Wednesday, March 4, 2026
Wednesday, March 4, 2026

ವಿಕಸಿತ ಭಾರತದ ಪಯಣದಲ್ಲಿ ‘ಸೇವಾ ತೀರ್ಥ’ ಪ್ರಮುಖ ಮೈಲಿಗಲ್ಲು: ಪ್ರಧಾನಿ ನರೇಂದ್ರ ಮೋದಿ

ವಿಕಸಿತ ಭಾರತದ ಪಯಣದಲ್ಲಿ ‘ಸೇವಾ ತೀರ್ಥ’ ಪ್ರಮುಖ ಮೈಲಿಗಲ್ಲು: ಪ್ರಧಾನಿ ನರೇಂದ್ರ ಮೋದಿ

Date:

ನವದೆಹಲಿ, ಫೆ.14: ಪ್ರಧಾನ ಮಂತ್ರಿಗಳ ಕಚೇರಿ (ಪಿಎಂಒ) ಮತ್ತು ಕೇಂದ್ರ ಸಚಿವಾಲಯದ ಗುರುತು ಹೊಂದಿರುವ ಹೊಸ ಕಟ್ಟಡಗಳು ವಿಕಸಿತ್ ಭಾರತದ ಪಯಣದಲ್ಲಿ ಒಂದು ಪ್ರಮುಖ ಮೈಲಿಗಲ್ಲು ಮತ್ತು ಅವು ನಾಗರಿಕ ಕೇಂದ್ರಿತ ಆಡಳಿತ ಮತ್ತು ರಾಷ್ಟ್ರೀಯ ಪ್ರಗತಿಗೆ ಸರ್ಕಾರದ ಬದ್ಧತೆಯನ್ನು ಪ್ರತಿಬಿಂಬಿಸುತ್ತವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಪ್ರಧಾನಿ ಕಚೇರಿ ಸೇವಾ ತೀರ್ಥ ಮತ್ತು ಕೇಂದ್ರ ಸಚಿವಾಲಯದ ಎರಡು ಕಟ್ಟಡಗಳಾದ ಕರ್ತವ್ಯ ಭವನ 1 ಮತ್ತು 2 ಉದ್ಘಾಟಿಸಿ ಅವರು ಮಾತನಾಡಿದರು.

ಬ್ರಿಟಿಷ್ ಯುಗದಲ್ಲಿ ನಿರ್ಮಿಸಲಾದ ಸೌತ್ ಬ್ಲಾಕ್ ಮತ್ತು ನಾರ್ತ್ ಬ್ಲಾಕ್‌ನಿಂದ ಸ್ಥಳಾಂತರಗೊಂಡಿದ್ದು ವಸಾಹತುಶಾಹಿ ಮನಸ್ಥಿತಿಯ ಪ್ರತಿಯೊಂದು ಕುರುಹುಗಳನ್ನು ತೆಗೆದುಹಾಕಲು ಅತ್ಯಗತ್ಯ ಎಂದು ಹೇಳಿದರು.

ಕಳೆದ 11 ವರ್ಷಗಳಲ್ಲಿ ಹೊಸ ಮಾದರಿಯ ಆಡಳಿತ ಹೊರಹೊಮ್ಮಿದೆ ಎಂದು ಮೋದಿ ಹೇಳಿದರು, ಈ ವ್ಯವಸ್ಥೆಯಲ್ಲಿ ನಾಗರಿಕನು ನಿರ್ಧಾರ ತೆಗೆದುಕೊಳ್ಳುವ ಕೇಂದ್ರದಲ್ಲಿದ್ದಾನೆ.

ನಾಗರಿಕ ದೇವೋ ಭವ )ನಾಗರಿಕ ದೇವರಿಗೆ ಸಮಾನ) ಎಂಬುದು ಕೇವಲ ಒಂದು ಪದಗುಚ್ಛವಲ್ಲ, ಬದಲಾಗಿ ಕೆಲಸದ ಸಂಸ್ಕೃತಿಯಾಗಿದ್ದು, ಅಧಿಕಾರಿಗಳು ಈ ಹೊಸ ಕಟ್ಟಡಗಳನ್ನು ಪ್ರವೇಶಿಸುವಾಗ ಅದನ್ನು ಅಳವಡಿಸಿಕೊಳ್ಳಬೇಕು ಎಂದು ಪ್ರಧಾನಿ ಹೇಳಿದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಮಧ್ಯಪ್ರಾಚ್ಯ ದೇಶಗಳಲ್ಲಿ ಬಿಕ್ಕಟ್ಟು: ಉಡುಪಿ ಜಿಲ್ಲೆಯ ಪ್ರಯಾಣಿಕರ ನೆರವಿಗಾಗಿ ಸಹಾಯವಾಣಿ

ಉಡುಪಿ, ಮಾ.2: ಮಧ್ಯಪ್ರಾಚ್ಯದ ಕೆಲವು ದೇಶಗಳಲ್ಲಿ ಪ್ರಚಲಿತದಲ್ಲಿರುವ ಅಸ್ಥಿರ ಪರಿಸ್ಥಿತಿಯಿಂದಾಗಿ ಅಂತರಾಷ್ಟ್ರೀಯ...

ಯೋಜನಾ ವರದಿ ಕಾರ್ಯಾಗಾರ

ಹಿರಿಯಡಕ, ಮಾ.2: ಆಂತರಿಕ ಗುಣಮಟ್ಟ ಭರವಸಾ ಕೋಶ ಮತ್ತು ರಾಜ್ಯಶಾಸ್ತ್ರ ವಿಭಾಗದ...
error: Content is protected !!