ನು ಎಲೆಕ್ನಿಕ್ ವಯರ್‌ನಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿ, ಆಕೆಯ ಮೈಮೇಲಿದ್ದ ಚಿನ್ನಾಭರಣಗಳನ್ನು ಸುಲಿಗೆ ಮಾಡಿರುವ ಬಗ್ಗೆ ಮಾಹಿತಿ ಪಡೆದ ತಕ್ಷಣವೇ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ವಿಷ್ಣುವರ್ಧನ ಎನ್, ಐ.ಪಿ.ಎಸ್ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಕುಮಾರಚಂದ್ರ, ಬ್ರಹ್ಮಾವರ ವೃತ್ತ ನಿರೀಕ್ಷಕರಾದ ಅನಂತಪದ್ಮನಾಭ, ಮಣಿಪಾಲ ಪೊಲೀಸ್ ನಿರೀಕ್ಷಕರಾದ ಮಂಜುನಾಥ, ಮಲ್ಪೆ ವೃತ್ತ ನಿರೀಕ್ಷಕರಾದ ಶರಣ ಗೌಡ, ಉಡುಪಿ ನಗರ ಠಾಣೆಯ ಪೊಲೀಸ್ ನಿರೀಕ್ಷಕರಾದ ಪ್ರಮೋದ ಮತ್ತು ವಿಧಿ ವಿಜ್ಞಾನದ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿರುತ್ತಾರ.

ಈ ಕೊಲೆ ಪ್ರಕರಣವನ್ನು ಭೇದಿಸಲು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ವಿಷ್ಣುವರ್ಧನ್ ಎನ್. ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಕುಮಾರಚಂದ್ರರವರ ಮಾರ್ಗದರ್ಶನದಂತೆ, ಸುಧಾಕರ ಎಸ್. ನಾಯ್ಕ, ಪೊಲೀಸ್ ಉಪಾಧೀಕ್ಷಕರು, ಉಡುಪಿ ಉಪ ವಿಭಾಗ, ಉಡುಪಿ ರವರ ನಿರ್ದೇಶನದಂತೆ ಅನಂತ ಪದ್ಮನಾಭ, ಸಿಪಿಐ ಬ್ರಹ್ಮಾವರ ಮತ್ತು ಪಿ.ಎಸ್.ಐ ರವರಾದ ಗುರುನಾಥ ಬಿ ಹಾದಿಮನಿ ರವರ ತಂಡ ಮಂಜುನಾಥ, ಪಿ.ಐ, ಮಣಿಪಾಲ ಮತ್ತು ಪಿ.ಎಸ್.ಐ ರವರಾದ ರಾಜಶೇಖರ ವಂದಲಿ ಶರಣಗೌಡ, ಸಿಪಿಐ, ಮಲ್ಪೆ ವೃತ್ತ ಮತ್ತು ಪಿ.ಎಸ್.ಐ ರವರಾದ ಮಧು ಸಂಪತ್‌ಕುಮಾರ್ ಎ, ಸಿಪಿಐ ಕಾರ್ಕಳ ಮತ್ತು ಪಿ.ಎಸ್.ಐ, ರವರಾದ ರಾಘವೇಂದ್ರ ಸಿ ಮತ್ತು ಶ್ರೀಧರ್ ನಾಯ್ಕ ಹಾಗೂ ಜಿಲ್ಲಾ ಪೊಲೀಸ್ ಕಛೇರಿಯ ಆರ್.ಡಿ.ಸಿ.ಯ ತಾಂತ್ರಿಕ ತಂಡ ಒಳಗೊಂಡಂತೆ ಒಟ್ಟು 5 ವಿಶೇಷ ತಂಡಗಳನ್ನು ಆರೋಪಿಗಳ ಪತ್ತೆಗೆ ರಚಿಸಲಾಗಿರುತ್ತದೆ.

ಆರೋಪಿಗಳ ಪತ್ತೆಗೆ ವಿಶೇಷ ತಂಡದ ಅಧಿಕಾರಿಗಳಾದ ಮಂಜುನಾಥ ಪಿ.ಐ ಮಣಿಪಾಲ, ಶರಣ ಗೌಡ, ಸಿಪಿಐ ಮಲ್ಪೆ, ಮಧು ಪಿ.ಎಸ್.ಐ ಕಾರ್ಕಳ ಮತ್ತು ರಾಜಶೇಖರ ವಂಡಲಿ, ಪಿ.ಎಸ್.ಐ ಮಣಿಪಾಲ ಇವರುಗಳು ತಾಂತ್ರಿಕ ಸಾಕ್ಷ್ಯಾಧಾರಗಳ ಆಧಾರದ ಮೇಲೆ ಆರೋಪಿಗಳ ಪತ್ತೆಗೆ ರಾಜ್ಯದ ವಿವಿಧ ಭಾಗಗಳಲ್ಲಿ ಪ್ರಯತ್ನ ನಡೆಸಿ, ನಂತರ ಬೇರೆ ರಾಜ್ಯಗಳಿಗೂ ತೆರಳಿ ನಂತರ ಮಹತ್ವದ ಸುಳಿವಿನ ಆಧಾರದಲ್ಲಿ ಉತ್ತರ ಪ್ರದೇಶದ ಗೋರುರಕ್ಕೆ ತೆರಳಿ ಅಲ್ಲಿನ ಎಸ್.ಎಸ್.ಪಿ. ದಿನೇಶ್ ಕುಮಾರ್ ಐ.ಪಿ.ಎಸ್. ಹಾಗೂ ಅವರ SWAT ತಂಡದ ಸಹಭಾಗಿತ್ವದಲ್ಲಿ ಸಂಶಯಿತ ಆರೋಪಿ ಸ್ವಾಮಿನಾಥ ನಿಶಾದ ಪ್ರಾಯ 38 ವರ್ಷ ತಂದೆ ವಿಜಯ ನಿಶಾದ ವಾಸ: ಚಾರ್ಪನ್ ಬುಹುರಾಗ್‌ಗ್ರಾಮ, ದವರಪ್‌ಅಂಚೆ, ಗೋರುರ ಜಿಲ್ಲೆ, ಉತ್ತರ ಪ್ರದೇಶ ಎಂಬಾತನನ್ನು ಗೋರುರದಲ್ಲಿ ಬಂಧಿಸಿ ವಿಚಾರಣೆ ನಡೆಸಲಾಗಿದ್ದು, ಈ ಪ್ರಕರಣಕ್ಕೆ ಮೃತಳ ಗಂಡ ರಾಮಕೃಷ್ಣ ಎಂಬಾತನು ಸುಪಾರಿ ನೀಡಿದ ಮಾಹಿತಿಯಂತೆ, ಆರೋಪಿ ರಾಮಕೃಷ್ಣನನ್ನು ಬ್ರಹ್ಮಾವರ ವೃತ್ತ ನಿರೀಕ್ಷಕರಾದ ಅನಂತ ಪದ್ಮನಾಭ ಹಾಗೂ ಗುರುನಾಥ ಬಿ ಹಾದಿಮನಿ, ಪಿ.ಎಸ್.ಐ ರವರ ತಂಡವು ಜುಲಾಯಿ 19ರಂದು ಬೈಂದೂರು ತಾಲೂಕಿನ ಉಪ್ಪುಂದದಲ್ಲಿ ವಶಕ್ಕೆ ಪಡೆದು ವಿಚಾರಿಸಿದಾಗ ಕಳೆದ 6 ತಿಂಗಳಿನಿಂದ ಸಂಚು ನಡೆಸಿ ಸುಪಾರಿ ಹಂತಕರಿಗೆ ಸುಮಾರು 2 ಲಕ್ಷಕ್ಕಿಂತ ಮಿಕ್ಕಿ ಹಣ ನೀಡಿ ದುಬೈಯಲ್ಲಿ ಕುಳಿತು ಪ್ಲಾನ್‌ಮಾಡಿ ದಿನಾಂಕ 12/07/2021 ರಂದು ಹಂತಕರನ್ನು ಮನೆಗೆ ಕಳುಹಿಸಿ ಕೊಲೆ ಮಾಡಿಸಿದ ವಿಚಾರ ಈ ವರೆಗಿನ ತನಿಖೆಯಿಂದ ತಿಳಿದು ಬಂದಿದೆ.

ಕಾರ್ಯಾಚರಣೆಯಲ್ಲಿ ಅನಂತಪದ್ಮನಾಭ, ಸಿ.ಪಿ.ಐ., ಬ್ರಹ್ಮಾವರ, ಮಂಜುನಾಥ ಪಿ.ಐ. ಮಣಿಪಾಲ, ಶರಣಗೌಡ, ಸಿಪಿಐ, ಮಲ್ಪೆ ವೃತ್ತ, ಪ್ರಮೋದ್ ಪಿ.ಐ, ಉಡುಪಿ ನಗರ ಠಾಣೆ, ಸಂಪತ್ ಕುಮಾರ್ ಎ, ಸಿಪಿಐ ಕಾರ್ಕಳ, ಗುರುನಾಥ ಬಿ ಹಾದಿಮನಿ, ಪಿ.ಎಸ್.ಐ ಬ್ರಹ್ಮಾವರ, ಮಧು ಪಿ.ಎಸ್.ಐ ಕಾರ್ಕಳ ನಗರ, ರಾಘವೇಂದ್ರ ಪಿ.ಎಸ್.ಐ ಕಾಪು, ಶ್ರೀಧರ ನಾಯ್ಕ, ಪಿ.ಎಸ್.ಐ, ಶಂಕರನಾರಾಯಣ ಠಾಣೆ, ಕೆ.ಆರ್ ಸುನಿತಾ, ಮ.ಪಿ.ಎಸ್.ಐ ಬ್ರಹ್ಮಾವರ, ಸಂತೋಷ ಬಿ.ಪಿ, ಪಿ.ಎಸ್.ಐ ಕೋಟ, ಕೃಷ್ಣಪ್ಪ ಎ.ಎಸ್.ಐ, ಬ್ರಹ್ಮಾವರ ವೃತ್ತ ಕಛೇರಿ, ಎ.ಎಸ್.ಐ ರವರಾದ ಗೋಪಾಲ ಪೂಜಾರಿ, ನಾರಾಯಣ ಕೆ.ಎಸ್. ಸುಂದರ, ಬ್ರಹ್ಮಾವರ ಠಾಣೆ ಹಾಗೂ ಸಿಬ್ಬಂದಿಯವರಾದ ಚಂದ್ರ ಶೆಟ್ಟಿ, ವೆಂಕಟರಮಣ ದೇವಾಡಿಗ, ಪ್ರವೀಣ ಶೆಟ್ಟಿಗಾರ್, ಪ್ರದೀಪ್‌ನಾಯಕ, ಸತೀಶ, ವಾಸುದೇವ ಪೂಜಾರಿ, ಅಶೋಕ ಮೆಂಡನ್, ರಾಘವೇಂದ್ರ, ಸಂತೋಷ ಶೆಟ್ಟಿ, ಗಣೇಶ ದೇವಾಡಿಗ, ಸಬಿತಾ, ಜ್ಯೋತಿ ಎಂ, ಶಾಂಭವಿ, ಮೊಹಮ್ಮದ್ ಅಲ್, ದಿಲೀಪ್ ಕುಮಾರ್, ರವೀಂದ್ರ ಹೆಚ್, ಪ್ರಕಾಶ, ಬಸೀರ್, ಸಂದೀಪ್‌ಪಿ.ಕೆ, ವಿಕ್ರಂ, ನೇತ್ರಾವತಿ, ಅಪೂರ್ವ, ಜಿಲ್ಲಾ ಪೊಲೀಸ್ ಕಛೇರಿಯ ತಾಂತ್ರಿಕ ತಂಡದ ಸಿಬ್ಬಂದಿಯವರಾದ ಶಿವಾನಂದ, ದಿನೇಶ, ನಿತಿನ್ ಹಾಗೂ ಚಾಲಕರಾದ ಶೇಖರ್, ಸಂತೋಷ ಪೂಜಾರಿ ಮತ್ತು ಅಣ್ಣಪ್ಪ ರವರಗಳು ಕೊಲೆ ಪ್ರಕರಣವನ್ನು ಬೇಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿರುತ್ತಾರೆ.

ನಗದು ಬಹುಮಾನ: ಪ್ರಕರಣವನ್ನು ಯಶಸ್ವಿಯಾಗಿ ಬೇಧಿಸಿದ ಪೊಲೀಸರ ತಂಡಕ್ಕೆ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ರೂ. 50,000 ನಗದು ಬಹುಮಾನ ಮತ್ತು ತಂಡದಲ್ಲಿದ್ದ ಎಲ್ಲಾ ಪೊಲೀಸರಿಗೆ ಪ್ರಶಂಸಾ ಪತ್ರವನ್ನು ಘೋಷಿಸಿದ್ದಾರೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಇತಿಹಾಸದ ಅವಲೋಕನ ಬದುಕಿನ ಪುನರ್ ವಿಮರ್ಶೆಗೆ ಸಹಾಯಕ: ಶಬಾನ್ ಅಂಜುಮ್

ಕೋಟ, ನ.22: ಇತಿಹಾಸದ ಪಿತಾಮಹ ಹೆರೋಡಟಸ್ ಸಂಸ್ಕೃತಿಗಳ ತಿಳಿಯಲು ಒಂದು ಉತ್ತಮ...

ಆನಂದತೀರ್ಥ: ವಾರ್ಷಿಕ ಕ್ರೀಡಾಕೂಟ

ಕಟಪಾಡಿ, ನ.22: ಪೇಜಾವರ ಮಠದ ಆಡಳಿತಕ್ಕೊಳಪಟ್ಟ ಪಾಜಕ ಆನಂದತೀರ್ಥ ಪ.ಪೂ ಕಾಲೇಜು...

ಸಾಂಸ್ಕೃತಿಕ ಸ್ಪರ್ಧೆ: ಮಣಿಪಾಲ ಜ್ಞಾನಸುಧಾದ ವಿದ್ಯಾರ್ಥಿಗಳ ಅಮೋಘ ಸಾಧನೆ

ಉಡುಪಿ, ನ.22: ಕರ್ನಾಟಕ ರಾಜ್ಯ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಮತ್ತು ಶಾಲಾ ಶಿಕ್ಷಣ...

ಅರುಣ್ಯಾ 2024: ಭಂಡಾರಕಾರ್ಸ್ ಪಿಯು ಕಾಲೇಜು ತಂಡ ಚಾಂಪಿಯನ್

ಬಸ್ರೂರು, ನ.22: ಶ್ರೀ ಶಾರದಾ ಕಾಲೇಜು ಬಸ್ರೂರು ಇಲ್ಲಿ ಉಡುಪಿ ಜಿಲ್ಲಾಮಟ್ಟದ...
error: Content is protected !!