ಮೂಡುಬಿದಿರೆ, ಏ.6: ಮಹಾರಾಷ್ಟ್ರದ ಮುರ್ತಿಝಾಬಾದ್‌ನಲ್ಲಿ ನಡೆದ 67ನೇ ರಾಷ್ಟ್ರೀಯ ಜೂನಿಯರ್ ಬಾಲ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕ ಬಾಲಕ ಮತ್ತು ಬಾಲಕಿಯರ ಎರಡೂ ತಂಡ ರನ್ನರ್ಸ್ ಅಪ್ ಆಗಿ ಹೊರಹೊಮ್ಮಿದೆ. ಬಾಲಕ ವಿಭಾಗದ ಕ್ವಾರ್ಟರ್ ಫೈನಲ್ ನಲ್ಲಿ ಕರ್ನಾಟಕ ಬಾಲಕರ ತಂಡ ತೆಲಂಗಾಣ ತಂಡವನ್ನು 35-25, 35-22 ಅಂಕಗಳಿಂದ ಮಣಿಸಿದ್ದರಲ್ಲದೆ, ಸೆಮಿಫೈನಲ್ ನಲ್ಲಿ ಕರ್ನಾಟಕ ಬಾಲಕರ ತಂಡ ಆಂಧ್ರಪ್ರದೇಶ ತಂಡವನ್ನು 21-35, 35-31, 35-22 ಅಂಕಗಳಿಂದ ಸೋಲಿಸಿ ಫೈನಲ್ಸ್ ಹಂತಕ್ಕೆ ಅರ್ಹತೆಯನ್ನು ಪಡೆದುಕೊಂಡರು.
ಫೈನಲ್ ನಲ್ಲಿ ಕರ್ನಾಟಕ ತಂಡ ತಮಿಳುನಾಡು ವಿರುದ್ಧ 26-35, 32-35 ಅಂಕಗಳಿಂದ ಪರಾಭವಗೊಂಡು ರನ್ನರ್ಸ್ ಅಪ್ ಪ್ರಶಸ್ತಿ ಪಡೆದುಕೊಂಡರು. ಬಾಲಕಿಯರ ವಿಭಾಗದ ಕ್ವಾರ್ಟರ್ ಫೈನಲ್ ನಲ್ಲಿ ಕರ್ನಾಟಕ ಬಾಲಕಿಯರ ತಂಡ ರಾಜಸ್ಥಾನ ತಂಡವನ್ನು 35-16, 35—21 ಅಂಕಗಳಿಂದ ಮಣಿಸಿದ್ದರಲ್ಲದೆ, ಸೆಮಿಫೈನಲ್ ನಲ್ಲಿ ಕರ್ನಾಟಕ ಬಾಲಕಿಯರ ತಂಡ ಬಿಹಾರ ತಂಡವನ್ನು 35-21, 35-18 ಅಂಕಗಳಿಂದ ಸೋಲಿಸಿ ಫೈನಲ್ಸ್ ಹಂತಕ್ಕೆ ಅರ್ಹತೆಯನ್ನು ಪಡೆದುಕೊಂಡರು.
ಫೈನಲ್ ನಲ್ಲಿ ಕರ್ನಾಟಕ ತಂಡ ತಮಿಳುನಾಡು ವಿರುದ್ಧ 18-35, 26-35 ಅಂಕಗಳಿಂದ ಪರಾಭವಗೊಂಡು ರನ್ನರ್ಸ್ ಅಪ್ ಪ್ರಶಸ್ತಿ ಪಡೆದುಕೊಂಡರು. ಬಾಲಕರ ತಂಡದ ಮನೋಜ್ ಹಾಗೂ ಬಾಲಕಿಯರ ತಂಡದ ಲತಾಶ್ರೀ ‘ಸ್ಟಾರ್‌ಆಫ್‌ಇಂಡಿಯಾ’ ಪ್ರಶಸ್ತಿ ಪಡೆದುಕೊಂಡರು.