ಆಗ್ರಾ: ಆಗ್ರಾದ ಮೊಘಲ್ ರಸ್ತೆಯನ್ನು ಗುರುವಾರ ಮಹಾರಾಜ ಅಗ್ರಸೇನ್ ಮಾರ್ಗ ಎಂದು ಮರುನಾಮಕರಣ ಮಾಡಲಾಯಿತು. ಮುಂಬರುವ ಪೀಳಿಗೆಯು ಪ್ರಮುಖ ವ್ಯಕ್ತಿಗಳಿಂದ ಸ್ಫೂರ್ತಿ ಪಡೆಯಬೇಕು ಎಂದು ಆಗ್ರಾ ಮೇಯರ್ ನವೀನ್ ಜೈನ್ ಮರುನಾಮಕರಣದ ನಿರ್ಧಾರದ ಕುರಿತು ರಾಷ್ಟ್ರೀಯ ಸುದ್ಧಿವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಮಹಾರಾಜ ಅಗ್ರಸೇನ್ ವ್ಯಾಪಾರಿಗಳ ನಗರವಾಗಿದ್ದ ಅಗ್ರೋಹದ ರಾಜನಾಗಿದ್ದನು. ಈ ಹಿಂದೆ ಸುಲ್ತಾನ್ ಗಂಜ್ ಪುಲಿಯ ರಸ್ತೆಗೆ ದಿವಂಗತ ಸತ್ಯ ಪ್ರಕಾಶ್ ವಿಕಲ್ ಅವರ ಹೆಸರನ್ನು ಇಡಲಾಗಿದೆ. ಆಗ್ರಾದ ಘಾಟಿಯಾ ಅಜಂ ಖಾನ್ ರಸ್ತೆಗೆ ವಿಶ್ವ ಹಿಂದೂ ಪರಿಷತ್ ನಾಯಕ ದಿವಂಗತ ಅಶೋಕ್ ಸಿಂಘಾಲ್ ಹೆಸರಿಡಲಾಗಿದೆ.