ನವದೆಹಲಿ: ದೇಶದ ಬಾಹ್ಯಾಕಾಶ ಅಭಿವೃದ್ಧಿ ಕಾರ್ಯಕ್ರಮದ ಚುಕ್ಕಾಣಿ ಹಿಡಿದಿರುವ ಮೊದಲ ಖಾಸಗಿ ರಾಕೆಟ್ ವಿಕ್ರಮ್-ಎಸ್ ಯಶಸ್ವಿಯಾಗಿ ಉಡಾವಣೆಗೊಂಡಿದೆ. ‘ಮಿಷನ್ ಪ್ರಾರಂಭ್’ ಅಡಿಯಲ್ಲಿ ಹೈಪರ್ಸಾನಿಕ್ ರಾಕೆಟ್ ವಿಕ್ರಮ್ ಎಸ್’ನ್ನ ನೂತನ ರಾಕೆಟ್ ನ್ನು ಇಸ್ರೋ ಸಹಾಯದಿಂದ ಉಡಾವಣೆ ಮಾಡಲಾಯಿತು. ಶ್ರೀಹರಿಕೋಟಾದ ಬಾಹ್ಯಾಕಾಶ ನಿಲ್ದಾಣದಿಂದ ಈ ಹಾರಾಟವನ್ನ ನಡೆಸಲಾಗಿದ್ದು ತನ್ಮೂಲಕ ಖಾಸಗಿ ಕಂಪನಿಗಳು ಭಾರತದಲ್ಲಿ ಬಾಹ್ಯಾಕಾಶ ಕ್ಷೇತ್ರದಲ್ಲಿ ಸಾಧನೆ ಮಾಡಿದೆ. ಹೈದರಾಬಾದ್‌ನ ಖಾಸಗಿ ಕಂಪನಿಯಾದ ಸ್ಕೈರೂಟ್ ಏರೋಸ್ಪೇಸ್ ವಿಕ್ರಮ್ ಎಸ್ ರಾಕೆಟ್’ನ್ನ ಉಡಾವಣೆ ಮಾಡಿದೆ.
ನೂತನ ರಾಕೆಟ್ ಹೀಗಿದೆ: ನೂತನ ರಾಕೆಟ್ ವಿಕ್ರಮ್-ಎಸ್ 545 ಕೆಜಿ ತೂಕವಿದ್ದು, 6 ಮೀಟರ್ ಉದ್ದ ಮತ್ತು 0.375 ಮೀಟರ್ ವ್ಯಾಸವನ್ನ ಹೊಂದಿದೆ. ನೂತನ ರಾಕೆಟ್ ನಲ್ಲಿ ಏಳು ಟನ್ ಬೆಳೆ ನಿರ್ವಾತ ಥ್ರಸ್ಟ್’ನ್ನ ಬಳಸಲಾಗಿದೆ.